ಬೆಂಗಳೂರು:ಚಂದ್ರಯಾನ 3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಗ್ರೀಸ್​ನ ರಾಜಧಾನಿ ಅಥೇನ್ಸ್​ನಿಂದ ಹೊರಟು ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿರುವ ಪ್ರಧಾನಿ ಮೋದಿ, ಇಸ್ರೋ ಕಚೇರಿಯತ್ತ ತೆರಳುವ ಮುನ್ನ ಎಚ್​ಎಎಲ್ ವಿಮಾನ ನಿಲ್ದಾಣದ​ ಮುಂಭಾಗ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಭಾರತ್ ಮಾತಾಕಿ ಜೈ, ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು ಪ್ರಧಾನಿ ಮೋದಿ ಘೋಷಣೆ ಕೂಗಿದರು. ಇದಕ್ಕೆ ಜನರು ಸಹ ಧ್ವನಿಗೂಡಿಸಿದರು. ಬಳಿಕ ಮಾತು ಆರಂಭಿಸಿದ ಪ್ರಧಾನಿ, ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಜನತೆಯ ದರ್ಶನವಾಗಿದೆ. ಇಡೀ ಪ್ರಪಂಚದಾದ್ಯಂತ ವಿಜ್ಞಾನವನ್ನು ನೋಡುವವರು ಹಾಗೂ ಮಾನವತಾವಾದಿಗಳು ನಮ್ಮನ್ನು ಶ್ಲಾಘಿಸಿದ್ದಾರೆ. ನಾನು ವಿದೇಶದಲ್ಲಿದ್ದೆ, ನಾನು ಭಾರತಕ್ಕೆ ಹೋಗೊದಿದ್ರೆ ಮೊದಲು ಬೆಂಗಳೂರಿಗೆ ಭೇಟಿ ನೀಡುವುದು ಎಂದು ತೀರ್ಮಾನ ಮಾಡಿದೆ. ವಿಜ್ಞಾನಿಗಳನ್ನು ಅಭಿನಂಧಿಸಲು ಬೆಂಗಳೂರಿಗೆ ಆಗಮಿಸಿದೆ ಎಂದರು.
ಇದನ್ನೂ ಓದಿ:ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿರಾಸೆ: ಕಾವೇರಿ ನೀರು ಬಿಡುಗಡೆ ಆದೇಶ ನೀಡಲು ನಕಾರ; ಪ್ರಾಧಿಕಾರಕ್ಕೆ ಮೊರೆ ಹೋಗಲು ಸೂಚನೆ
ದೇಶ ಇಂದು ಬೆಳಗುತ್ತಿದೆ. ಅದು ಬೆಂಗಳೂರಿನಲ್ಲಿ ಕಾಣುತ್ತಿದೆ. ಗ್ರೀಸ್, ಜೋಹಾನ್ಸ್‌ಬರ್ಗ್‌ನಲ್ಲಿಯೂ ಅದು ಕಾಣುತ್ತಿದೆ. ವಿಜ್ಞಾನದಲ್ಲಿ ವಿಶ್ವಾಸ ಹೊಂದಿರುವ ಇಷ್ಟೊಂದು ಜನ ಉತ್ಸಾಹದಿಂದ ಇದ್ದಾರೆ. ಬೆಳ್ಳಂಬೆಳಗ್ಗೆ ಇಷ್ಟೊಂದು ಜನ ಬಂದಿರೋದು ಸಂತೋಷ ತಂದಿದೆ. ನನಗೂ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಯಾವಾಗ ಭಾರತಕ್ಕೆ ಬರ್ತೀನೋ‌ ಅಂದುಕೊಳ್ಳುತ್ತಿದ್ದ. ಕೂಡಲೇ ಬೆಂಗಳೂರಿಗೆ ಹೊರಟು ಬಂದೆ. ಇಲ್ಲಿ ಮಕ್ಕಳೂ ಸಹ ಬಂದಿದಾರೆ, ಅವರೇ ನಮ್ಮ ಭವಿಷ್ಯ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಬೆಳಿಗ್ಗೆಯೇ ಬೆಂಗಳೂರಿಗೆ ಆಗಮಿಸುವುದರಿಂದ ರಾಜ್ಯಪಾಲರು, ಸಿಎಂ, ಡಿಸಿಎಂ ಅವರಿಗೆ ನಾನೇ ಭೇಟಿ ಮಾಡೊದು ಬೇಡ ಎಂದು ಹೇಳಿದ್ದೆ. ನಾನು ಬೇಗ ಬಂದು ಹೋಗ್ತೀನಿ, ಅಷ್ಟು ಬೇಗ ಯಾಕೆ ಬರ್ತಿರಾ ಎಂದು ನಾನೇ ಹೇಳಿದೆ. ನಮ್ಮ ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿ ಹೋಗ್ತೀನಿ. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಸಿಎಂ, ಡಿಸಿಎಂ ಭೇಟಿ ಮಾಡ್ತೀನಿ ಎಂದಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇಸ್ರೋಗೆ ಹೊರಡುವ ಮುನ್ನ ಎಚ್​ಎಎಲ್​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ನಿಂತಿದ್ದ ಜನರತ್ತ ಪ್ರಧಾನಿ ಮೋದಿ ಕೈ ಬೀಸಿದರು.
ಚಂದ್ರಯಾನ 3 ಯಶಸ್ವಿ: ಇಸ್ರೋಗೆ ಭೇಟಿ ನೀಡಲು ಗ್ರೀಸ್​ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ

ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿರಾಸೆ: ಕಾವೇರಿ ನೀರು ಬಿಡುಗಡೆ ಆದೇಶ ನೀಡಲು ನಕಾರ; ಪ್ರಾಧಿಕಾರಕ್ಕೆ ಮೊರೆ ಹೋಗಲು ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seven =
Remember me
