ಪಾಟ್ನಾ:ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿದೆ. ಮೂರನೇ ಬಾರಿಗೆ ಈ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಇದನ್ನೂ ಓದಿ:ಕೇಂದ್ರದ ಈ ಕಂಪೆನಿ ಷೇರು ವರ್ಷಕ್ಕೇ ದ್ವಿಗುಣ..ಕಳೆದ ವರ್ಷ 186 ರೂ.ಇದ್ದಿದ್ದು ಈಗ 333 ರೂ.ಗೆ ಏರಿಕೆ!
ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಅಗರ್ವಾರಿ ಸುಲ್ತಂಗಂಜ್ ಗಂಗಾ ಎಂಬ ಹೆಸರಿನ ಈ ಸೇತುವೆಯ ಒಂದು ಭಾಗವು ಗಂಗಾ ನದಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಸೇತುವೆ ಕುಸಿಯುತ್ತಿರುವಾಗ ಅಲ್ಲಿದ್ದ ಸ್ಥಳೀಯ ಜನರು ದೃಶ್ಯಗಳನ್ನು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದಾರೆ.
ಇದೀಗ ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿರುಗಾಳಿಯಿಂದಾಗಿ ಸೇತುವೆಯ ಪಿಲ್ಲರ್‌ಗಳು ಕುಸಿದು ಬಿದ್ದಿದ್ದವು. ಆದರೆ ಅಧಿಕಾರಿಗಳು ಸೇತುವೆ ಪುನರ್‌ನಿರ್ಮಾಣಕ್ಕೆ ಮುಂದಾಗಿದ್ದು ಮತ್ತೆ ಮೂರನೇ ಬಾರಿಗೆ ಸೇತುವೆ ಕುಸಿದುಬಿದ್ದಿದೆ.
ಈ ಸೇತುವೆ ನಿರ್ಮಾಣಕ್ಕಾಗಿ ಬಿಹಾರ ಸರ್ಕಾರದಿಂದ 1,717 ಕೋಟಿ ರೂ. ಮೀಸಲಿಡಲಾಗಿದೆ. 2015 ರಲ್ಲಿ ಈ ಸೇತುವೆಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, 2020 ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದು ಇನ್ನೂ ಪೂರ್ಣಗೊಂಡಿಲ್ಲ. ಒಂದೇ ಸೇತುವೆಯು ಪೂರ್ಣಗೊಳ್ಳುವ ಮೊದಲು ಮೂರು ಬಾರಿ ಕುಸಿದಿರುವುದರಿಂದ, ನಿರ್ಮಾಣದ ಗುಣಮಟ್ಟ ಮತ್ತು ಯೋಜನೆಯ ವ್ಯವಸ್ಥೆಯು ಹೆಚ್ಚು ಟೀಕೆಗೆ ಒಳಗಾಗಿದೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಕಂಬಗಳು ಕುಸಿದ ನಂತರ ಪ್ರತಿಪಕ್ಷಗಳು ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸುತ್ತಿವೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಎಸ್. ಕೆ. ಸಿಂಗ್ಲಾ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಗೆ ದಂಡ ವಿಧಿಸಲಾಗಿದೆ. ಸ್ವಂತ ಖರ್ಚಿನಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಲು ಆದೇಶ ನೀಡಲಾಗಿತ್ತು.
‘ಮಿಸ್ಟರ್ ಬಚ್ಚನ್’: ಲೆಹೆಂಗಾದೊಳಗೆ ಕೈ ಹಾಕಿ ಸ್ಟೆಪ್ಸ್​.. ಟ್ರೋಲಿಂಗ್ ಕುರಿತು ನಿರ್ದೇಶಕ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
