ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ರಸ್ತೆ ತುಂಬೆಲ್ಲಾ ಸಾಲು ಗಟ್ಟಿ ನಿಂತ ವಾಹನಗಳೇ ಕಾಣುತ್ತಿವೆ. ಸೂಜಿ ಇಡದಷ್ಟು ಜಾಗವಿಲ್ಲದಂತೆ ರಸ್ತೆಯ ಮೇಲೆ ವಾಹನಗಳು ನಿಂತಿವೆ.
ಮಳೆ ಬಿದ್ದಾಗ ಅಥವಾ ಅಪಘಾತ ಸಂದರ್ಭದಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿ ಈಗ ಬೇರೆ ಕಾರಣಕ್ಕೆ ರಸ್ತೆಯುದ್ಧಕ್ಕೂ ವಾಹನಗಳು ಸಾಲು ಸಾಲು ನಿಂತಿವೆ.
#WATCH| Heavy traffic at Noida-Delhi Link Road at Chilla border due to security checks by UP Police in wake of Bharat Bandh against#AgnipathScheme
ADCP Noida, Ranvijay Singh says, "We're ensuring that no protester can pass through here, we're coordinating with Delhi Police."pic.twitter.com/SczgaxTn3W
— ANI UP/Uttarakhand (@ANINewsUP)June 20, 2022

ದೆಹಲಿ-ಗುರುಗಾಂವ್​​ ಹೆದ್ದಾರಿಯಲ್ಲಿ ಕಾರುಗಳು ಕಿಲೋಮೀಟರ್​ ಗಟ್ಟಲೆ ನಿಂತಿವೆ. ಅಷ್ಟೇ ಅಲ್ಲದೇ ನೋಯ್ಡಾ-ದಿಲ್ಲಿ, ಮೀರತ್​ ಎಕ್ಸ್​ಪ್ರೆಸ್​​ವೇ, ಆನಂದ್​ವಿಹಾರ್, ಪ್ರಗತಿ ಮೈದಾನ ಹೀಗೆ ಎಲ್ಲಾ ರಸ್ತೆಯಲ್ಲೂ ಸಹ ಟ್ರಾಫಿಕ್​ ಜಾಮ್​ ಕಂಡುಬಂದಿದೆ. ಬೆಳಗ್ಗೆಯಿಂದ ಅಲ್ಲೇ ನಿಂತಿರುವ ವಾಹನ ಸವಾರರು ಮಾತ್ರ ಹೈರಾಣಾಗಿದ್ದಾರೆ.
Heavy traffic jam on Sarhaul border at Delhi-Gurugram expressway as Delhi Police begins checking of vehicles in wake of#BharatBandhagainst#AgnipathScheme, called by some organisations.pic.twitter.com/1VCo5RcHAJ
— ANI (@ANI)June 20, 2022

ಇದಕ್ಕೆ ಕಾರಣ ಇಷ್ಟೇ.. ಅಗ್ನಿಪಥ ಯೋಜನೆ ವಿರೋಧಿಸಿ ಕೆಲವರು ಬುಧವಾರ ಭಾರತ್​ ಬಂದ್​ ಘೋಷಿಸಿದ್ದಾರಂತೆ. ಅದಕ್ಕಾಗಿಯೇ ದೆಹಲಿ ಒಳಗೆ ಪ್ರವೇಶಿಸುವ ಪ್ರತಿಯೊಂದು ವಾಹನ ತಪಾಸಣೆ ಮಾಡುವ ಸಲುವಾಗಿ ಪೊಲೀಸರು ಒಂದೊಂದೇ ವಾಹನವನ್ನು ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಇಲ್ಲಿ ಟ್ರಾಫಿಕ್​ ಜಾಮ್​ ಸಂಭವಿಸಿದೆ.
ಈಗಾಗಲೇ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆದಿರುವ ಕಾರಣದಿಂದಲೇ ಇದನ್ನು ತಡೆಗಟ್ಟಲು ಪೊಲೀಸರು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.(ಏಜೆನ್ಸೀಸ್​)
ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
