ನವದೆಹಲಿ:ಭಾರತದಲ್ಲಿ ಇದೀಗ ಮದುವೆ ಸೀಸನ್. ಹೀಗಾಗಿ ಮದುವೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ಫನ್ನಿಯಾಗಿದ್ದರೆ, ಇನ್ನು ಕೆಲವು ವಿಡಿಯೋಗಳು ವಾಗ್ವಾದ ಮತ್ತು ಹೈಡ್ರಾಮಕ್ಕೆ ಸಾಕ್ಷಿಯಾಗುತ್ತವೆ. ಇದೀಗ ಅಂಥದ್ದೇ ವಿಡಿಯೋ ವೈರಲ್​ ಆಗಿದೆ.
ಮದುವೆ ಸಮಾರಂಭದ ವೇಳೆ ವೇದಿಕೆಗೆ ದಿಢೀರ್​ ಎಂಟ್ರಿ ಕೊಟ್ಟ ಮಾಜಿ ಬಾಯ್​ಫ್ರೆಂಡ್​ನನ್ನು ನೋಡಿ ವಧು ಶಾಕ್​ ಆದ ದೃಶ್ಯ ಸದ್ಯ ವೈರಲ್ ಆಗುತ್ತಿರುವ​ ವಿಡಿಯೋದಲ್ಲಿದೆ. ವೇದಿಕೆಯ ಮೇಲೆ ಬಂದ ಬಾಯ್​ಫ್ರೆಂಡ್​ ಅಲ್ಲಿದ್ದವರ ಜತೆ ವಾಗ್ವಾದಕ್ಕೆ ಇಳಿಯುವ ಮೂಲಕ ಕೆಲ ಕಾಲ ಹೈಡ್ರಾಮ ಸೃಷ್ಟಿಸಿದನು. ಈ ಅನಿರೀಕ್ಷಿತ ಘಟನೆಯಿಂದ ಅಚ್ಚರಿಗೊಂಡ ವರ ಮದುವೆ ಮಂಟಪದ ವೇದಿಕೆಯಿಂದ ಕೆಳಗಿಳಿದು ಮಾಜಿ ಬಾಯ್​ಫ್ರೆಂಡ್​ ವಾಗ್ವಾದವನ್ನು ವೀಕ್ಷಿಸುತ್ತಿರುವ ದೃಶ್ಯವೂ ಸಹ ವಿಡಿಯೋದಲ್ಲಿದೆ.
ಆದರೆ, ಈ ವೀಡಿಯೋ ನೋಡಿದರೆ ಇದು ನಿಜವಾಗಿ ನಡೆದಿದೆಯೋ ಅಥವಾ ಕೆಲವು ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ ಗಿಟ್ಟಿಸಲು ಫನ್​ಗಾಗಿ ಮಾಡಿದ್ದಾರೋ ಸ್ಪಷ್ಟವಾಗಿಲ್ಲ ಮತ್ತು ಇದು ಎಲ್ಲಿ ನಡೆದಿದೆ ಎಂಬುದರ ಮಾಹಿತಿಯೂ ಇಲ್ಲ. ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಲೇ ಇದೆ.

A post shared by Fun2Eg_Team (@fun2eg_team)

fun2eg_team ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಇದುವರೆಗೂ ಈ ವಿಡಿಯೋಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ವಿಡಿಯೋ ನೋಡಿದವರು ಇದು ಕೇವಲ ಫನ್​ಗಾಗಿ ಮಾಡಲಾಗಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ಪ್ರೇಮಾ ಜತೆಗಿರುವ ಈ ವ್ಯಕ್ತಿ ಯಾರು? ಸ್ಯಾಂಡಲ್​ವುಡ್​ನಲ್ಲಿ ನಡೆಯುತ್ತಿದೆ ಹೀಗೊಂದು ಬಿಸಿ ಬಿಸಿ ಚರ್ಚೆ!

ಪತ್ನಿಯ ಜತೆ ಅಸಹಜ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ​ ಎನ್ನಲಾಗದು! ಹೈಕೋರ್ಟ್​ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
