ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಅಪ್​ಲೋಡ್​ ಆಗುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ತನ್ನ ವಿಶೇಷತೆಯಿಂದಲೇ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಅದೇ ಸಾಲಿಗೆ ಪುಟ್ಟ ಬಾಲಕನೊಬ್ಬ ಗಿಳಿಯ ಜೊತೆಗಿರುವ ಕುತೂಹಲಕಾರಿ ಅಥವಾ ಅಚ್ಚರಿ ಮೂಡಿಸುವ ವಿಡಿಯೋ ಸೇರಿಕೊಂಡಿದೆ.
ಹುಳುಕು ಹಲ್ಲನ್ನು ಪತ್ತೆಹಚ್ಚಿ ಅದನ್ನು ಕಿತ್ತುಹಾಕುವ ಕೆಲಸ ದಂತವೈದ್ಯರದ್ದು. ಆದರೆ, ಗಿಳಿ ಆ ಕೆಲಸವನ್ನು ಮಾಡುತ್ತದೆ ಅಂದರೆ ನೀವು ನಂಬುತ್ತೀರಾ? ಈ ವಿಡಿಯೋ ನೋಡಿದ ಮೇಲೆ ನೀವು ನಂಬಲೇಬೇಕು.
ಹೌದು, ಬಾಲಕನ ಬಾಯಿಯಿಂದ ಗಿಣಿ ಹಲ್ಲು ತೆಗೆಯುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಗಿಳಿ ಹುಳುಕಾದ ಹಲ್ಲನ್ನು ಹುಡುಕಿ ತುಂಬಾ ನಾಜೂಕಾಗಿ ಕಿತ್ತು ಹಾಕುತ್ತದೆ. ಇದನ್ನು ನೋಡಿದವರು ಒಂದು ಕ್ಷಣ ಹುಬ್ಬೇರಿಸುವುದಂತೂ ಖಚಿತ.‘ಈ ವಿಡಿಯೋವನ್ನು bebeginsayfasi ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಮತ್ತು 13 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. 7 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್​ ಮಾಡಿದ್ದಾರೆ. 1900ರಲ್ಲಿ ದಂತವೈದ್ಯಶಾಸ್ತ್ರ ಅನ್ವೇಷಣೆ ಆಯಿತು. 1899ರಲ್ಲಿದ್ದ ಜನರು ಹಲ್ಲು ಕೀಳಲು ಈ ವಿಧಾನ ಬಳಸುತ್ತಿದ್ದರು ಎಂದು ನೆಟ್ಟಿಗನೊಬ್ಬರ ಹಾಸ್ಯಚಟಾಕಿ ಹಾರಿಸಿದ್ದಾರೆ.

A post shared by Bebeğin Sayfası (@bebeginsayfasi)

ತುಂಬಾ ಒಳ್ಳೆಯ ದಂತವೈದ್ಯ, ಹಲ್ಲು ಕೀಳುವ ಗಿಳಿಯ ಕೌಶಲ್ಯ ಸೂಪರ್​, ಇದನ್ನು ಈಗಲೂ ಎಲ್ಲ ಕಡೆ ಜಾರಿಗೆ ತಂದರೆ ದಂತವೈದ್ಯರು ಒಂದು ಮೂಲೆಯಲ್ಲಿ ಕೂತು ಅಳಬೇಕಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಗಿಳಿಯ ಹಲ್ಲು ಕೀಳುವ ಸ್ಕಿಲ್​ ಅನ್ನು ಕೊಂಡಾಡುತ್ತಿದ್ದಾರೆ.(ಏಜೆನ್ಸೀಸ್​)
ಅವರೆಲ್ಲ ಇರೋದು ನಿನ್ನ ದೇಹ ನೋಡಲು ಮಾತ್ರ! ಸೀಮಾಗೆ ಗಂಡನ​ ಎಚ್ಚರಿಕೆ, ಸಚಿನ್​ ಕಣ್ಣು ಕೀಳುವುದಾಗಿ ಬೆದರಿಕೆ

ಲೋಕ ಸಮರ ಗೆಲ್ಲಲು ‘ಕೈ’ ರಣತಂತ್ರ! ಎಚ್​ಡಿ. ದೇವೇಗೌಡರಿಗೆ ಟಕ್ಕರ್ ಕೊಡಲು ರಿವರ್ಸ್ ಆಪರೇಷನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
