ಜೈಪುರ: ರಾಜಸ್ಥಾನ ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತ ರಾಜಸ್ಥಾನದಲ್ಲಿ ಬಿಜೆಪಿಯ ತಂತ್ರಗಾರಿಕೆ ನಡೆಯಲಿಲ್ಲ. ನಮ್ಮ ಸರ್ಕಾರ ಸೇಫ್. ಪಕ್ಷದೊಳಗಿನ ಭಿನ್ನಮತವನ್ನು ಬಳಸಿಕೊಂಡು ಸರ್ಕಾರ ಪತನಗೊಳಿಸುವ ಪ್ರಯತ್ನ ವಿಫಲವಾಗಿದೆ ಎಂದು ಬೀಗಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ಏನೊಂದು ಸರಿಯಿಲ್ಲ; ಯಾವುದೇ ಕ್ಷಣದಲ್ಲಿ ಪ್ರಕ್ಷುಬ್ಧಗೊಳ್ಳಬಹುದು ಪ್ರಶಾಂತ ಸಾಗರ
ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ನಾಯಕರು ಅನುಸರಿಸಿದ ರಾಜಕೀಯ ಟೆಕ್ನಿಕ್ ರಾಜಸ್ಥಾನದಲ್ಲಿ ವರ್ಕ್​ಔಟ್ ಆಗಲಿಲ್ಲ. ಅಷ್ಟೂ ರಾಜ್ಯಗಳಲ್ಲಿ ಅನುಸರಿಸಿದ ತಂತ್ರಗಾರಿಕೆಯನ್ನೇ ಬಿಜೆಪಿ ನಾಯಕರು ಇಲ್ಲೂ ಅನುಸರಿಸಲು ಪ್ರಯತ್ನಿಸಿದ್ದರು. ಆದರೆ, ಅವರ ಆಟ ನಡೆಯಲಿಲ್ಲ. ಅವರ ಪಿತೂರಿ ಬಹಿರಂಗವಾಗಿದೆ ಎಂದು ಗೆಹ್ಲೋಟ್ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು ತಿಂಗಳ ನೆಮ್ಮದಿಯೇ ಕಾರಣ…!
ಇಡೀ ರಾಜ್ಯದಲ್ಲಿ ಇಂದು ಸಂತಸದ ಅಲೆ ಎದ್ದಿದೆ. ರಾಜಸ್ಥಾನದಲ್ಲಿ ಬಿಜೆಪಿಯ ಪಿತೂರಿ ವಿಫಲವಾಗಿದೆ. ಇಂದು ಸದನದಲ್ಲಿ ಸಿಕ್ಕ ವಿಶ್ವಾಸಮತದ ಗೆಲುವು ಇದು ರಾಜ್ಯದ ಜನತೆಯ ಗೆಲುವು. ಇನ್ನು ನಾವು ಕೋವಿಡ್ 19 ವಿರುದ್ಧ ಹೋರಾಟಕ್ಕೆ ಗಮನಹರಿಸಬೇಕಾಗಿದೆ ಎಂದು ಗೆಹ್ಲೋಟ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯದಲ್ಲಿ ಗೆಲುವಿನ ನಗೆ ಬೀರಿದ ಗೆಹ್ಲೋಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
