ಹೈದರಾಬಾದ್​:ಕೆಲವೊಮ್ಮೆ ಆಗಸದಲ್ಲಿ ಭಾರತ ಹಾಗೂ ಕರ್ನಾಟಕ ಭೂಪಟ ಮಾದರಿಯ ಮೋಡಗಳ ಚಿತ್ತಾರ ನೋಡಿ ಅಚ್ಚರಿಪಟ್ಟಿದ್ದೇವೆ. ಗಣಪತಿ, ಕೃಷ್ಣನ ಆಕಾರವೂ ಕಂಡಿದ್ದುಂಟು. ಇವು ಅಚ್ಚರಿಯೆನಿಸಿದರು ಖುಷಿ ಸಂಗತಿಯೂ ಹೌದು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ಪ್ರಕೃತಿ ವಿಷ್ಮಯ ಬಹಳ ಸದ್ದು ಮಾಡುತ್ತಿದೆ. ತಿರುಪತಿ ವೆಂಕಟೇಶ್ವರ ಭಕ್ತರ ಪಾಲಿಗಂತೂ ಇದು ಖುಷಿಯ ವಿಚಾರವೇ ಸರಿ. ಅಸಂಖ್ಯಾತ ಭಕ್ತರ ಆರಾದ್ಯ ದೈವ ವೆಂಕಟೇಶ್ವರ ನೆಲೆಸಿರುವ ತಿರುಮಲ ಬೆಟ್ಟವು ಥೇಟ್​ ತಿರುಪತಿ ತಿಮ್ಮಪ್ಪನ ಮುಖದ ಮಾದರಿಯಲ್ಲೇ ಇರುವುದು ತುಂಬಾ ಅಚ್ಚರಿಗೊಳಿಸಿದೆ.
ವೆಂಕಟೇಶ್ವರ ಮಲಗಿರುವ ಭಂಗಿಯಲ್ಲಿರುವ ಒಂದು ಫೋಟೋ ಹಾಗೂ ತಿರುಮಲ ಬೆಟ್ಟದ ಮತ್ತೊಂದು ಫೋಟೋವನ್ನು ಒಟ್ಟಿಗೆ ಸೇರಿಸಿ ಎರಡು ಸಾಮ್ಯತೆಯನ್ನು ಭಕ್ತರೊಬ್ಬರು ಗುರುತಿಸಿದ್ದಾರೆ. ಈ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!
ಇನ್ನು ಈ ಫೋಟೋ ಹೊಸದೇನಲ್ಲ. ಈ ಹಿಂದೆಯೇ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಇದೀಗ ಮತ್ತೊಮ್ಮೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರಘು ಹೆಸರಿನ ಟ್ವಿಟರ್​ ಬಳಕೆದಾರರು ನಿನ್ನೆಯಷ್ಟೇ ಶೇರ್​ ಮಾಡಿಕೊಂಡಿದ್ದು, ಭಗವಾನ್​ ವಿಷ್ಣು, ದೈವ ಸ್ವರೂಪ ತಿರುಮಲ ಬೆಟ್ಟದ ರೂಪದಲ್ಲಿದ್ದಾನೆ. ನಿಜಕ್ಕೂ ಇದನ್ನು ನಂಬಲಾಗುತ್ತಿಲ್ಲ ಎಂದು ಅಡಿಬರಹ ಬರೆದುಕೊಂಡಿದ್ದಾರೆ.
OMG….Friends, look at these pics carefully.
The Divine Tirumala mountains in the form of Bhagwan Vishnu.!!
Really it is Unbeilable !!pic.twitter.com/8w0dqooNhN
— Raghu (@IndiaTales7)October 17, 2020

ಸದ್ಯ ಫೋಟೋ ಮತ್ತೆ ವೈರಲ್​ ಆಗಿದ್ದು, ಸಾವಿರಕ್ಕೂ ಹೆಚ್ಚು ರೀಟ್ವೀಟ್​, 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ನೂರಾರು ನೆಟ್ಟಿಗರು ಫೋಟೋ ಕುರಿತು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್​)
VIDEO| ಏನೀ ಪವಾಡ? ತನ್ನಷ್ಟಕ್ಕೆ ಆರಿ ಮತ್ತೆ ಬೆಳಗುವ ಶಿವಲಿಂಗ ಮೇಲಿನ ಮಣ್ಣಿನ ದೀಪ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + nineteen =
Remember me
