ಮ್ಯಾನ್ಮಾರ್‌:ಚೀನಾದ ಆಳವನ್ನು ಅಗೆದಷ್ಟೂ ಬಗೆದಷ್ಟೂ ಕುತಂತ್ರ ಬುದ್ಧಿಯೇ ತುಂಬಿಕೊಂಡಿದೆ. ಭಾರತ ಮಾತ್ರವಲ್ಲದೇ ಬೇರೆ ಬೇರೆ ಗಡಿಗಳಲ್ಲಿಯೂ ಚೀನಾ ಕಿತಾಪತಿ ನಡೆದೇ ಇದೆ.
ಅದು ಎಲ್ಲಿಯವರೆಗೆ ಎಂದರೆ ಎರಡು ದೇಶಗಳಿಗೆ ಅರಿವೆಯೇ ಇಲ್ಲದೇ ಗಡಿಯಲ್ಲಿ ಬೃಹತ್​ ನಗರ ಸ್ಥಾಪನೆ ಮಾಡಿ ಅಲ್ಲಿ ಬರೋಬ್ಬರಿ ನಾಲ್ಕು ಲಕ್ಷ ಚೀನಿಯರಿಗೆ ಸ್ಥಳಾವಕಾಶ ಕಲ್ಪಿಸುವ ಹುನ್ನಾರ ನಡೆಸಿದ್ದು ಇದೀಗ ಬಯಲುಗೊಂಡಿದೆ!
ಅಂದಾಜು ನಾಲ್ಕು ಲಕ್ಷ ಚೀನಿಯರಿಗೆ ಸ್ಥಳಾವಕಾಶ ಕಲ್ಪಿಸಲು ಮ್ಯಾನ್ಮಾರ್ (ಬರ್ಮಾ)- ಥೈಲ್ಯಾಂಡ್ ಗಡಿಯನ್ನು ಕಬಳಿಸಿರುವ ಚೀನಾ ಅಲ್ಲಿ ರಹಸ್ಯವಾಗಿ ಮೆಗಾ ನಗರ ನಿರ್ಮಾಣ ಮಾಡುತ್ತಿರುವ ಅಂಶ ಇದೀಗ ಬಯಲುಗೊಂಡಿದೆ. ಸುಮಾರು 730 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಮೆಗಾಸಿಟಿಯನ್ನು ಚೀನಿಯರು ರಹಸ್ಯವಾಗಿ ನಿರ್ಮಿಸುತ್ತಿದ್ದಾರೆ. ಇಲ್ಲಿ ನಾಲ್ಕು ಲಕ್ಷ ಚೀನಿಯರಿಗೆ ಸ್ಥಳಾವಕಾಶ ನೀಡುವ ಯೋಜನೆ ಇದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:VIDEO: ಚೀನಾ, ಪಾಕ್​ಗೆ ಕಾಶ್ಮೀರಿಗಳ ಸ್ಪಷ್ಟ ಸಂದೇಶ
ಅಚ್ಚರಿಯ ಸಂಗತಿ ಎಂದರೆ ಈ ಬಗ್ಗೆ ಅತ್ತ ಥಾಯ್ಲೆಂಡ್‌ಗಾಗಲಿ, ಇತ್ತ ಮ್ಯಾನ್ಮಾರ್‌ಗಾಗಲಿ ಈ ವಿಷಯದ ಅರಿವೆಯೇ ಇಲ್ಲವಂತೆ. ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ಗಳನ್ನು ವಿಭಜಿಸುವ ಮೊಯಿ ನದಿಯ ದಡದಲ್ಲಿರುವ ಯಾಂಗೊನ್ ಕೆ ಕರೆನ್ ರಾಜ್ಯದ ಶ್ವೆ ಕೊಕ್ಕೊ ನಗರದಲ್ಲಿ ಸುಮಾರು 15 ಬಿಲಿಯನ್ ಡಾಲರ್‌ ವೆಚ್ಚದಲ್ಲಿ ಈ ನಗರ ನಿರ್ಮಾಣ ಆಗುತ್ತಿದೆ. ಈ ಮೂಲಕ ನಿಧಾನವಾಗಿ ಮ್ಯಾನ್ಮಾರ್‌ ದೇಶವನ್ನು ಕಬಳಿಸುವ ಹುನ್ನಾರ ಇದಾಗಿದೆ.
ಈ ಬಗ್ಗೆ ಇದೀಗ ಎರಡೂ ದೇಶಗಳ ಅರಿವಿಗೆ ಬಂದಿದ್ದು, ಭಾರಿ ಆಘಾತವನ್ನುಂಟು ಮಾಡಿದೆ, ಇದಾಗಲೇ ಯೋಜನೆ ಆರಂಭಗೊಂಡಿದ್ದು, ಎರಡೂ ದೇಶಗಳು ತಡವಾಗಿ ಎಚ್ಚೆತ್ತುಗೊಂಡಿವೆ.
ಅಷ್ಟಕ್ಕೂ ಇದು ಸಾಧ್ಯವಾದದ್ದು ಹೇಗೆಂದರೆ, ಮ್ಯಾನ್ಮಾರ್‌ ಜನರಿಗೆ ಹಣದ ಆಮಿಷ ತೋರಿರುವ ಚೀನಾ, ಕಡಿಮೆ ದರ ಕೊಟ್ಟು ಅವರ ಜಮೀನುಗಳನ್ನು ಖರೀದಿ ಮಾಡಿದೆ. ಈ ಕುತಂತ್ರದಲ್ಲಿ ಅಲ್ಲಿಯ ಅಧಿಕಾರಿಗಳೂ ಶಾಮೀಲಾಗಿ ಚೀನಾಕ್ಕೆ ನೆರವು ನೀಡುವ ಮೂಲಕ ದೇಶದ್ರೋಹ ಎಸಗಿದ್ದಾರೆ.
ಈಗ ಸಂಪೂರ್ಣ ಯೋಜನೆ ತನಿಖೆಗಾಗಿ ಮ್ಯಾನ್ಮಾರ್‌ ಸರ್ಕಾರ ನ್ಯಾಯಮಂಡಳಿ ರಚಿಸಿದೆ. ಈ ಅಭಿವೃದ್ಧಿ ಯೋಜನೆಯ ಸುತ್ತಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ನ್ಯಾಯಮಂಡಳಿಗೆ ಮನವಿ ಮಾಡಿಕೊಂಡಿದೆ. ಸರ್ಕಾರದ ಡೆಪ್ಯುಟಿ ಮಿನಿಸ್ಟರ್‌ ಯು ಟಿನ್ ಮೈಂಟ್ ಅವರನ್ನು ಈ ತನಿಖಾ ನ್ಯಾಯಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಭಾರತೀಯ ಯೋಧರ ಸಾಹಸಗಾಥೆ: ನಾಲ್ಕು ಉಗ್ರ ಸಂಘಟನೆ ಮುಖ್ಯಸ್ಥರು ಖತಂ
ಯೋಜಿತ ಮೆಗಾ ರೆಸಾರ್ಟ್ ಮತ್ತು ನಗರ ವಿಸ್ತರಣೆ ಯೋಜನೆಯನ್ನು ಕರ್ನಲ್ ಚಿಟ್ ಥು ನೇತೃತ್ವದ ಮ್ಯಾನ್ಮಾರ್ ಮಿಲಿಟರಿ ಬೆಂಬಲಿತ ಸಶಸ್ತ್ರ ಗುಂಪು ನಿಯಂತ್ರಿಸುತ್ತಿದೆ. ಈ ಮಹಾನಗರ ಯೋಜನೆಯನ್ನು ಹಾಂಗಕಾಂಗ್ ಮೂಲದ ಯಟೈ ಇಂಟರ್‌ನ್ಯಾಷನಲ್‌ ಹೋಲ್ಡಿಂಗ್ ಗ್ರೂಪ್ ಮತ್ತು ಕರ್ನಲ್ ಚಿಟ್ ಥು ಅವರ ಸಹಯೋಗದಲ್ಲಿ ರೂಪಿಸಲಾಗಿದೆ. ಇದನ್ನು ಅಧಿಕೃತವಾಗಿ “ಮ್ಯಾನ್ಮಾರ್ ಯಟೈ ಶ್ವೆ ಕೊಕ್ಕೊ ವಿಶೇಷ ಆರ್ಥಿಕ ವಲಯ” ಎಂದು ಕರೆಯಲಾಗುತ್ತದೆ.
ಇಲ್ಲಿ ಐಷಾರಾಮಿ ವಸತಿ, ಕಾಂಡೋಮಿನಿಯಂಗಳು, ಹೋಟೆಲ್‌ಗಳು, ಶಾಪಿಂಗ್ ಕೇಂದ್ರಗಳು, ಗಾಲ್ಫ್ ಕೋರ್ಸ್‌ಗಳು, ಕ್ಯಾಸಿನೊಗಳು, ಜೂಜು ಮತ್ತು ಮನರಂಜನೆ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕೃಷಿ ಇತ್ಯಾದಿಗಳ ಸ್ಥಾಪನೆಗೆ ಚೀನಾ ಸರ್ಕಾರ ಮುಂದಾಗಿದೆ. ಆದರೆ ಇದನ್ನು ಅನಧಿಕೃತ ಚಟುವಟಿಕೆಗಳ ತಾಣವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಮ್ಯಾನ್ಮಾರ್‌ ಸ್ಪಷ್ಟಪಡಿಸಿದೆ.(ಏಜೆನ್ಸೀಸ್​)
ಬಂಧಿಸುವ ಮುನ್ನ ಆರೋಪಿಗಳ ಸ್ನಾನ ಕಡ್ಡಾಯ: ಪೊಲೀಸರಿಗೆ ಕಮಿಷನರ್ ಕಟ್ಟಪ್ಪಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − fourteen =
Remember me
