ನವದೆಹಲಿ:ಉಚಿತ ಸವಲತ್ತು ಘೋಷಣೆ ಸಹಿತ ಇನ್ನಿತರ ಚುನಾವಣಾಪೂರ್ವ ಭರವಸೆಗಳ ಮೂಲಕ ಕಾನೂನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಪಡಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.
ಉಚಿತ ಕೊಡುಗೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಅವರು ಹೊಸ ಅರ್ಜಿ ಸಲ್ಲಿಸಿದ್ದಾರೆ. ಚುನಾವಣಾ ಸಮಿತಿಗೆ ಹೆಚ್ಚಿನ ಅಧಿಕಾರ ಇರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.ರಾಜಕೀಯ ಪಕ್ಷಗಳು ಚುನಾವಣಾಪೂರ್ವವಾಗಿ ನೀಡುವ ಉಚಿತ ಭರವಸೆಗಳು ಭ್ರಷ್ಟ ಅಭ್ಯಾಸವಾಗಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಅದನ್ನು ಲಂಚ ಎಂದೂ ಪರಿಗಣಿಸಬಹುದು ಎಂದು ಉಪಾಧ್ಯಾಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಉಪಾಧ್ಯಾಯ ಸಲ್ಲಿಸಿದ ಅರ್ಜಿಯನ್ನೂ ಒಳಗೊಂಡಂತೆ ಉಚಿತ ಕೊಡುಗೆಗಳ ಕುರಿತ ವಿಚಾರಣೆ ನಡೆಸುತ್ತಿದೆ.
ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಷರತ್ತುಗಳನ್ನು ಪಾಲಿಸಲು ವಿಫಲವಾದಾಗ ನೈಸರ್ಗಿಕ ನ್ಯಾಯತತ್ವ ಅನುಸರಿಸಿ ಅಂಥ ಪಕ್ಷಗಳ ನೋಂದಣಿ ರದ್ದುಗೊಳಿಸಬೇಕು ಎಂದು ವಕೀಲರಾದ ವಿಜಯ್ ಹನ್ಸಾರಿಯಾ ಮತ್ತು ಅಶ್ವಿನಿ ಉಪಾಧ್ಯಾಯ ಅವರಿಂದ ಸಲ್ಲಿಕೆಯಾದ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನೋಂದಣಿ ಮುಂದುವರಿಕೆ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬಹುದು ಎಂದೂ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆಯೋಗವು ಯಾವ್ಯಾವ ಷರತ್ತುಗಳನ್ನು ಅಳವಡಿಸಬೇಕು, ಉಲ್ಲಂಘನೆಗೆ ಏನೇನು ದಂಡ ವಿಧಿಸಬಹುದು ಎಂಬ ಪಟ್ಟಿಯನ್ನೂ ಇದು ಒಳಗೊಂಡಿದೆ.
ಪಾರದರ್ಶಕ ಮಾರ್ಗಸೂಚಿಗಳನ್ವಯ ರಾಜಕೀಯ ಪಕ್ಷಗಳು ಪ್ರತಿವರ್ಷ ನಿಗದಿತ ಸಮಯದೊಳಗೆ ಆಯೋಗಕ್ಕೆ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಸಲ್ಲಿಸಬೇಕು. ಅದೇ ರೀತಿ ರಾಜಕೀಯ ಪಕ್ಷಗಳು ಪ್ರತಿವರ್ಷ ಅಧಿಸೂಚಿತ ವಿಳಾಸದಲ್ಲಿ ತಮ್ಮ ಅಸ್ತಿತ್ವ ಹಾಗೂ ನೋಂದಾಯಿತ ಸದಸ್ಯರ ಸಂಖ್ಯೆ ಕುರಿತು ಪ್ರಮಾಣಪತ್ರವನ್ನೂ ಸಲ್ಲಿಸುವಂತಾಗಬೇಕು ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ದೇಶದಲ್ಲಿ ಮಾನ್ಯತೆ ಪಡೆದ 8 ರಾಷ್ಟ್ರೀಯ ಹಾಗೂ 56 ರಾಜ್ಯಮಟ್ಟದ ಪಕ್ಷಗಳಿವೆ. ನೋಂದಾಯಿತ ಆದರೆ ಮಾನ್ಯತೆ ಇರದ ರಾಜಕೀಯ ಪಕ್ಷಗಳ ಸಂಖ್ಯೆ 2,796 ಇದೆ. ರಾಜಕೀಯ ಪಕ್ಷಗಳ ಚುನಾವಣಾಪೂರ್ವ ಉಚಿತ ಭರವಸೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಲಾದ ಅರ್ಜಿಗಳನ್ನು ತ್ರಿಸದಸ್ಯ ಪೀಠದ ಮುಂದಿಡಬೇಕು ಎಂದು ಸವೋಚ್ಚ ನ್ಯಾಯಾಲಯ ನಿರ್ದೇಶಿಸಿತ್ತು ಹಾಗೂ ಈ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ತರಿತ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಂದಹಾಗೆ, ಈ ಅರ್ಜಿ ಕುರಿತ ವಿಚಾರಣೆ ಮಂಗಳವಾರ ಮುಂದುವರಿಯಲಿದೆ.
ರಾಹುಲ್ ಗಾಂಧಿಗೆ ಸಮನ್ಸ್ಸುಲ್ತಾನ್​ಪುರ:ಕೇಂದ್ರ ಸಚಿವ ಅಮಿತ್ ಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್ ನೀಡಿದೆ. ಡಿ. 16ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಬಿಜೆಪಿ ನಾಯಕ ವಿಜಯ್ ಮಿಶ್ರಾ 2018ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಷಾ ವಿರುದ್ಧ ರಾಹುಲ್ ಕೊಲೆ ಆರೋಪ ಮಾಡಿದ್ದರು. ಗುಜರಾತ್​ನ ನಕಲಿ ಎನ್​ಕೌಂಟರ್ ಪ್ರಕರಣ ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದರು.
ತೆಲಂಗಾಣದ ಪತ್ರಿಕೆಗಳಲ್ಲಿ ಗ್ಯಾರಂಟಿ ಜಾಹೀರಾತು: ಕಾಂಗ್ರೆಸ್​ ಸರ್ಕಾರಕ್ಕೆ ಚುನಾವಣಾ ಆಯೋಗ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − nine =
Remember me
