ನವದೆಹಲಿ:ನಮಗೆ ಏನೇ ಅನುಮಾನ ಬಂದರೂ ಅದನ್ನು ಪರಿಹರಿಸಿಕೊಳ್ಳಲು ತಕ್ಷಣವೇ ಗೂಗಲ್​ ಸರ್ಚ್​ ಮಾಡುತ್ತೇವೆ. ಆದರೆ, ತಾಜಾ ವರದಿಗಳ ಪ್ರಕಾರ ಇಲ್ಲಿಯವರೆಗೂ ಉಚಿತವಾಗಿದ್ದ ಈ ಸೇವೆಯನ್ನು ಇನ್ಮುಂದೆ ಹಣ ಕೊಟ್ಟು ಪಡೆಯಬೇಕಾಗುತ್ತದೆ. ಗೂಗಲ್​ ಸರ್ಚ್​ಗೆ ಶುಲ್ಕ ವಿಧಿಸಲು ಕಂಪನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಗೂಗಲ್​ ಕಂಪನಿಯು ಸರ್ಚ್ ಇಂಜಿನ್‌ನಲ್ಲಿ ಮಾಡಬೇಕಾದ ಬದಲಾವಣೆಗಳನ್ನು ಪರಿಗಣಿಸುತ್ತಿದೆ ಮತ್ತು ಪ್ರೀಮಿಯಂ ಫೀಚರ್ಸ್​ ಶುಲ್ಕ ವಿಧಾನವನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದೆ ಮಾತಿದೆ. ಈ ಪ್ರೀಮಿಯಂ ಫೀಚರ್ಸ್​ ಕೃತಕ ಬುದ್ಧಿಮತ್ತೆಯೊಂದಿಗೆ (AI) ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಈಗಾಗಲೇ ಒಂದು ಸುಳಿವು ನೀಡಿದೆ.
ಕೆಲವು ಸಮಯದ ಹಿಂದೆ, ಕಂಪನಿಯು ಗೂಗಲ್ ಸರ್ಚ್​ನೊಂದಿಗೆ ಜನರೇಟಿವ್ ಎಐ ಸ್ನ್ಯಾಪ್‌ಶಾಟ್ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಇದೀಗ ಸರ್ಚ್​ ಇಂಜಿನ್​ ವಿಚಾರದಲ್ಲೂ ಪ್ರಾಯೋಗಿಕವಾಗಿ ಮಾಡುವ ಗುರಿಯನ್ನು ಹೊಂದಿದೆ. ತಮ್ಮ ಪ್ರಯೋಗ ಯಶಸ್ಸು ಕಂಡಲ್ಲಿ, ಮುಂದಿನ ದಿನಗಳಲ್ಲಿ ಸರ್ಚ್​ ಇಂಜಿನ್​ ಸೇವೆಯನ್ನೂ ಸಹ ಹಣ ಕೊಟ್ಟು ಪಡೆಯಬೇಕಾಗುತ್ತದೆ.
ಪ್ರೀಮಿಯಂ ಚಂದಾದಾರಿಕೆಗಳೊಂದಿಗೆ ಎಐ ಫೀಚರ್​ಗಳನ್ನು ಸಂಯೋಜಿಸುವ ಆಯ್ಕೆಗಳನ್ನು ಗೂಗಲ್​ ಅನ್ವೇಷಿಸುತ್ತಿದೆ. ಜಿಮೇಲ್ ಮತ್ತು ಡಾಕ್ಸ್ ಜೊತೆಗೆ, ಕಂಪನಿಯು ಎಐ ಅಸಿಸ್ಟೆಂಟ್ ಫೀಚರ್ಸ್​ ಸಹ ನೀಡಲಿದೆ.
ಈ ವಿಚಾರವನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಆದರೆ, ಸರ್ಚ್​ ಇಂಜಿನ್​ಗೆ ಗೂಗಲ್​ ಶುಲ್ಕ ವಿಧಿಸಿದರೆ ಅಚ್ಚರಿಪಡಬೇಕಿಲ್ಲ. ಇದುವರೆಗೂ ಉಚಿತವಾಗಿ ಸೇವೆ ನೀಡುತ್ತಿದ್ದ ಪೇಟಿಎಂ, ಫೋನ್​ಪೇ ಹಾಗೂ ಗೂಗಲ್​ಪೇಗಳು ಇದೀಗ ಮೊಬೈಲ್​ ರೀಚಾರ್ಜ್​ ಮೇಲೆ ಶುಲ್ಕ ವಿಧಿಸುತ್ತಿವೆ. ಮುಂದಿನ ದಿನಗಳಲ್ಲಿ ದಿನದ ವಹಿವಾಟಿನ ಮಿತಿ ಹೇರಿ, ಅದರ ಮೇಲೆ ನಡೆಸುವ ವಹಿವಾಟುಗಳಿಗೆ ಶುಲ್ಕ ವಿಧಿಸಿದರೂ ಅಚ್ಚರಿ ಪಡಬೇಕಿಲ್ಲ.(ಏಜೆನ್ಸೀಸ್​)
ಭರ್ಜರಿ ಆಫರ್​! ಇಲ್ಲಿಗೆ ಭೇಟಿ ಕೊಟ್ರೆ ಫ್ರೀ ಆಗಿ ಎಷ್ಟು ಕುರಿಗಳು ಬೇಕಾದ್ರೂ ಕೊಂಡೊಯ್ಯಬಹುದು

ಯುಗಾದಿ ಹಬ್ಬಕ್ಕೆ ಶುಭ ಕೋರಿ, ವಿಶೇಷ ಸಂದೇಶ ಕಳಿಸಿದ ಮಾಜಿ ಪ್ರಧಾನಿ ದೇವೇಗೌಡ!

ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಧನುಷ್​ ಮತ್ತು ಐಶ್ವರ್ಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
