ಚೆನ್ನೈ:ರಸ್ತೆಯಲ್ಲಿ ಕೆಟ್ಟು ನಿಂತ ಬಸ್​ ಅನ್ನು ವಿದ್ಯಾರ್ಥಿನಿಯರಿಂದ ದೂಡಿಸಿದ ಪ್ರಕರಣವೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಸ್​ನ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.
ಇತ್ತೀಚೆಗೆ ತಮಿಳುನಾಡಿನ ಸರ್ಕಾರಿ ಬಸ್​ ಒಂದು ನಾಗರಕೋಯಿಲ್​ನ ಅಣ್ಣಾ ಬಸ್​ ನಿಲ್ದಾಣದಿಂದ ಮನಕುಡಿ ಗ್ರಾಮಕ್ಕೆ ತೆರಳುತ್ತಿತ್ತು. ಬಸ್​ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದರು. ಬಸ್​ ನಾಗರಕೋಯಿಲ್​ನ ತಾಲೂಕು ಕಚೇರಿ ಸಮೀಪ ಬರುತ್ತಿದ್ದಂತೆ ಬಸ್​ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕೆಟ್ಟು ನಿಂತಿತು. ಬಸ್ಸನ್ನು ಮರಳಿ ಸ್ಟಾರ್ಟ್​ ಮಾಡಲು ಚಾಲಕ ಅನೇಕ ಬಾರಿ ಯತ್ನಿಸಿದರು ಕೂಡ ಸಾಧ್ಯವಾಗಲಿಲ್ಲ.
ಇದನ್ನೂ ಓದಿ:70 ವರ್ಷ ಕಾಂಗ್ರೆಸ್​ ಏನು ಮಾಡಿತೆಂದು ಕೇಳ್ತಾರೆ, ಈ ದೇಶ‌ ಕಟ್ಟಿದ್ದು‌ ನಾವೇ: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಯಾವಾಗ ಬಸ್​ ಸ್ಟಾರ್ಟ್​ ಆಗಲಿಲ್ಲವೋ ಬಸ್​ನಲ್ಲಿದ್ದ ವಿದ್ಯಾರ್ಥಿನಿಯರಿಂದ ಬಸ್​ ಅನ್ನು ತಳ್ಳಿಸಿದ್ದಾರೆ. ಕೆಲ ದೂರ ಬಸ್​ ದೂಡಿದ ಬಳಿಕ ಬಸ್​ ಮತ್ತೆ ಸ್ಟಾರ್ಟ್​ ಆಯಿತು. ಬಳಿಕ ವಿದ್ಯಾರ್ಥಿನಿಯರು ಮತ್ತೆ ಬಸ್ ಏರಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾದವು.
ವಿದ್ಯಾರ್ಥಿನಿಯರಿಂದ ಬಸ್​ ದೂಡಿಸಿದ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದ ಕೂಡಲೇ ಚಾಲಕ ಮತ್ತು ನಿರ್ವಾಹಕ ಸೆಲ್ವರಾಜ್​ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲದೆ, ರಾಜ್ಯ ಸಾರಿಗೆ ಸಂಸ್ಥೆಯ ವರ್ಕ್​ಶಾಪ್​ ಎಲೆಕ್ಟ್ರಿಷಿಯನ್​ ವೈಕುಂದ ಕೃಷ್ಣನ್​ ಮತ್ತು ಸೂಪರ್​​ವೈಸರ್​ ಸುಬ್ರಮಣಿಯ ಪಿಳ್ಳೈ ಎಂಬುವರನ್ನೂ ಅಮಾನತು ಮಾಡಲಾಗಿದೆ.(ಏಜೆನ್ಸೀಸ್​)
ಎಚ್​​ಡಿಕೆ ಆರೋಗ್ಯ ಸ್ಥಿರವಾಗಿದೆ: ಅಪೋಲೋ ಆಸ್ಪತ್ರೆಯಿಂದ ಹೆಲ್ತ್‌ ಬುಲೆಟಿನ್‌ ರಿಲೀಸ್

ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಕಾರ್ಯಕ್ರಮ ಇಲ್ಲ, ಕೊಟ್ಟ ಮಾತಂತೆ ನಡೆದುಕೊಂಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
