ಜೈಪುರ:ತನ್ನ ಮಗಳ ಮದುವೆಯ ಬಗ್ಗೆ ಪ್ರತಿಯೊಬ್ಬ ತಂದೆ ತಾಯಿಯೂ ಕನಸು ಕಟ್ಟಿರುತ್ತಾರೆ. ಅಂತೆಯೇ ಇಲ್ಲೂ ಒಬ್ಬ ಕುಟುಂಬ ಅದೇ ರೀತಿ ಕನಸು ಕಾಣುತ್ತಿತ್ತು. ಆದರೆ ಮದುವೆ ಮಂಟಪ ಏರಬೇಕಿದ್ದ ವರನಿಗೆ, ಮುಹೂರ್ತಕ್ಕೆ ಕೆಲವೇ ಗಂಟೆಗಳ ಮೊದಲು ಕರೊನಾ ಪಾಸಿಟಿವ್​ ವರದಿ ಬಂದಿದೆ. ಹೀಗಿದ್ದರೂ ಮದುವೆ ಮಾತ್ರ ನಡೆದಿದೆ. ಅದು ಹೇಗೆ ಎನ್ನುವುದಕ್ಕೆ ಇದನ್ನು ಓದಿ.
ಇದನ್ನೂ ಓದಿ:ಪತ್ನಿ ಕೊಂದು ಆಕೆಯ ಪಾಲಕರು, ಪೊಲೀಸರಿಗೆ ಕರೆ ಮಾಡಿದ ಪತಿ: ಆತಂಕದಿಂದ ಬಂದವರಿಗೆ ಕಾದಿತ್ತು ಶಾಕ್​!
ರಾಜಸ್ಥಾನದ ಅಲ್ವಾರ ಜಿಲ್ಲೆಯ ನೀಮ್ರಾನ ಪಂಚಾಯತ್ ಸಮಿತಿ ಪ್ರದೇಶದ ಕುಟಿನಾ ಗ್ರಾಮದ ನಿವಾಸಿ ರಾಮೇಶ್ವರ ದಯಾಳ್ ಪ್ರಜಾಪತ್ ಅವರ ಪುತ್ರಿ ದೀಪಿಕಾಗೆ ಹೆಸರಿನ ವಧುವನ್ನು ಪೆಹಲ್ ತಹಸಿಲ್ ಮುಂಡಾವರ್ ಅವರಿಗೆ ಮದುವೆ ಮಾಡಿಕೊಡಲು ನಿಶ್ಚಯಿಸಲಾಗಿತ್ತು. ಡಿಸೆಂಬರ್​ 7ಕ್ಕೆ ಮದುವೆ ಮುಹೂರ್ತ ಇಡಲಾಗಿತ್ತು. ಆದರೆ ಈ ಮಧ್ಯೆ ವರನಿಗೆ ಕರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಲಾಗಿದೆ. ಆತನ ಮದುವೆ ದಿನವೇ ಕರೊನಾ ವರದಿ ಬಂದಿದ್ದು, ಅದರಲ್ಲಿ ವರನಿಗೆ ಸೋಂಕಿರುವುದು ದೃಢವಾಗಿದೆ. ಅದೇ ಕಾರಣದಿಂದಾಗಿ ಮದುವೆ ಮುಂದೆ ಹಾಕುವಂತೆ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅದಕ್ಕೆ ಎರಡೂ ಕುಟುಂಬ ಒಪ್ಪದಿದ್ದಾಗ, ವರನ ಕಡೆಯಿಂದ ಕೇವಲ ಐದು ಜನರಿಗೆ ಮಾತ್ರವೇ ಮದುವೆಗೆ ಬರಲು ಅವಕಾಶ ನೀಡಲಾಯಿತು. ಅದೇ ರೀತಿ ವಧುವಿನ ಕಡೆಯವರಿಗೂ ಮದುವೆಗೆ ಬಾರದಂತೆ ನಿಷೇಧ ಹೇರಲಾಯಿತು.
ಇದನ್ನೂ ಓದಿ:ಜನವರಿ 9ಕ್ಕೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ
ಕೇವಲ ವಧು ವರ, ಅವರ ತಂದೆ ತಾಯಿ ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ವರ, ವಧುವಿನ ತಂದೆ ತಾಯಿ ಮತ್ತು ಪಂಡಿತರು ಪಿಪಿಇ ಕಿಟ್​ ಧರಿಸಿ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ವಧು ಮಾತ್ರ ಪಿಪಿಇ ಕಿಟ್​ ಧರಿಸಿಲ್ಲ. ತಾನು ಮದುವೆಯಾಗುವ ಪತಿಗೆ ತಾನೆ ಕರೊನಾ ಬಂದಿರುವುದು ಎನ್ನುವ ಅಸಡ್ಡೆಯೋ ಅಥವಾ ತನ್ನ ಚಂದದ ಅಲಂಕಾರ ಪಿಪಿಇ ಕಿಟ್​ನಲ್ಲಿ ಕಾಣದಂತಾಗುತ್ತದೆ ಎನ್ನುವ ಕಾರಣಕ್ಕೋ ಒಟ್ಟಿನಲ್ಲಿ ಆಕೆ ಪಿಪಿಇ ಕಿಟ್​ ಧರಿಸಿಲ್ಲ. ಮದುವೆ ನಡೆದ ಸ್ಥಳದಲ್ಲಿ ವೈದ್ಯಾಧಿಕಾರಿಗಳ ತಂಡವೂ ಇತ್ತು ಎನ್ನಲಾಗಿದೆ. ಆದರೆ ಮದುವೆಯಲ್ಲಿ ಕ್ವಾರಂಟೈನ್​ ನಿಯಮವನ್ನು ಸಂಪೂರ್ಣವಾಗಿ ಮುರಿದಿರುವುದಾಗಿ ವರದಿಯಾಗಿದೆ.
ಮದುವೆ ಮುಗಿದ ನಂತರ ವಧು ಗಂಡನ ಮನೆಗೆ ತೆರಳಿದ್ದರೆ ವರ ಮಾತ್ರ ಕ್ವಾರಂಟೈನ್​ ಕೇಂದ್ರಕ್ಕೆ ತೆರಳಿದ್ದಾನೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + four =
Remember me
