ನವದೆಹಲಿ:ದೇಶದಲ್ಲಿ ಕರೊನಾ ಔಷಧ 2021ರ ಆರಂಭಕ್ಕೆ ಲಭ್ಯವಾಗುವ ನಿರೀಕ್ಷೆಯಿದ್ದು, ಔಷಧ ವಿತರಣೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇಶದಲ್ಲಿನ 130 ಕೋಟಿ ಜನರಿಗೆ ಔಷಧ ವಿತರಿಸುವ ಸಲುವಾಗಿ 51 ಸಾವಿರ ರೂಪಾಯಿಯನ್ನು ಸರ್ಕಾರ ಮೀಸಲಿಟ್ಟಿದೆ ಎನ್ನಲಾಗಿದೆ. ಔಷಧ ವಿತರಣೆ ಯಾರಿಗೆ ಮೊದಲು ಆಗಬೇಕು? ಹೇಗೆ ಮಾಡಬೇಕು? ಎನ್ನುವುದರ ಕುರಿತು ಕರಡು ತಯಾರಿಸಲು ಸಮಿತಿಯೊಂದನ್ನು ರಚಿಸಲಾಗಿದೆ.
ವಿತರಣೆಯ ನೀಲಿನಕ್ಷೆಯೊಂದಿಗೆ ಅದಕ್ಕೆ ಬೇಕಾಗುವ ಆರ್ಥಿಕ ಸಿದ್ಧತೆಗಳನ್ನೂ ನಡೆಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಎರಡು ಡೋಸೇಜ್ ಔಷಧ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಒಂದು ಡೋಸೇಜ್ ಔಷಧಕ್ಕೆ 140-150 ರೂಪಾಯಿ ತಗುಲಬಹುದು. ಔಷಧದ ಕೋಲ್ಡ್ ಸ್ಟೋರೇಜ್, ವಿತರಣಾ ವೆಚ್ಚ ಸೇರಿ 150-220 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಕುರಿತಾಗಿ ಸರ್ಕಾರ ಯಾವುದೇ ಅಧಿಕೃತ ನೀಡಿಲ್ಲ.
ಇದನ್ನೂ ಓದಿ:ನೀರು ಹಿತ-ಮಿತವಾಗಿ ಬಳಸಿ : ವೀರಣ್ಣ ಚರಂತಿಮಠ ಅಭಿಮತ
ವಿದೇಶಿ ಸಂಚಾರ ನಿಯಮ ಸಡಿಲಿಕೆಕರೊನಾ ಹಿನ್ನೆಲೆಯಲ್ಲಿ ವಿದೇಶಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಭಾರತ ಈಗ ತುಸು ಸಡಿಲಿಸಿಕೆ ಮಾಡಿದೆ. ಸಾಗರೋತ್ತರ ಭಾರತೀಯ ನಾಗರಿಕರ ಕಾರ್ಡ್ (ಒಸಿಐ) ಹೊಂದಿರುವವರು ಮತ್ತು ವಿದೇಶಿಯರು ಭಾರತಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಪ್ರವಾಸಿಗರಿಗೆ ನಿರ್ಬಂಧ ಮುಂದುವರಿದಿದೆ. ಎಲೆಕ್ಟ್ರಾನಿಕ್ ವೀಸಾ, ಪ್ರವಾಸಿ ವೀಸಾ ಮತ್ತು ವೈದ್ಯಕೀಯ ವೀಸಾ ಹೊರತುಪಡಿಸಿ ಬೇರೆಲ್ಲ ವೀಸಾಗಳನ್ನು ಮರುಜಾರಿಗೆ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಪ್ರಯಾಣಿಕರು ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ:ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..
3ನೇ ಹಂತದ ಪ್ರಯೋಗದೇಶಾದ್ಯಂತ 40ಕ್ಕೂ ಹೆಚ್ಚು ಔಷಧಗಳು ಕ್ಲಿನಿಕಲ್ ಟ್ರಯಲ್​ನ ವಿವಿಧ ಹಂತದಲ್ಲಿವೆ. 10 ಔಷಧಗಳು ಮೂರನೇ ಮತ್ತು ಕೊನೆಯ ಹಂತದ ಪ್ರಯೋಗದಲ್ಲಿವೆ ಎಂದು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ಮೂರು ಔಷಧಗಳು ಉತ್ತಮ ಫಲಿತಾಂಶ ನೀಡುತ್ತಿವೆ. ಅಸ್ತ್ರಾಜೆನೆಕಾ ಮತ್ತು ಆಕ್ಸ್​ಫರ್ಡ್ ವಿವಿ ಜಂಟಿಯಾಗಿ ತಯಾರಿಸಿರುವ ಔಷಧವು ಮೂರನೇ ಹಂತದ ಪ್ರಯೋಗದಲ್ಲಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ತಯಾರಿಸಿರುವ ಕೊವ್ಯಾಕ್ಸಿನ್ ಹಾಗೂ ಜೈಡುಸ್ ಕ್ಯಾಡಿಲ ಸಂಸ್ಥೆ ತಯಾರಿಸಿರುವ ಔಷಧವು ಎರಡನೇ ಹಂತದ ಪ್ರಯೋಗದಲ್ಲಿದೆ. ಇದರ ಜತೆಯಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಔಷಧವನ್ನು ದೇಶದಲ್ಲಿ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ. (ಏಜೆನ್ಸೀಸ್)
ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ-19 ಲಕ್ಷ ಉದ್ಯೋಗ, ಉಚಿತ ಲಸಿಕೆ, ಜೆಡಿಯು ಪ್ರಣಾಳಿಕೆ- ಸಾಥ್ ನಿಶ್ಚಯ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
