ಸರ್ಕಾರದ ಪ್ರಯೋಜನಗಳು ಮತ್ತು ಸೇವೆಗಳನ್ನು ಪಡೆಯಲು ಜನರು ಆಧಾರ್ ಕಾರ್ಡ್​ಗಳನ್ನು ಆತ್ಮವಿಶ್ವಾಸದಿಂದ ಆದರೆ ಎಚ್ಚರದಿಂದ ಬಳಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಡಿಜಿಟಲ್ ಐಡಿಆಧಾರ್ ಕಾರ್ಡ್ ಡಿಜಿಟಲ್ ಐಡಿಯಾಗಿದ್ದು, ಜನರು ತಮ್ಮ ಗುರುತಿನ ರುಜುವಾತುಗಳನ್ನು ವಿದ್ಯುನ್ಮಾನವಾಗಿ ಅಥವಾ ಆಫ್​ಲೈನ್ ಮೂಲಕ ಪರಿಶೀಲಿಸಲು ಮತ್ತು ಮೌಲ್ಯೀಕರಿಸಲು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಬಹುದಾಗಿದೆ. ಬ್ಯಾಂಕ್ ಖಾತೆ, ಪ್ಯಾನ್ ಹಾಗೂ ಪಾಸ್​ಪೋರ್ಟ್ ಬಳಸುವಾಗ ವಹಿಸುವ ಎಚ್ಚರವನ್ನು ಆಧಾರ್ ಬಳಕೆ ಸಂದರ್ಭದಲ್ಲೂ ವಹಿಸುವಂತೆ ಸೂಚಿಸಿದೆ.
ವಿಐಡಿ ಸೌಲಭ್ಯವ್ಯಕ್ತಿಯು ತನ್ನ ಆಧಾರ್ ಸಂಖ್ಯೆ ಹಂಚಿಕೊಳ್ಳಲು ಇಚ್ಛಿಸದಿದ್ದಲ್ಲಿ ಯುಐಡಿಎಐ, ವರ್ಚುವಲ್ ಐಡೆಂಟಿಫೈಯರ್ (ವಿಐಡಿ) ಜನರೇಟ್ ಮಾಡುವ ಸೌಲಭ್ಯ ಒದಗಿಸುತ್ತದೆ. ಅಧಿಕೃತ ವೆಬ್​ಸೈಟ್ ಅಥವಾ myaadhar ಪೋರ್ಟಲ್ ಮೂಲಕ ಸುಲಭವಾಗಿ ವಿಐಡಿ ಜನರೇಟ್ ಮಾಡಬಹುದಾಗಿದೆ. ಆಧಾರ್ ಸಂಖ್ಯೆ ಬದಲಿಗೆ ದೃಢೀಕರಣಕ್ಕೆ ಅದನ್ನು ಬಳಸಬಹುದಾಗಿದೆ.
ಆಧಾರ್ ಲಾಕ್ಯುಐಡಿಎಐ, ಆಧಾರ್ ಲಾಕ್ ಮತ್ತು ಬಯೋಮೆಟ್ರಿಕ್ ಲಾಕಿಂಗ್ ಸೌಲಭ್ಯಸಹ ಕಲ್ಪಿಸಿದೆ. ಒಂದು ವೇಳೆ ವ್ಯಕ್ತಿಯು ಆಧಾರ್ ಅನ್ನು ನಿರ್ದಿಷ್ಟ ಅವಧಿಗೆ ಬಳಸದಿದ್ದರೆ ಆ ಅಂತಹ ಅವಧಿಗೆ ಆಧಾರ್ ಅಥವಾ ಬಯೋಮೆಟ್ರಿಕ್ ಲಾಕ್ ಮಾಡುವ ಹಾಗೂ ಅಗತ್ಯವಿದ್ದಾಗ ಅನ್​ಲಾಕ್ ಮಾಡಬಹುದಾಗಿದೆ.
ಇ-ಮೇಲ್ ಲಿಂಕ್ವ್ಯಕ್ತಿಯು ಯುಐಡಿಎಐ ವೆಬ್​ಸೈಟ್ ಅಥವಾ ಎಂ-ಆಧಾರ್ ಅಪ್ಲಿಕೇಷನ್​ನಲ್ಲಿ ಕಳೆದ ಆರು ತಿಂಗಳ ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸಬಹುದು. ಇ ಮೇಲ್ ಐಡಿಯನ್ನು ಆಧಾರ್​ನೊಂದಿಗೆ ಲಿಂಕ್ ಮಾಡುವುದರಿಂದ ಜನರಿಗೆ ತನ್ನ ಆಧಾರ್ ಸಂಖ್ಯೆಯನ್ನು ದೃಢೀಕರಿಸಿದಾಗಲೆಲ್ಲ ಮಾಹಿತಿ ದೊರೆಯುತ್ತದೆ.
ಹಂಚಿಕೊಳ್ಳಬೇಡಿಆಧಾರ್ /ಪಿವಿಸಿ ಪ್ರತಿಗಳನ್ನು ಎಲ್ಲೆಂದರಲ್ಲಿ ಬಿಡಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರ್ ಸಂಖ್ಯೆ ಹಂಚಿಕೊಳ್ಳಬೇಡಿ. ಯಾರೊಂದಿಗೂ ಎಂ-ಆಧಾರ್ ಪಿನ್ ಹೇಳಬೇಡಿ. ಆಧಾರ್​ನ ಅನಧಿಕೃತ ಬಳಕೆ ಬಗ್ಗೆ ಅನುಮಾನವುಂಟಾದ್ದಲ್ಲಿ ಟೋಲ್ -ಫ್ರೀ ಸಹಾಯವಾಣಿ 1947 ಮೂಲಕ ಯುಐಡಿಎಐ ಸಂಪರ್ಕಿಸಿ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − fifteen =
Remember me
