ನವದೆಹಲಿ:ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಡಿ.15ರಂದು ರೀಡಿಂಗ್​ ಹಾಲ್​ನಲ್ಲಿ ನಡೆದಿದ್ದೇನು ಎನ್ನುವ ಸತ್ಯಾಂಶವನ್ನು ದೆಹಲಿ ಪೊಲೀಸರು ಬಿಚ್ಚಿಟ್ಟಿದ್ದಾರೆ. ಪೊಲೀಸರು ರೀಡಿಂಗ್​ ಹಾಲ್​ಗೆ ನುಗ್ಗಿ ಲಾಠಿ ಚಾರ್ಜ್​ ಮಾಡುವುದುಕ್ಕೂ ಮೊದಲು ಅಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯವನ್ನು ದೆಹಲಿ ಪೊಲೀಸ್​ ಕ್ರೈಂ ಬ್ರ್ಯಾಂಚ್​ನ ವಿಶೇಷ ತನಿಖಾ ತಂಡ ಬಿಡುಗಡೆ ಮಾಡಿದೆ.
ನಿನ್ನೆ (ಫೆ.16) ಜಾಮಿಯಾ ವಿವಿಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ ವಿಡಿಯೋವೊಂದನ್ನು ವಿವಿಯ ಸಮನ್ವಯ ಸಮಿತಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಾಕಿತ್ತು. ಡಿಸೆಂಬರ್​ 15ರ ವಿಡಿಯೋವಾಗಿದ್ದ ಅದರಲ್ಲಿ ಪೊಲೀಸರು ರೀಡಿಂಗ್​ ಹಾಲ್​ನೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ್ದು ಸೆರೆಯಾಗಿತ್ತು. ಈ ವಿಡಿಯೋ ಸಾಕಷ್ಟು ಸುದ್ದಿ ಮಾಡಿದ್ದು ಜನರು ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾರಂಭಿಸಿದ್ದರು. ಆದರೆ ಇದಾದ ಸ್ವಲ್ಪ ಸಮಯಕ್ಕೆ ದೆಹಲಿ ಪೊಲೀಸರು ಅದೇ ದಿನದ ಸಿಸಿಟಿವಿ ದೃಶ್ಯವೊಂದನ್ನು ಬಿಡುಗಡೆ ಮಾಡುವ ಮೂಲಕ ಸತ್ಯಾಂಶವನ್ನು ಹೊರಗೆಳೆದಿದ್ದಾರೆ.
ರೀಡಿಂಗ್​ ಹಾಲ್​ಗೆ ಪೊಲೀಸರು ಹೋಗುವುದಕ್ಕೂ ಸ್ವಲ್ಪ ಮೊದಲು ಚಿತ್ರಿತವಾಗಿರುವ ಆ ವಿಡಿಯೋದಲ್ಲಿ ಕಾಲೇಜಿನ ಬಾಲ್ಕನಿಯಲ್ಲಿ ನಿಂತ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಸೆರೆಯಾಗಿದೆ. ಮೊದಲು ಒಂದಿಬ್ಬರಿದ್ದ ಗುಂಪು ನಂತರ ಹತ್ತಾರು ಜನರದ್ದಾಗಿದ್ದು ಅದರಲ್ಲಿ ಕೆಲವರು ಕಲ್ಲುಗಳನ್ನು ತಂದು ಪೊಲೀಸರ ಮೇಲೆ ಎಸೆದಿದ್ದಾರೆ.
ಹಾಗೆಯೇ ಮಾಸ್ಕ್​ ತೊಟ್ಟ ಕೆಲ ಪ್ರತಿಭಟನಾಕಾರರು ಓಡಿ ಬಂದು ಕಾಲೇಜಿನ ಕ್ಲಾಸ್​ ರೂಂ, ರೀಡಿಂಗ್​ ಹಾಲ್​ನಲ್ಲಿ ಅಡಗಿ ಕುಳಿತಿದ್ದಾರೆ. ಇದೇ ಕಾರಣಗಳಿಂದಾಗಿ ಪೊಲೀಸರು ರೀಡಿಂಗ್​ ಹಾಲ್​ಗೆ ನುಗ್ಗಿ ಲಾಠಿ ಚಾರ್ಜ್​ ಮಾಡಿದ್ದಾರೆ.ಡಿಸೆಂಬರ್​ 15ರಂದು ಜಾಮಿಯಾ ವಿವಿಯ ಆವರಣವು ಸಿಎಎ ವಿರುದ್ಧದ ಹೋರಾಟದಿಂದಾಗಿ ಅಕ್ಷರಶಃ ಹಿಂಸಾತ್ಮಕ ವಾತಾವರಣಕ್ಕೆ ತಿರುಗಿತ್ತು. ಪರಿಸ್ಥಿತಿಯ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್​ ಮಾಡಲೇಬೇಕಾದ ಅವಶ್ಯಕತೆ ಉಂಟಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
