ಲಖನೌ:ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಫೆ.24ರಂದು ಆಗ್ರಾದ ತಾಜ್​ ಮಹಲ್​ಗೆ ಭೇಟಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೈಟ್​ ಹೌಸ್​ ನೀಡಿರುವ ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ ಟ್ರಂಪ್​ ಮತ್ತು ಅವರ ಪತ್ನಿ ಫೆ.24ರಂದು ತಾಜ್​ಮಹಲ್​ಗೆ ಭೇಟಿ ನೀಡಲಿದ್ದಾರೆ.
ಡೊನಾಲ್ಡ್​ ಟ್ರಂಪ್ ತಾಜ್​ಮಹಲ್​ಗೆ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಕೂಡ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸ್ಥಳೀಯ ಮುನ್ಸಿಪಲ್​ ಕಾರ್ಪೋರೇಶ್​ನ ತಾಜ್​ ಮಹಲ್​ನ ಸುತ್ತಲೂ ಇರುವ ಗೋಡೆಗಳಿಗೆಲ್ಲ ಬಣ್ಣ ಬಳಿಸುತ್ತಿದೆ.ಹಾಗೇ ಅಲ್ಲಿನ ರಸ್ತೆಗಳನ್ನು, ಪ್ರದೇಶಗಳನ್ನು ಸ್ವಚ್ಛ ಮಾಡುವ ಕಾರ್ಯವೂ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟ ಯಂತ್ರಗಳನ್ನೂ ತರಲಾಗಿದೆ.
ಇನ್ನು ಸುತ್ತಲಿನ ಗೋಡೆಗಳ ಮೇಲೆ ಕಲಾವಿದರು ಚಿತ್ರ ಬಿಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.ರಸ್ತೆಗಳ ವಿಭಜಕ(ಡಿವೈಡರ್​)ಗಳಿಗೂ ಪೇಂಟಿಂಗ್​ ಮಾಡಲಾಗುತ್ತಿದೆ. ಅಲ್ಲಿ ಸುತ್ತಮುತ್ತ ಇರುವ ವಿವಿಧ ನಾಯಕರ ಪುತ್ಥಳಿಗಳು, ಪ್ರತಿಮೆಗಳನ್ನೆಲ್ಲ ಸ್ವಚ್ಛ ಮಾಡಲಾಗುತ್ತಿದೆ.
ಹಾಗೇ ಟ್ರಂಪ್​ ಅವರು ಮೊಹಬ್ಬತ್​ ದಿ ತಾಜ್ ಸಾಂಸ್ಕೃತಿಕ ಕಲಾಕೇಂದ್ರಕ್ಕೂ ಭೇಟಿ ನೀಡಲಿದ್ದು, ಅಲ್ಲಿಯೂ ಸಹ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ.
ಇನ್ನು ಟ್ರಂಪ್ ಅವರ ತಾಜ್ ಮಹಲ್​ ಭೇಟಿ ನಿಮಿತ್ತ 5000 ಜನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಜನವರಿಯಲ್ಲಿ ಯುಎಸ್​ನ ಉನ್ನತ ಮಟ್ಟದ ಭದ್ರತಾ ತಂಡವೊಂದು ತಾಜ್​ಮಹಲ್​ ಮತ್ತು ಆಗ್ರಾದ ಅಕ್ಕಪಕ್ಕದ ಪ್ರದೇಶಗಳಿಗೆ ಭೇಟಿ ನೀಡಿತ್ತು. ಇದರಲ್ಲಿ ಸುಮಾರು 40 ಜನರು ಇದ್ದರು. ಅಲ್ಲಿ ಪರಿಶೀಲನೆ ಮಾಡಿದ ಬಳಿಕ ಅಧ್ಯಕ್ಷರ ತಾಜ್​ ಮಹಲ್​ ಭೇಟಿಗೆ ಅಸ್ತು ಎಂದಿವೆ ಎಂದು ಹೇಳಲಾಗಿದೆ.
2015ರಲ್ಲಿ ಯುಎಸ್​ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ತಾಜ್​ ಮಹಲ್​ ಗೆ ಭೇಟಿ ನೀಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
