ಮುಂಬೈ:ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ ಲಿಮಿಟೆಡ್ ಷೇರುಗಳು ಮಿಡ್-ಕ್ಯಾಪ್ ವರ್ಗದಲ್ಲಿ ಬರುತ್ತದೆ. ಇದು ರಾಸಾಯನಿಕ ತಯಾರಿಕೆ ಸಂಸ್ಥೆಯಾಗಿದ್ದು, 16,193 ಕೋಟಿ ರೂಪಾಯಿಯ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
2003 ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಉತ್ತಮ ಮತ್ತು ವಿಶೇಷ ರಾಸಾಯನಿಕಗಳನ್ನು ತಯಾರಿಸುತ್ತದೆ. ಬಹು ರಾಸಾಯನಿಕಗಳ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ.
ಪರ್ಫಾರ್ಮೆನ್ಸ್ ಕೆಮಿಕಲ್ಸ್, ಫಾರ್ಮಾಸ್ಯುಟಿಕಲ್ ಕೆಮಿಕಲ್ಸ್ ಮತ್ತು ಎಫ್‌ಎಂಸಿಜಿ ಕೆಮಿಕಲ್ಸ್ ಇವು ಕಂಪನಿಯ ರಸಾಯನಶಾಸ್ತ್ರ ವ್ಯವಹಾರದ ಮೂರು ಮುಖ್ಯ ವಿಭಾಗಗಳಾಗಿವೆ.
2022-23ನೇ ಹಣಕಾಸು ವರ್ಷದಲ್ಲಿ ಈ ಸಂಸ್ಥೆಯು ತನ್ನ ಷೇರುದಾರರಿಗೆ ಶೇಕಡಾ 500ರಷ್ಟು ಲಾಭಾಂಶವನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಈಗ 2023-24ರಲ್ಲಿ ಶೀಘ್ರದಲ್ಲೇ ಮಧ್ಯಂತರ ಲಾಭಾಂಶವನ್ನು ಘೋಷಿಸಲು ಸಜ್ಜಾಗಿದೆ.
ಈ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಬರುವ ಫೆಬ್ರವರಿ 3ರಂದು ನಡೆಯಲಿದೆ. ಕಳೆದ ಡಿಸೆಂಬರ್ 31 ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳುಗಳ ಹಣಕಾಸು ಫಲಿತಾಂಶಗಳನ್ನು ಪರಿಗಣಿಸಿ, ಷೇರುದಾರರಿಗೆ ಮಧ್ಯಂತರ ಲಾಭಾಂಶದ ಘೋಷಣೆ ಮಾಡುವುದಾಗಿ ತಿಳಿಸಿದೆ.
ಈ ಸಂಸ್ಥೆಯು ಮಾರ್ಚ್ 2023 ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ ರೂ 1 ಮುಖಬೆಲೆಯ ಪ್ರತಿ ಷೇರಿಗೆ ಶೇಕಡಾ 500 ರಷ್ಟು ಇಕ್ವಿಟಿ ಡಿವಿಡೆಂಡ್ (ಅಂದರೆ, ಪ್ರತಿ ಷೇರಿಗೆ 5 ರೂಪಾಯಿ) ಘೋಷಿಸಿತ್ತು. ಈ ಸಂಸ್ಥೆಯು ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲಿಸಿದ ಒಟ್ಟು ಆದಾಯ ರೂ. 187.121 ಕೋಟಿ, ಅಲ್ಲದೆ, ನಿವ್ವಳ ಲಾಭವು 52.18 ಕೋಟಿ ರೂ. ಆಗಿತ್ತು,

ದೆಹಲಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ರಾಜ್ಯದ ರಾಜಧಾನಿ: ಬೆಂಗಳೂರು ಈಗ ಕಾರುಗಳ ನಗರಿ

ಗೋಧಿ, ಅಕ್ಕಿ, ಸಕ್ಕರೆ ಬೆಲೆ ಹೆಚ್ಚಳ ಸದ್ಯಕ್ಕಿಲ್ಲ: ವಾಣಿಜ್ಯ ಸಚಿವ ಗೋಯಲ್​ ಹೇಳಿದ್ದೇನು?

ಬೋನಸ್​ ಷೇರು ನೀಡಲಿದೆ ಐಟಿ ಸಾಫ್ಟ್‌ವೇರ್ ಮಿಡ್ ಕ್ಯಾಪ್ ಕಂಪನಿ: ಸ್ಟಾಕ್ ಬೆಲೆ ಒಂದೇ ವರ್ಷದಲ್ಲಿ ಶೇಕಡಾ 350 ಹೆಚ್ಚಳ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:seventeen + 18 =
Remember me
