ಬಾಗಲಕೋಟೆ:ಬಿಜೆಪಿ ರೈತರ ಶ್ರೇಯೋಭಿವೃದ್ಧಿಯತ್ತ ಚಿಂತಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ತಿಳಿಸಿದರು.
ಬಾಗಲಕೋಟೆಯ ಬಾದಾಮಿಯ ಕೆರಕಲಮಟ್ಟಿಯಲ್ಲಿ ಎಥೆನಾಲ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಾಗಲಕೋಟೆ ಕ್ಷೇತ್ರದ ಪುಣ್ಯಭೂಮಿಗೆ ವಂದಿಸುತ್ತೇನೆ. ಇಲ್ಲಿಯ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ರೈತರಿಗೆ ಕೋಟಿ ಕೋಟಿ ವಂದಿಸುತ್ತೇನೆ. ಮಕರ ಸಂಕ್ರಾಂತಿ ರೈತರ ಪಾಲಿನ ದೊಡ್ಡ ಹಬ್ಬವಾಗಿದ್ದು, ಸೂರ್ಯ ಪಥ ಬದಲಿಸುವ ಸಮಯದಲ್ಲಿ ರೈತರಿಗೆ ಶುಭವಾಗಲಿ ಎಂದರು.
ಇದನ್ನೂ ಓದಿರಿ:ಪಂಚರ್​ ಟೈಯರ್​ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್​! ಅಪಘಾತವಂತೂ ಅಲ್ಲ ​
ಇಂದು ವಿವಿಧ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ. ನಿರಾಣಿ ಗ್ರೂಪಪ್​ ಆಫ್ ಇಂಡಸ್ಟ್ರೀಸ್​ ಸಾಹಸಕ್ಕೆ ಕೈ ಹಾಕಿದೆ. ಮುರುಗೇಶ ನಿರಾಣಿ ಅವರಿಗೆ ಅಭಿನಂದಿಸುತ್ತೇನೆಂದ ಷಾ, ಕರ್ನಾಟಕದ ಜನರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕ ಜನರು ಪ್ರಧಾನಿ ಮೋದಿಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ನಾವು ಅವರಿಗೆ ಆಭಾರಿಯಾಗಿದ್ದೇವೆ. ಮುಂಬೈ ಕರ್ನಾಟಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ ಎಂದರು.
ಇಂದಿ‌ನ ದಿನಮಾನಗಳಲ್ಲಿ ಎಥೆನಾಲ್​ ಉತ್ಪಾದನೆ ಹೆಚ್ಚಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಇದರಿಂದ ಎಲ್ಲರಿಗೂ ಒಳಿತಾಗಲಿದೆ.‌ ಇದು ಮೋದಿಯ ಆತ್ಮನಿರ್ಭರ ಕೆಲಸವಾಗಿದೆ. ಮೋದಿ ಗ್ರೂಪ್​ ಕೂಡ ಎಥೇನಾಲ್​ ಉತ್ಪಾದಿಸುತ್ತಿದೆ. ಎಥೆನಾಲ್​ ಮೇಲೆ 2018ರಲ್ಲಿ ಜಿ.ಎಸ್.ಟಿ ಕೇವಲ 5% ಮಾಡಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ. ತ್ಯಾಜ್ಯದಿಂದಲೂ ಕೂಡ ಎಥೆನಾಲ ಉತ್ಪಾದನೆ ಮಾಡಲು ಪರ್ಮಿಸನ್ ನೀಡಲಾಗಿದೆ. 2025 ರ ಹೊತ್ತಿಗೆ ಎಥೆನಾಲ್​ ಶೆ. 25ರಷ್ಟು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿರಿ:ಹೃತಿಕ್​​- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ
ಮೋದಿಯವರದ್ದು ರೈತರ ಆದಾಯ ಹೆಚ್ಚಿಸುವ ಗುರಿಯಾಗಿದೆ. ಉತ್ತಮ ಅಡಳಿತ ನೀಡುತ್ತಿರುವ ಮೋದಿ, ಈಗ ರೈತರಿಗೆ ನೇರವಾಗಿ ವಿವಿಧ ಯೋಜ‌ನೆಗಳ ಫಲಾನುಭವಿಗಳಿಗೆ ಹಣ ಜಮೆ ಆಗುತ್ತಿದೆ. ಮೋದಿ ಸರ್ಕಾರ 10ಲಕ್ಷ ಕೋಟಿಗೂ ಖರ್ಚು ಮಾಡಿ ರೈತರ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.
ಕರ್ನಾಕದಲ್ಲಿ ಯಡಿಯೂರಪ್ಪ ಕೂಡ ರೈತ ಜನರ ಅಭಿವೃದ್ದಿಗೆ ಯಾವುದೇ ರೀತಿ ಹಿಂದೆ ಬಿದ್ದಿಲ್ಲ. ಕೇಂದ್ರದ ಎಲ್ಲಾ ಯೋಜ‌ನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದಾರೆ ಎಂದು ಯಡಿಯೂರಪ್ಪನವರ ಸರ್ಕಾರದ ಆಡಳಿತವನ್ನ ಷಾ ಹೊಗಳಿದರು.
‘ಏಪ್ರಿಲ್​ ಬಳಿಕ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ತೆಗೆಯುತ್ತಾರೆ, ಆರ್​ಎಸ್​ಎಸ್​ ಮೂಲಗಳಿಂದ ಮಾಹಿತಿ ಇದೆ’

ಗ್ಯಾಸ್​ ಸಿಲಿಂಡರ್​ ಮನೆಗೆ ತಂದುಕೊಟ್ಟದ್ದಕ್ಕೆ ಹಣ ಕೇಳ್ತಾ ಇದ್ದಾರಾ? ಹಾಗಿದ್ದರೆ ಈ ಮಾಹಿತಿ ಓದಿ…

11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 14 =
Remember me
