ನವದೆಹಲಿ:ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಹಾರಾ ಸಮೂಹ ಸಂಸ್ಥೆಯ ಸಮಸ್ಯೆಗಳು ಈ ವರ್ಷದಲ್ಲಿ ಪರಿಹಾರವಾಗಲಿವೆ ಎಂದು ಸಂಸ್ಥೆ ಮುಖ್ಯಸ್ಥ ಸುಬ್ರತಾ ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಹಾರಾದ 42ನೇ ಸಂಸ್ಥಾಪನ ದಿನಾಚರಣೆ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಪತ್ರದ ಮೂಲಕ ಅವರು ಭರವಸೆ ನೀಡಿದ್ದಾರೆ.
ಸಹಾರಾದ ರಿಯಲ್ ಎಸ್ಟೇಟ್ ಮತ್ತು ನಗರ ಅಭಿವೃದ್ಧಿ ವ್ಯವಹಾರಗಳಲ್ಲಿ ವಿದೇಶದ ಎರಡು ದೊಡ್ಡ ಹೂಡಿಕೆದಾರರು ಕೈಜೋಡಿಸಿದ್ದಾರೆ. ಜತೆಗೆ ಸೆಕ್ಯೂರಿಟಿಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾದಲ್ಲಿ (ಸೆಬಿ) ಠೇವಣಿ ಇಟ್ಟಿರುವ 22 ಸಾವಿರ ಕೋಟಿ ರೂಪಾಯಿ ಆದಷ್ಟು ಬೇಗ ಮರಳಿ ಸಿಗಲಿದೆ ಎಂದು ತಿಳಿಸಿದ್ದಾರೆ. ಸೇವೆಗಳಲ್ಲಿ ಸಹಾರಾ ತನ್ನ ಸಂಪ್ರದಾಯಗಳನ್ನು ಎಂದಿಗೂ ಉಳಿಸಿಕೊಂಡು ಬಂದಿದೆ. ಆದರೆ ಅನಪೇಕ್ಷಿತ ಸಂದರ್ಭಗಳಿಂದಾಗಿ ಕೆಲವು ವರ್ಷಗಳಿಂದ ಹಲವು ಸ್ಥಳಗಳಲ್ಲಿ ಪಾವತಿ ವಿಳಂಬವಾಗಿದೆ. ಸಹಾರಾದ ಎಲ್ಲ ಹೂಡಿಕೆದಾರರಿಗೂ ಅವರ ಹಣ ಮರಳಿಸಲಾಗುತ್ತದೆ ಮತ್ತು ವಿಳಂಬವಾದರೆ ಅವರಿಗೆ ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ ಎಂದು ರಾಯ್ ಭರವಸೆ ನೀಡಿದ್ದಾರೆ.
ಸಮೂಹದ ಎರಡು ಕಂಪನಿಗಳ ಬಾಂಡ್​ಗಳಿಂದ ಬಂದ ನಿಧಿಯ ಕುರಿತು ಸೆಬಿ ಜತೆಗಿನ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ರಾಯ್, ಸುಪ್ರೀಂಕೋರ್ಟ್​ನ ನಿರ್ಬಂಧದಿಂದಾಗಿ ಈ ನಿಧಿಯನ್ನು ಸೆಬಿ-ಸಹಾರಾ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿನ ಒಂದು ರೂ.ವನ್ನೂ ನಾವು ಸಂಸ್ಥೆಗೆ ಹಾಗೂ ಹೂಡಿಕೆದಾರರಿಗಾಗಿ ಖರ್ಚು ಮಾಡಲು ಬರುವುದಿಲ್ಲ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
