ನವದೆಹಲಿ: ಕರೊನಾ ವೈರಸ್ ಸೋಂಕಿತರ ತಪಾಸಣೆಗೆಂದು ಒದಗಿಸಲಾಗಿರುವ ಚೀನಿ ನಿರ್ವಿುತ ಕ್ಷಿಪ್ರ ಪರೀಕ್ಷಾ ಕಿಟ್​ಗಳು (ರ‍್ಯಾಪಿಡ್ ಟೆಸ್ಟ್ ಕಿಟ್) ದೋಷಪೂರಿತವಾಗಿವೆ ಎಂದು ದೂರಿರುವ ಹಲವು ರಾಜ್ಯಗಳು ಅವುಗಳ ಬಳಕೆಗೆ ನಿರಾಕರಿಸಿವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಮುಂದಿನ ಎರಡು ದಿನ ಈ ಕಿಟ್​ಗಳನ್ನು ಬಳಸದಂತೆ ರಾಜ್ಯಗಳಿಗೆ ಸೂಚಿಸಿದೆ.
ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರ ಚೀನಾದಿಂದ 6.5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ತರಿಸಿಕೊಂಡಿತ್ತು. ದೇಶದಾದ್ಯಂತ ಕರೊನಾ ಹಾಟ್​ಸ್ಪಾಟ್​ಗಳಲ್ಲಿ ತಪಾಸಣೆಗಾಗಿ ವಿತರಿಸುವಂತೆ ಐಸಿಎಂಆರ್ ಸೂಚಿಸಿದ ಮೇರೆಗೆ ರಾಜ್ಯಗಳಿಗೆ ನೀಡಲಾಗಿತ್ತು. ಈ ಕಿಟ್​ಗಳು ಚೀನಾದಿಂದ ಬಂದ ಕೂಡಲೇ ಅವುಗಳ ಗುಣಮಟ್ಟದ ಕುರಿತು ಕೆಲವು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು.
ಒಂದು ವೇಳೆ ಇಡೀ ಬ್ಯಾಚ್​ನ ಕಿಟ್​ಗಳು ಕಳಪೆಯಾಗಿದ್ದರೆ ಎಲ್ಲ ಕಿಟ್​ಗಳಿಗೆ ಬದಲಿ ನೀಡುವಂತೆ ಸಂಬಂಧಿತ ಕಂಪನಿಗೆ ಕೇಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿದ ಚೀನಿ ಅಧಿಕಾರಿಗಳು, ಕಿಟ್​ಗಳು ಕಳಪೆ ಎನ್ನುವುದನ್ನು ನಿರಾಕರಿಸಿ, ‘ವೈದ್ಯಕೀಯ ಉತ್ಪನ್ನಗಳ ರಫ್ತಿಗೆ ನಮ್ಮ ದೇಶ ತುಂಬಾ ಮಹತ್ವ ನೀಡುತ್ತದೆ’ ಎಂದಿದ್ದರು. ಭಾರತ ಸೇರಿದಂತೆ ಹಲವು ದೇಶಗಳು ರಾಜತಾಂತ್ರಿಕ ಮಾರ್ಗದ ಮೂಲಕ ಕಿಟ್​ಗಳಿಗೆ ಬೇಡಿಕೆ ಮಂಡಿಸಿದ್ದವು.
ರಾಜಸ್ಥಾನದಲ್ಲಿ ಪರೀಕ್ಷೆ ಸ್ಥಗಿತ
ಚೀನಿ ಕಿಟ್​ಗಳಿಂದ ತಪಾಸಣೆ ನಡೆಸುವುದನ್ನು ರಾಜಸ್ಥಾನ ಮಂಗಳವಾರ ಸ್ಥಗಿತಗೊಳಿಸಿದೆ. ಈ ಕಿಟ್​ಗಳು ಕೇವಲ ಶೇಕಡಾ 5.4 ಪರಿಣಾಮಕಾರಿಯಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಕಿಟ್​ಗಳ ಪರಿಣಾಮವನ್ನು ಪರಿಶೀಲಿಸಲು ಸವಾಯ್ ಮಾನ್ ಸಿಂಗ್ ಆಸ್ಪತ್ರೆಯ ವೈದ್ಯಕೀಯ ಹಾಗೂ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರ ಸಮಿತಿ ರಚಿಸಲಾಗಿತ್ತು.
ಆಂಟಿ ಬಾಡಿ ಪರೀಕ್ಷೆ ಬೇಡ
ರ‍್ಯಾಪಿಡ್ ಟೆಸ್ಟ್ ಕಿಟ್​ಗಳಲ್ಲಿ ದೋಷವಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೊವಿಡ್-19 ರೋಗಿಗಳಿಗೆ ಎರಡು ದಿನದ ಮಟ್ಟಿಗೆ ಹೊಸ ಆಂಟಿ ಬಾಡಿ ಪರೀಕ್ಷೆ ನಡೆಸದಿರಲು ಐಸಿಎಂಆರ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಟ್ರಾವೆಲ್ ಹಿಸ್ಟರಿ ಬಚ್ಚಿಟ್ಟು ಮಸೀದಿಗಳಲ್ಲಿ ತಲೆಮರೆಸಿಕೊಂಡಿದ್ದ 30 ತಬ್ಲಿಘಿಗಳು ಅರೆಸ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 9 =
Remember me
