ಲಂಡನ್:ಗುರುವಾರ ನಡೆದ ಬ್ರಿಟನ್​ನ ಸಾರ್ವತ್ರಿಕ ಚುನಾವಣೆಗಳಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಅದ್ಭುತ ಜಯಭೇರಿ ಬಾರಿಸಿದ್ದು ಭಾರತೀಯ ಮೂಲದ ನಿರ್ಗಮನ ಪ್ರಧಾನಿ ರಿಷಿ ಸುನಕ್ ಸೋಲೊಪ್ಪಿಕೊಂಡಿದ್ದಾರೆ. ಸುನಕ್ ಅವರ ಕನ್ಸರ್ವೆಟಿವ್ ಪಕ್ಷ, ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲನ್ನು ಅನುಭವಿಸಿದ್ದು ಮತ್ತೆ ಲೇಬರ್ ಪಕ್ಷದ ಯುಗಾರಂಭವಾಗಿದೆ. ಬಹುಮತಕ್ಕೆ ಅಗತ್ಯವಾದ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಿಸಿರುವ ಲೇಬರ್ ಪಕ್ಷದ ನಾಯಕ ಸ್ಟಾರ್ಮರ್ ದೇಶದ ನಿಯೋಜಿತ ಪ್ರಧಾನಿಯಾಗಿ ಆಯ್ಕೆಯಾಗಿದ್ದು ‘ರಾಷ್ಟ್ರೀಯ ಪುನರುಜ್ಜೀವನ’ದ ಭರವಸೆ ನೀಡಿದ್ದಾರೆ.
61 ವರ್ಷದ ಸ್ಟಾರ್ಮರ್, ದೊರೆ ತೃತೀಯ ಚಾರ್ಲ್ಸ್ ಅವರನ್ನು ಭೇಟಿಯಾದ ನಂತರ 10 ಡೌನಿಂಗ್ ಸ್ಟ್ರೀಟ್​ನಲ್ಲಿ ಕಾರ್ಯಭಾರ ಆರಂಭಿಸಲಿದ್ದಾರೆ. ನಿರ್ಗಮನ ಪ್ರಧಾನ ಮಂತ್ರಿ ಸುನಕ್ ದೊರೆಯನ್ನು ಭೇಟಿ ಮಾಡಿದ ನಂತರ ಸ್ಟಾರ್ಮರ್ ಜತೆೆ ಸಮಾಲೋಚನೆ ನಡೆಸಲಿದ್ದಾರೆ.

ಶುಕ್ರವಾರ ಬೆಳಗ್ಗೆ ಫಲಿತಾಂಶ ಪ್ರಕಟಗೊಳ್ಳಲು ಆರಂಭವಾದ ನಂತರ, ಒಟ್ಟು 650 ಕ್ಷೇತ್ರಗಳಲ್ಲಿ ಸರ್ಕಾರ ರಚನೆಗೆ ಅಗತ್ಯವಾದ ಕನಿಷ್ಠ 326 ಸ್ಥಾನಗಳಲ್ಲಿ ಗೆಲವು ಸಾಧಿಸಿ ಲೇಬರ್ ಪಕ್ಷ ಮುನ್ನಡೆದಿತ್ತು. ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅದು ಸ್ಪಷ್ಟ ಬಹುಮತ ಸಾಧಿಸಿದೆ. ಇದರೊಂದಿಗೆ ಸಮಾನತೆಯ ನೀತಿ ಪ್ರತಿಪಾದಿಸುವ ಮಧ್ಯ-ಎಡಪಂಥೀಯರು ಬ್ರಿಟನ್​ನ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಅರವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಮಾಲೆ ಧರಿಸುವುದರೊಂದಿಗೆ ಲಿಬರಲ್ ಡೆಮಾಕ್ರಾಟ್ ಪಕ್ಷ ಕೂಡ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದೆ.
ಬದಲಾವಣೆಯ ಆರಂಭ:ದೇಶದ ಚುಕ್ಕಾಣಿ ಹಿಡಿಯುವುದು ಖಚಿತವಾಗುತ್ತಿದ್ದಂತೆ ಸ್ಟಾರ್ಮರ್ ವಿಜಯೋತ್ಸವ ಭಾಷಣ ಮಾಡಿ, ‘ಪರಿವರ್ತನೆಯ ಪರ್ವ ಇದೀಗ ಆರಂಭವಾಗಿದೆ’ ಎಂದು ಘೋಷಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ತಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ‘ಇಂಥ ಜನಾದೇಶದೊಂದಿಗೆ ಹೊಣೆಗಾರಿಕೆಯೂ ಬರುತ್ತದೆ. ನಮ್ಮ ಕಾರ್ಯಭಾರವು ಈ ದೇಶವನ್ನು ಒಟ್ಟಿಗೆ ಹಿಡಿದಿಡುವ ಚಿಂತನೆಗಳನ್ನು ಪುನಶ್ಚೇತನಗೊಳಿಸುವುದಕ್ಕಿಂತ ಕಡಿಮೆಯದ್ದೇನೂ ಅಲ್ಲ. ರಾಷ್ಟ್ರೀಯ ಪುನರುಜ್ಜೀವನ ಆಗಬೇಕಿದೆ’ ಎಂದು ಸ್ಟಾರ್ಮರ್ ಹೇಳಿದರು.
ಪರಿಶ್ರಮದಿಂದ ದುಡಿದರೆ ಹಾಗೂ ಕಾನೂನುಗಳನ್ನು ಪಾಲಿಸಿದರೆ ದೇಶ ನಿಮಗೆ ಸೂಕ್ತ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದ ಸ್ಟಾರ್ಮರ್, ‘ದೇಶ ನಿಮ್ಮ ಕೊಡುಗೆಯನ್ನು ಗೌರವಿಸಬೇಕು. ನಾವು ಅದನ್ನು ಮರುಸ್ಥಾಪಿಸಬೇಕಿದೆ’ ಎಂದು ದೇಶಬಾಂಧವರಿಗೆ ಭರವಸೆ ಕೊಟ್ಟರು.
ಮರುನಿರ್ವಣಕ್ಕೆ ಸಂಕಲ್ಪ:ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಶುಕ್ರವಾರ ದೊರೆ ತೃತೀಯ ಚಾರ್ಲ್ಸ್ ಜತೆ ಸಮಾಲೋಚಿಸಿದ ಬೆನ್ನಲ್ಲೇ ಬ್ರಿಟನ್​ನ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದಕ್ಕೂ ಮುನ್ನ, ನಿರ್ಗಮನ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮ ಸಲ್ಲಿಸಿದರು. ಪತ್ನಿ ವಿಕ್ಟೋರಿಯಾ ಜತೆ ಕೀರ್ ಸ್ಟಾರ್ಮರ್ ಬಂಕಿಂಗ್​ಹ್ಯಾಮ್ ಅರಮನೆಗೆ ಆಗಮಿಸಿ ದೊರೆ ಚಾರ್ಲ್ಸ್ ಅವರನ್ನು ಭೇಟಿಯಾದರು. ಕೀರ್ ಸ್ಟಾರ್ಮರ್ ಬ್ರಿಟನ್​ನ 58ನೇ ಹಾಗೂ ಲೇಬರ್ ಪಕ್ಷದಿಂದ ಆಯ್ಕೆ ಆದ 7ನೇ ಪ್ರಧಾನಿಯಾಗಿದ್ದಾರೆ. ‘ಕೈಗಳಿಗೆ ಚುಂಬನ’ (ಕಿಸ್ಸಿಂಗ್ ಆಫ್ ಹ್ಯಾಂಡ್ಸ್) ಎಂದು ಪ್ರಖ್ಯಾತವಾದ ಸಮಾರಂಭದಲ್ಲಿ ಹೊಸ ಸರ್ಕಾರ ರಚಿಸಲು ಸ್ಟಾರ್ಮರ್​ಗೆ ದೊರೆ ಚಾರ್ಲ್ಸ್ ಆಶೀರ್ವದಿಸಿದರು. ಹಲವು ಸವಾಲುಗಳ ನಡುವೆ ಬ್ರಿಟನ್​ನ ನೂತನ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಸ್ಟಾರ್ಮರ್, ದೇಶದ ಮರುನಿರ್ವಣಕ್ಕೆ ಸಂಕಲ್ಪ ಕೈಗೊಂಡರು. ಅಧಿಕೃತವಾಗಿ ಪ್ರಧಾನಿಯಾದ ಬಳಿಕ ಪ್ರಥಮ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಸ್ಟಾರ್ಮರ್, ‘ನಮ್ಮ ಕೆಲಸ ತುರ್ತಿನದ್ದಾಗಿದೆ. ಇಂದೇ ಅದನ್ನು ಆರಂಭಿಸುತ್ತೇವೆ’ ಎಂದರು.
ಸೋಲಿಗೆ ಹೊಣೆ ಯಾರು?:ಸುನಕ್ ಅವರ ಪೂರ್ವಾಧಿಕಾರಿ ಲಿಝå್ ಟ್ರಸ್ ಮತ್ತು ಸಂಪುಟದ ಕೆಲವು ಪ್ರಮುಖ ಸಚಿವರು ಟೋರಿಗಳ ಹೀನಾಯ ಸೋಲಿಗೆ ಬಹುತೇಕ ಹೊಣೆಯೆಂದು ವಿಶ್ಲೇಷಿಸಲಾಗುತ್ತಿದೆ. ಟ್ರಸ್ 2023ರಲ್ಲಿ ಅಲ್ಪ ಕಾಲ ಪ್ರಧಾನಿಯಾಗಿದ್ದ ವೇಳೆ ಅನುಸರಿಸಿದ ನೀತಿಗಳು ಮತ್ತು ಅವರು ಮಂಡಿಸಿದ ವಿನಾಶಕಾರಿ ಮಿನಿ-ಬಜೆಟ್ ಭಾರಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಗುರುವಾರದ ಚುನಾವಣೆಯ ಜನಾದೇಶ ಕನ್ಸರ್ವೆಟಿವ್​ಗಳಿಗೆ ‘ರಕ್ತಪಾತ’ದ ಫಲಿತಾಂಶವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಂಟ್ ಶಾರ್ಪ್ಸ್, ಪೆನ್ನಿ ಮಾರ್ಡಂಟ್ ಮತ್ತು ಜೇಕಬ್ ರೀಸ್ ಮಾಗ್ ಮುಂತಾದ ಟೋರಿ ಹೆವಿವೇಯ್್ಟಳು ಚುನಾವಣೆಯಲ್ಲಿ ಮಣ್ಣು ಮುಕ್ಕಿದ್ದಾರೆ.
ಕೀರ್​ಗೆ ಪ್ರಧಾನಿ ಮೋದಿ ಅಭಿನಂದನೆ:ಬ್ರಿಟನ್ ಚುನಾವಣೆಗಳಲ್ಲಿ ಅದ್ಭುತ ಜಯ ಸಾಧಿಸಿದ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತ-ಬ್ರಿಟನ್​ಗಳ ಮಹತ್ವದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಧನಾತ್ಮಕ ಹಾಗೂ ರಚನಾತ್ಮಕ ಸಹಯೋಗವನ್ನು ತಾವು ಎದುರು ನೋಡುವುದಾಗಿ ಅಭಿನಂದನಾ ಸಂದೇಶದಲ್ಲಿ ಮೋದಿ ಹೇಳಿದ್ದಾರೆ.

ಸುನಕ್​ಗೆ ಮೆಚ್ಚುಗೆ:ನಿಯೋಜಿತ ಪ್ರಧಾನಿ ಸ್ಟಾರ್ಮರ್ ಅವರನ್ನು ಅಭಿನಂದಿಸುವ ಜತೆ ಜತೆಯಲ್ಲಿ ಮೋದಿ ಬ್ರಿಟನ್​ನ ನಿರ್ಗಮನ ಪ್ರಧಾನಿ ರಿಷಿ ಸುನಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಿಟನ್​ಗೆ ಪ್ರಶಂಸನೀಯ ನಾಯಕತ್ವ ಒದಗಿಸಿದ್ದೀರೆಂದು ಸುನಕ್ ಅವರನ್ನು ಶ್ಲಾಘಿಸಿರುವ ಮೋದಿ, ಸುನಕ್ ತಮ್ಮ ಅಧಿಕಾರಾವಧಿಯಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ಆಳಗೊಳ್ಳಲು ಸಕ್ರಿಯ ಕೊಡುಗೆ ನೀಡಿದ್ದಾರೆಂದು ಹೇಳಿದ್ದಾರೆ.
ಮರುನಿರ್ವಣಕ್ಕೆ ಸಂಕಲ್ಪ:ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಶುಕ್ರವಾರ ದೊರೆ ತೃತೀಯ ಚಾರ್ಲ್ಸ್ ಜತೆ ಸಮಾಲೋಚಿಸಿದ ಬೆನ್ನಲ್ಲೇ ಬ್ರಿಟನ್​ನ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದಕ್ಕೂ ಮುನ್ನ, ನಿರ್ಗಮನ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮ ಸಲ್ಲಿಸಿದರು. ಪತ್ನಿ ವಿಕ್ಟೋರಿಯಾ ಜತೆ ಕೀರ್ ಸ್ಟಾರ್ಮರ್ ಬಂಕಿಂಗ್​ಹ್ಯಾಮ್ ಅರಮನೆಗೆ ಆಗಮಿಸಿ ದೊರೆ ಚಾರ್ಲ್ಸ್ ಅವರನ್ನು ಭೇಟಿಯಾದರು. ಕೀರ್ ಸ್ಟಾರ್ಮರ್ ಬ್ರಿಟನ್​ನ 58ನೇ ಹಾಗೂ ಲೇಬರ್ ಪಕ್ಷದಿಂದ ಆಯ್ಕೆ ಆದ 7ನೇ ಪ್ರಧಾನಿಯಾಗಿದ್ದಾರೆ. ‘ಕೈಗಳಿಗೆ ಚುಂಬನ’ (ಕಿಸ್ಸಿಂಗ್ ಆಫ್ ಹ್ಯಾಂಡ್ಸ್) ಎಂದು ಪ್ರಖ್ಯಾತವಾದ ಸಮಾರಂಭದಲ್ಲಿ ಹೊಸ ಸರ್ಕಾರ ರಚಿಸಲು ಸ್ಟಾರ್ಮರ್​ಗೆ ದೊರೆ ಚಾರ್ಲ್ಸ್ ಆಶೀರ್ವದಿಸಿದರು. ಹಲವು ಸವಾಲುಗಳ ನಡುವೆ ಬ್ರಿಟನ್​ನ ನೂತನ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಸ್ಟಾರ್ಮರ್, ದೇಶದ ಮರುನಿರ್ವಣಕ್ಕೆ ಸಂಕಲ್ಪ ಕೈಗೊಂಡರು. ಅಧಿಕೃತವಾಗಿ ಪ್ರಧಾನಿಯಾದ ಬಳಿಕ ಪ್ರಥಮ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಸ್ಟಾರ್ಮರ್, ‘ನಮ್ಮ ಕೆಲಸ ತುರ್ತಿನದ್ದಾಗಿದೆ. ಇಂದೇ ಅದನ್ನು ಆರಂಭಿಸುತ್ತೇವೆ’ ಎಂದರು.
ಲೇಬರ್​ಗೆ 412 ಸ್ಥಾನ: ಅಂತಿಮ ಫಲಿತಾಂಶದ ಪ್ರಕಾರ ಒಟ್ಟು 650 ಸ್ಥಾನಗಳಲ್ಲಿ ಲೇಬರ್ 412 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು ಕನ್ಸರ್ವೆಟಿವ್ ಪಕ್ಷ 121 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಮರ್ಥವಾಗಿದೆ. ಪ್ರಧಾನಿಯಾದ ಮೊದಲ ದಿನವೇ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಸ್ಟಾರ್ಮರ್, ದೇಶ ಎದುರಿಸುತ್ತಿರುವ ಪ್ರಮುಖ ಸವಾಲು ಸಹಿತ ಹಲವು ವಿಷಯ ಕುರಿತು ಮಾಹಿತಿ ಪಡೆದರು.
ಕ್ಷೇತ್ರ ಉಳಿಸಿಕೊಂಡ ಸುನಕ್:14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೆಟಿವ್ ಪಕ್ಷವನ್ನು (ಟೋರಿ) ಮರಳಿ ಅಧಿಕಾರದತ್ತ ಮುನ್ನಡೆಸಲು ವಿಫಲರಾದರೂ ರಿಷಿ ಸುನಕ್ ಉತ್ತರ ಇಂಗ್ಲಂಡ್​ನ ರಿಚ್ಮಂಡ್ ಆಂಡ್ ನಾರ್ತ್ ಅಲರ್ಟನ್ ಕ್ಷೇತ್ರವನ್ನು 23,059 ಮತಗಳ ಅಂತರದಿಂದ ಆರಾಮವಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರದ ಸಾರ್ವತ್ರಿಕ ಚುನಾವಣೆಗಳಲ್ಲಿ 250 ಸ್ಥಾನಗಳನ್ನು ಕಳೆದುಕೊಂಡ ಕನ್ಸರ್ವೆಟಿವ್ ಪಕ್ಷ ಇತಿಹಾಸದಲ್ಲೇ ಅತ್ಯಂತ ಹೀನಾಯ ಪರಾಭವ ಅನುಭವಿಸಿದೆ.

ಪಕ್ಷದ ಸೋಲಿನಿಂದ ಮಂಕಾದಂತೆ ಕಂಡು ಬಂದ ಸುನಕ್ ಸಂಸದರಾಗಿ ಮುಂದುವರಿಯುವುದು ಖಾತರಿಯಾಗಿದ್ದು ಪರಾಭವ ಒಪ್ಪಿಕೊಂಡು ಭಾಷಣ ಮಾಡುವ ಸಂದರ್ಭ ಅವರ ಜತೆ ಪತ್ನಿ ಅಕ್ಷತಾ ಮೂರ್ತಿ ಇದ್ದರು. ಹಿನ್ನಡೆಗೆ ಹೊಣೆ ವಹಿಸಿಕೊಂಡು ಪಕ್ಷದ ನಾಯಕತ್ವದಿಂದ ಕೆಳಗಿಳಿಯುವುದಾಗಿ 44 ವರ್ಷದ ಸುನಕ್ ವಿದಾಯ ಭಾಷಣದಲ್ಲಿ ಘೋಷಿಸಿದರು. ‘ಲೇಬರ್ ಪಕ್ಷ ಈ ಸಾರ್ವತ್ರಿಕ ಚುನಾವಣೆಯನ್ನು ಗೆದ್ದಿದೆ. ಜಯಶಾಲಿ ಸರ್ ಕಿರ್ ಸ್ಟಾರ್ಮರ್​ರನ್ನು ಅಭಿನಂದಿಸಿದ್ದೇನೆ’ ಎಂದು ಸುನಕ್ ಹೇಳಿದರು. ಶಾಂತಿಯುತವಾಗಿ ಹಾಗೂ ಉಭಯ ಕಡೆಗಳ ಸದ್ಭಾವನೆಯೊಂದಿಗೆ ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯಲಿದೆ ಎಂದವರು ಪ್ರಕಟಿಸಿದರು.
ಕ್ಷಮೆ ಕೋರಿಕೆ:ಪ್ರಧಾನಿ ಸ್ಥಾನದಲ್ಲಿದ್ದಷ್ಟೂ ಕಾಲ ತಾವು ಗರಿಷ್ಠ ಶ್ರಮ ಪಟ್ಟಿರುವುದಾಗಿ ಭಾವುಕರಾದ ಸುನಕ್ ಹೇಳಿದರು. ರಾತ್ರಿ ಬೆಳಗಾಗುವುದರೊಳಗಾಗಿ ತಮ್ಮ ಕ್ಷೇತ್ರಗಳನ್ನು ಕಳೆದುಕೊಂಡ ಟೋರಿ ಸಹೋದ್ಯೋಗಿಗಳ ಕ್ಷಮೆಯನ್ನೂ ಯಾಚಿಸಿದರು.
ದೀಪಾವಳಿಯ ನೆನಪು:ಬ್ರಿಟನ್​ನ ಭಾರತೀಯ ಮೂಲದ ಪ್ರಪ್ರಥಮ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಸಂದರ್ಭ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್​ನಲ್ಲಿ ಕುಟುಂಬದವರ ಜತೆ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದನ್ನು ಸುನಕ್ ತಮ್ಮ ವಿದಾಯ ಭಾಷಣದಲ್ಲಿ ಭಾವುಕರಾಗಿ ನೆನಪಿಸಿಕೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 3 =
Remember me
