ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ದೇಶ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿಯೂ ಸುದ್ದಿಯಾಗಿದೆ. ಈ ಕುರಿತಾಗಿ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆದಿವೆ. ಫೇಸ್​ಬುಕ್​, ವಾಟ್ಸ್​ಆ್ಯಪ್​ನಂತಹ ಅಪ್ಲಿಕೇಷನ್​ಗಳಲ್ಲಿ ಸಾಕಷ್ಟು ದ್ವೇಷ ಸಂದೇಶಗಳು ವಿನಿಮಯವಾಗಿವೆ. ವಾಟ್ಸ್​ಆ್ಯಪ್​ನಲ್ಲಿ ವಿನಿಮಯವಾಗುತ್ತಿರುವ ದ್ವೇಷ ಸಂದೇಶಗಳಿಗೆ ಬ್ರೇಕ್​ ಹಾಕುವ ಸಲುವಾಗಿ ದೆಹಲಿ ಸರ್ಕಾರ ಹೊಸದೊಂದು ಪ್ಲ್ಯಾನ್​ ಮಾಡಿದೆ.
ನಿಮ್ಮ ವಾಟ್ಸ್​ಆ್ಯಪ್​ಗೆ ಯಾರಾದರೂ ದ್ವೇಷ ಸಂದೇಶವನ್ನು ಕಳುಹಿಸಿದರೆ, ನೀವು ಆ ಸಂದೇಶ ಕಳುಹಿಸಿದವರ ಅಥವಾ ಫಾರ್ವರ್ಡ್​ ಮಾಡಿದವರ ಹೆಸರು ಮತ್ತು ಮೊಬೈಲ್​ ಸಂಖ್ಯೆಯ ಮೇಲೆ ದೂರನ್ನು ದಾಖಲಿಸಬಹುದು. ಅಂಥವರ ವಿರುದ್ಧ ಸರ್ಕಾರ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.
ಈ ರೀತಿಯ ದೂರುಗಳನ್ನು ತೆಗೆದುಕೊಳ್ಳುವುದಕ್ಕೆಂದೇ ಹೊಸ ವಾಟ್ಸ್​ಆ್ಯಪ್​ ನಂಬರ್​ ಒಂದನ್ನು ತೆರೆಯುವ ಚಿಂತನೆಯನ್ನು ದೆಹಲಿ ಸರ್ಕಾರ ನಡೆಸಿದೆ. ವಾಟ್ಸ್​ಆ್ಯಪ್​ನಲ್ಲಿ ಬರುವ ದೂರುಗಳನ್ನು ಅಧಿಕಾರಿಗಳು ಪರಿಶೀಲಿಸಿ, ಸತ್ಯಾಂಶ ಹೊಂದಿರುವ ದೂರುಗಳನ್ನು ಗಣನೆಗೆ ತೆಗೆದುಕೊಂಡು ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
