ನವದೆಹಲಿ:ಸಾಲದ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿ ಮುಂದೂಡಿಕೆ (ಮಾರಟೋರಿಯಂ) ಯೋಜನೆಯನ್ವಯದ ಚ್ರಕಬಡ್ಡಿ ಮನ್ನಾವನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಜಾರಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಜನಸಾಮಾನ್ಯರ ದೀಪಾವಳಿ ಸರ್ಕಾರದ ಕೈಯಲ್ಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅಷ್ಟುಹೊತ್ತಿಗೆ ಯೋಜನೆ ಜಾರಿಗೆ ತನ್ನಿ ಎಂದು ಪರೋಕ್ಷವಾಗಿ ಸೂಚಿಸಿದೆ.
ಚಕ್ರಬಡ್ಡಿ ಮನ್ನಾ ಲಾಭ ಜನತೆಗೆ ಸಿಗುವಂತಾಗಲು ಸ್ಪಷ್ಟವಾದ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್. ರೆಡ್ಡಿ ಮತ್ತು ಎಂ.ಆರ್. ಷಾ ಇದ್ದ ಪೀಠ ಅಭಿಪ್ರಾಯಪಟ್ಟಿತು. ನವೆಂಬರ್ 2ಕ್ಕೆ ಪ್ರಕರಣ ವಿಚಾರಣೆ ಮುಂದೂಡಿದ ಪೀಠ, ಅಷ್ಟರೊಳಗೆ ಸ್ಪಷ್ಟ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್-19 ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಜನರ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆರ್​ಬಿಐ ಮಾರ್ಚ್​ನಿಂದ ಆಗಸ್ಟ್​ವರೆಗೆ ಮಾರಟೋರಿಯಂ ಘೋಷಿಸಿತ್ತು. ಈ ಆರು ತಿಂಗಳ ಅವಧಿಯಲ್ಲಿ 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವುದಾಗಿ ಮತ್ತು ಇದರ ಲಾಭವನ್ನು ಮಾರಟೋರಿಯಂ ಆಯ್ಕೆ ಮಾಡಿಕೊಳ್ಳದ ಗ್ರಾಹಕರಿಗೂ ನೀಡುವುದಾಗಿ ಅ.5ರಂದು ಸಲ್ಲಿಸಿದ ಯೋಜನೆಯಲ್ಲಿ ತಿಳಿಸಿತ್ತು. ಇದಕ್ಕೆ ತೃಪ್ತಿ ವ್ಯಕ್ತಪಡಿಸದ ಸುಪ್ರೀಂಕೋರ್ಟ್, ಈ ಯೋಜನೆಯ ಪ್ರಯೋಜನ ನಿಜವಾಗಿಯೂ ಜನಸಾಮಾನ್ಯರವರೆಗೂ ತಲುಪುತ್ತದೆಯೇ ಎಂದು ಪ್ರಶ್ನಿಸಿತ್ತು ಮತ್ತು ಅರ್ಜಿದಾರರ ಅನೇಕ ಕಳವಳಗಳಿಗೆ ಯೋಜನೆಯಲ್ಲಿ ಸ್ಪಷ್ಟನೆ ಇಲ್ಲ ಎಂದು ಹೇಳಿ, ಪರಿಷ್ಕೃತ ಯೋಜನೆಯನ್ನು ಸಲ್ಲಿಸುವಂತೆ ಸೂಚಿಸಿತ್ತು.
ಜನ ಸಾಮಾನ್ಯರ ಸಂಕಟ ಕಡಿಮೆ ಮಾಡಲು ಸರ್ಕಾರವೇನೋ ಕ್ರಮ ಕೈಗೊಂಡಿದೆ. ಆದರೆ ಅಧಿಕಾರಿಗಳು ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲವಲ್ಲ
| ಸುಪ್ರೀಂಕೋರ್ಟ್ ನ್ಯಾಯಪೀಠ
2020ರ ಮಾರ್ಚ್ 1ರ ವೇಳೆಗೆ ಪಾವತಿ ತಪ್ಪದ (ಡಿಫಾಲ್ಟ್) ಸ್ಟಾ್ಯಂಡರ್ಡ್ ಸಾಲಗಳು ಮಾತ್ರವೇ ಆಗಸ್ಟ್​ನಲ್ಲಿ ಹೊರಡಿಸಿದ ಕರೊನಾ ಸಂಬಂಧಿತ ಸಾಲ ಪರಿಹಾರ ಯೋಜನೆಗೆ ಅರ್ಹವಾಗುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸ್ಪಷ್ಟಪಡಿಸಿದೆ.
ಕರೊನಾ ಸಂಕಟದ ಹಿನ್ನೆಲೆಯಲ್ಲಿ ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಮಾಡಬೇಕೆಂಬ ವಿವಿಧ ವಿಭಾಗಗಳ ಕೋರಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಸಲ್ಲಿಸಿರುವ ಅಫಿಡವಿಟ್ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಕಳೆದ ಮಾರ್ಚ್ 1ರ ವೇಳೆಗೆ ಸಾಲವು ಒಂದು ತಿಂಗಳಿಗಿಂತ ಹೆಚ್ಚು ಬಾಕಿಯಿದ್ದು, ಇದೇ ವೇಳೆಗೆ ನಿಯಮಿತ ವಾಗದಿದ್ದರೆ (ರೆಗ್ಯುಲರೈಸ್) ಕೋವಿಡ್-19 ಪರಿಹಾರ ಸೂತ್ರದನ್ವಯ ಅನರ್ಹವಾಗುವುದಿಲ್ಲ ಎಂದೂ ಸ್ಪಷ್ಟನೆಯಲ್ಲಿ ಆರ್​ಬಿಐ ವಿವರಿಸಿದೆ.
ಒಬ್ಬರೇ ಹಲವು ಬ್ಯಾಂಕ್​ಗಳಿಂದ ಸಾಲ ಪಡೆದಿದ್ದರೆ ಅಂಥವರ ಪ್ರಕರಣಗಳಲ್ಲಿ ಎಲ್ಲ ಸಾಲದಾತ ಸಂಸ್ಥೆಗಳು ಅಂತರ್-ಸಾಲ ಒಪ್ಪಂದವೊಂದಕ್ಕೆ ಬರಬೇಕಾಗುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್​ಬಿಎಫ್​ಸಿ) ಪಡೆದ ಕೃಷಿ ಸಾಲಗಳಿಗೆ ಕೂಡ ಈ ಯೋಜನೆ ಅನ್ವಯವಾಗುತ್ತದೆ. ಆದರೆ ಹೈನುಗಾರಿಕೆ, ಪಶು ಸಂಗೋಪನೆ, ಕುಕ್ಕುಟೋದ್ಯಮ, ಜೇನು ಸಾಕಣೆ ಮತ್ತು ರೇಷ್ಮೆ ಮುಂತಾದ ಸಂಬಂಧಿತ ಕ್ಷೇತ್ರಗಳಿಗೆ ಅನ್ವಯವಾಗದು ಎಂದು ಆರ್​ಬಿಐ ಹೇಳಿದೆ.
ದ್ರಾಕ್ಷಿ ತೋಟಕ್ಕಾಗಿ ಕೀಟನಾಶಕ ತರಲೆಂದು ಹೋದ ಎನ್​ಸಿಪಿ ಮುಖಂಡ ಕಾರಿನಲ್ಲೇ ಸಜೀವ ದಹನ

ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್​ಐಆರ್​ ದಾಖಲು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
