ಬೆಂಗಳೂರು:ಮನೋರಂಜನಾ ಆ್ಯಪ್​ ಆಗಿರುವ ಟಿಕ್​ಟಾಕ್​ನಲ್ಲಿ ಇನ್ನುಮುಂದೆ ನಿಮ್ಮ ಮಕ್ಕಳು ಯಾವ ರೀತಿಯ ವಿಡಿಯೋ ನೋಡಬೇಕು, ಎಷ್ಟೊತ್ತು ಕಾಲ ಕಳೆಯಬೇಕು ಎನ್ನುವುದನ್ನು ನೀವು ನಿರ್ವಹಣೆ ಮಾಡಬಹುದು. ಅಂತದ್ದೊಂದು ಹೊಸ ಫೀಚರ್ ಬಿಡುಗಡೆ ಮಾಡಿದೆ ಟಿಕ್​ಟಾಕ್​ ಸಂಸ್ಥೆ.
ಬೈಟ್​ ಡ್ಯಾನ್ಸ್​ ಸಂಸ್ಥೆಯ ಟಿಕ್​ಟಾಕ್​ ಆ್ಯಪ್​ ನೂತನ ಫೀಚರ್​ ಬಿಡುಗಡೆ ಮಾಡಿದೆ. ಫ್ಯಾಮಿಲಿ ಸೇಫ್ಟಿ ಮೋಡ್​ನ್ನು ಪರಿಚಯಿಸಲಾಗಿದ್ದು ಅದರಲ್ಲಿ ನಿಮ್ಮ ಮಕ್ಕಳ ಟಿಕ್​ಟಾಕ್​ ಅಕೌಂಟ್​ ಮತ್ತು ನಿಮ್ಮ ಟಿಕ್​ ಟಾಕ್​ ಅಕೌಂಟನ್ನು ಲಿಂಕ್​ ಮಾಡಿಟ್ಟುಕೊಳ್ಳಬಹುದು.
ಒಮ್ಮೆ ನಿಮ್ಮ ಮಕ್ಕಳ ಅಕೌಂಟನ್ನು ಲಿಂಕ್​ ಮಾಡಿದರೆ ನಂತರ ಅದರ ಕಂಟ್ರೋಲ್​ ನಿಮ್ಮ ಕೈನಲ್ಲಿರುತ್ತದೆ. ನಿಮ್ಮ ಮಕ್ಕಳು ಎಷ್ಟು ಸಮಯ ಟಿಕ್​ಟಾಕ್​ನಲ್ಲಿ ಕಾಲ ಕಳೆಯಬೇಕು ಎನ್ನುವುದನ್ನು ನೀವು ನಿರ್ಧರಿಸಬಹುದು. ಯಾವ ರೀತಿಯ ವಿಡಿಯೋಗಳು ಮಾತ್ರ ನಿಮ್ಮ ಮಕ್ಕಳ ಟಿಕ್​ಟಾಕ್​ ಅಕೌಂಟ್​ನ ವಾಲ್​ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದನ್ನು ಸಹ ನಿರ್ಧರಿಸುವ ಆಯ್ಕೆ ನಿಮಗಿರುತ್ತದೆ. ಅದರ ಜತೆ ನಿಮ್ಮ ಮಕ್ಕಳಿಗೆ ಯಾರು ಮೆಸೇಜ್​ ಮಾಡಬಹುದು ಯಾರು ಮಾಡಬಾರದು ಎನ್ನುವ ನಿರ್ಧಾರವನ್ನು ಸಹ ನೀವು ತೆಗೆದುಕೊಳ್ಳಬಹುದಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
