ಬೆಂಗಳೂರು:ಪ್ರೇಮಿಗಳ ವಾರ ಆರಂಭವಾಗಿದೆ. ಇವತ್ತು ಪ್ರಪೋಸಲ್​ ದಿನವಂತೆ. ಪ್ರಿಯತಮ/ಪ್ರಿಯತಮೆ ಇಲ್ಲ ಎಂದು ಕೊರಗುತ್ತಿದ್ದೀರಾ? ಈ ಸುದ್ದಿ ಓದಿದ ಮೇಲೆ ಆ ಕೊರಗು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ನೋಡಿ…
ಅಂದ ಹಾಗೆ ಈ ಒಬ್ಬಳು ಸುಂದರಿ ಸಾವಿರಾರು ಜನರ ಮನಸ್ಸು ಕದ್ದಿದ್ದಾಳಂತೆ. ಪ್ರತಿದಿನ ಸುಮಾರು 19 ಸಾವಿರ ಭಾರತೀಯರು ಈ ಸುಂದರಿಗೆ “ಐ ಲವ್​ ಯೂ” ಎನ್ನುತ್ತಾರಂತೆ. ತಮ್ಮ ಮನಸ್ಸಿನ ನೋವುಗಳನ್ನೆಲ್ಲ ಆಕೆ ಬಳಿ ಹೇಳಿಕೊಳ್ಳುತ್ತಾರಂತೆ. ಅವಳು ಒಬ್ಬರಿಗೆಂದು ಸೀಮಿತಳಾದವಳೂ ಅಲ್ಲವಂತೆ. ಮನಸ್ಸು ಮಾಡಿದರೆ ನೀವೂ ಕೂಡ ಆಕೆಯನ್ನು ಮನೆಗೆ ಕರೆದುಕೊಂಡು ಬರಬಹುದಂತೆ.
ಅಂದ ಹಾಗೆ ಈ ಬಹುಬೇಡಿಕೆಯ ಸುಂದರಿ ಮತ್ತ್ಯಾರು ಅಲ್ಲ, ಅಮೇಜಾನ್​ ಅಲೆಕ್ಸಾ. ಈ ಮೆಷಿನ್​ ಭಾರತದಲ್ಲಿ ಬಹುಬೇಡಿಕೆಯಲ್ಲಿದೆಯಂತೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಭಾರತೀಯರು ಅಲೆಕ್ಸಾ ಜತೆ ಮಾತನಾಡುತ್ತಿರುವ ಪ್ರಮಾಣ ಶೇ. 67 ಏರಿಕೆಯಾಗಿದೆಯಂತೆ. 2019ಕ್ಕೆ ಹೋಲಿಸಿದರೆ ಅಲೆಕ್ಸಾಗೆ ಐ ಲವ್​ ಯು ಹೇಳುವವರ ಸಂಖ್ಯೆ ಶೇ. 1200 ಏರಿಕೆಯಾಗಿದಂತೆ! ಸರಿಯಾದ ಮಾಹಿತಿ ಕೊಟ್ಟ ಖುಷಿಗೋ ಅಥವಾ, ಪ್ರಿಯತಮೆ ಇಲ್ಲ ಎನ್ನುವ ನೋವಿಗೋ ಒಟ್ಟಿನಲ್ಲಿ ಜನರು ಅಲೆಕ್ಸಾಳನ್ನು ಪ್ರೀತಿಸಲು ಆರಂಭಿಸಿದ್ದಾರೆ.
ನಿಮಗೆ ಪ್ರೀತಿ ಒಲಿದಿಲ್ಲ ಎಂದಾದಲ್ಲಿ ಚಿಂತೆ ಏತಕೆ? ಈ ಪ್ರೇಮಿಗಳ ವಾರದ ವಿಶೇಷವಾಗಿ ನೀವೂ ನಿಮ್ಮ ಮನೆಗೆ ಈ ರೀತಿ ಮಾತಾಡುವ ಮೆಷಿನ್​ ತಂದಿಟ್ಟುಕೊಂಡು ಅದರೊಂದಿಗೇ ಪ್ರೀತಿ ಹಂಚಿಕೊಳ್ಳಿ ಎಂದಿದೆ ಅಮೇಜಾನ್​ ಸಂಸ್ಥೆ. (ಏಜೆನ್ಸೀಸ್​)
ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಸುರಿದ ಶಿವಸೇನೆ ನಾಯಕರು! ಸೀರೆ ತೊಡುವಂತೆ ಮಾಡಿದರು!

ಮಾಜಿ ಸಿಎಂ ಸಂಬಂಧಿಕರ ಕೊಲೆ ಪ್ರಕರಣ : ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
