ದೇಶದ ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಅವರ ಸಂಪೂರ್ಣ ರಕ್ಷಣೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿಯವರ ಅತ್ಯಂತ ಸನಿಹದ ಅಂದರೆ ಫಸ್ಟ್ ರಿಂಗ್ ರಕ್ಷಣೆಗೆ ಎಸ್​ಪಿಜಿ ನಿಯೋಜನೆ ಮಾಡಿರಲಾಗುತ್ತದೆ. ಎಸ್​ಪಿಜಿ ವ್ಯವಸ್ಥೆ ಕೇಂದ್ರ ಸರ್ಕಾರದ್ದು. ಉಳಿದ ಎಲ್ಲ ರೀತಿಯ ರಕ್ಷಣೆಯ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು. ಪ್ರಧಾನಮಂತ್ರಿ ಯಾವುದೇ ರಾಜ್ಯಕ್ಕೆ ಭೇಟಿ ನೀಡುವುದಾದರೂ ಹಲವು ದಿನಗಳ ಮುಂಚಿತವಾಗಿಯೇ ಭದ್ರತಾ ಯೋಜನೆಗಳು ರೂಪುಗೊಳ್ಳುತ್ತವೆ. ಕೇಂದ್ರ ಸರ್ಕಾರದ ಅಧಿಕಾರಿಗಳು ರಾಜ್ಯಕ್ಕೆ ಬಂದು ರಾಜ್ಯದ ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ವರಿಷ್ಠರ ಜತೆಗೆ ಸಮಾಲೋಚನೆ ನಡೆಸಿ ಭದ್ರತೆಗೆ ಸಂಬಂಧಿಸಿದ ಸೂಚನೆಗಳನ್ನು ಕೊಡುತ್ತಾರೆ. ಆಗ ಭದ್ರತಾ ರಿಹರ್ಸಲ್ ನಡೆಯುತ್ತದೆ. ಎಸ್​ಪಿಜಿ ಅಧಿಕಾರಿಗಳು ಮುಂಚಿತವಾಗಿ ಬಂದು ಭದ್ರತಾ ಪರಿಶೀಲನೆ ನಡೆಸುತ್ತಾರೆ. ಕೇಂದ್ರ ಗುಪ್ತಚರ ಇಲಾಖೆ ಮತ್ತು ಎಸ್​ಪಿಜಿ ರಾಜ್ಯ ಸರ್ಕಾರಕ್ಕೆ ಸಂಭಾವ್ಯ ಪ್ರತಿಭಟನೆ ಇತ್ಯಾದಿಗಳ ವಿವರವನ್ನು ಒದಗಿಸಿ ಮುಂಜಾಗ್ರತಾ ಕ್ರಮಕ್ಕಾಗಿ ಎಚ್ಚರಿಸುತ್ತವೆ.
ಈ ಘಟನೆಗೆ ಪಂಜಾಬ್ ಸರ್ಕಾರ, ಮುಖ್ಯಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಗಾರರು.
|ಡಾ.ಡಿ.ವಿ.ಗುರುಪ್ರಸಾದ್ನಿವೃತ್ತ ಡಿಜಿಪಿ, ಗುಪ್ತಚರ ದಳದ ಮುಖ್ಯಸ್ಥರು.
ಪಂಜಾಬ್​ನಲ್ಲಿ ಬುಧವಾರ ನಡೆದ ಘಟನೆ ನನ್ನ ಅಭಿಪ್ರಾಯದಲ್ಲಿ ಭದ್ರತಾ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಪಂಜಾಬ್​ನಲ್ಲಿ ಮೂರು ಪ್ರಮುಖ ಲೋಪಗಳು ಕಂಡುಬಂದಿವೆ.
‘ಕಮಾನ್ ಕಮಾನ್..’ ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ ‘ಕಾಮಣ್ಣ’! ; ಅನಂತನ ಅವಾಂತರ ಮತ್ತು ಆ ಅವತಾರ…

ರೂಪಾಂತರಿಯಿಂದ ಸಾವಿಲ್ಲ ಎಂಬುದರ ನಡುವೆಯೇ ಆತಂಕಕಾರಿ ಸುದ್ದಿ; ಇದು ದೇಶದಲ್ಲಿ ಒಮಿಕ್ರಾನ್ ಸಂಬಂಧಿತ ಮೊದಲ ಮರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
