ನವದೆಹಲಿ: ಕರೊನಾ ಪಿಡುಗು ಹಾಗೂ ಅದರ ಮುಂದುವರಿದ ಹಾವಳಿಯಿಂದಾಗಿ ಬಡತನದ ವಿರುದ್ಧದ ಹೋರಾಟ ಆಪತ್ತಿನಲ್ಲಿದೆ ಎಂಬುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವ ಬ್ಯಾಂಕ್​ ಅಭಿವೃದ್ಧಿ ಸಮಿತಿಯ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವ ನಿರ್ಮಲಾ ಸೀತಾರಾಮನ್​, ‘ನೇಬರ್​ಹುಡ್​ ಫಸ್ಟ್​’ ಪಾಲಿಸಿ ಪ್ರಕಾರ ದಕ್ಷಿಣಾ ಏಷ್ಯಾ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು ಹಾಗೂ ತನ್ನ ಅನುಭವ ಹಂಚಿಕೊಳ್ಳಲು ಭಾರತ ಸಿದ್ಧವಿದೆ ಎಂಬುದಾಗಿ ಅವರು ಹೇಳಿದ್ದಾರೆ.
ನಾವು ಕಳೆದ ಸಲ ಏಪ್ರಿಲ್​ನಲ್ಲಿ ಸಭೆ ಸೇರಿದ್ದಾಗ ಹಾವಳಿ ಇಟ್ಟಿರುವ ಕರೊನಾ ಇನ್ನೂ ಮುಂದುವರಿದಿದ್ದು, ಮುಂದುವರಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳನ್ನೂ ಇದು ಬಾಧಿಸಿದೆ. ಅಲ್ಲದೆ ಬಡತನದ ಮಟ್ಟ ತಗ್ಗಿಸುವಲ್ಲಿ ವರ್ಷಗಳ ಕಾಲ ನಡೆಸಿದ ಪ್ರಯತ್ನ ದೊಡ್ಡ ನಷ್ಟಕ್ಕೀಡಾಗುವ ಆಪತ್ತಿನಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
