ಕೇರಳ:ಪ್ರಾಣಿಗಳು ಮನುಷ್ಯರನ್ನು ನಂಬಿದರೆ ಮನೆ ಮಕ್ಕಳಂತೆ ನಡೆದುಕೊಳ್ಳುತ್ತವೆ. ಹೀಗೆ ಇಲ್ಲೊಂದು ಶ್ವಾನ ತನ್ನ ಮಾಲೀಕನೊಂದಿಗೆ ಕೆಲಸಕ್ಕೆ ಸಹಕರಿಸುತ್ತಾ ಮನೆಯ ಹಸುವಿಗಾಗಿ ತೋಟದಿಂದ ಹುಲ್ಲು ತರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಕಿ ಎಂಬ ಈ ಹೆಸರಿನ ಕಪ್ಪು ಬಣ್ಣದ ಶ್ವಾನ ಮನೆ ಮಗನಂತೆ ಇದ್ದು ಮಾಲೀಕ ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಈ ಶ್ವಾನ ಇರುತ್ತದೆ. ಅಷ್ಟು ದೂರದಿಂದ ಹುಲ್ಲನ್ನು ಹೊತ್ತು ಮನೆಗೆ ಬರುತ್ತದೆ. ದೇವರನಾಡು ಕೇರಳದ ವೀಡಿಯೋ ಇದಾಗಿದೆ.
ಇದನ್ನೂ ಓದಿ:ವಿದ್ಯುತ್ ದರ ಏರಿಕೆ ವಿರೋಧಿಸಿ ಜೂನ್ 22ರಂದು ಕರ್ನಾಟಕ ಬಂದ್
ವಿಡಿಯೋದಲ್ಲಿ ಏನಿದೆ?:ಮಾಲೀಕರ ಜತೆಗೆ ತೋಟಕ್ಕೆ ಹೋಗಿದ್ದ ಶ್ವಾನ, ಹುಲ್ಲಿನ ಕಟ್ಟನ್ನು ಹಲ್ಲಿನಲ್ಲಿ ಕಚ್ಚಿಕೊಂಡು ತಂದು, ಅದನ್ನು ದನದ ಕೊಟ್ಟಿಗೆಯ ಮುಂದೆ ಹಾಕುತ್ತದೆ. ಕೊನೆಗೆ ತಮ್ಮ ಮುದ್ದಿನ ಶ್ವಾನಕ್ಕೆ ಮನೆ ಮಾಲೀಕ ಪ್ರೀತಿಯ ಮುತ್ತನ್ನು ನೀಡುವ ಭಾವನಾತ್ಮಕ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು.
A post shared by BhaskarVillas (@bhaskarvilla_s)
ಮಾಲೀಕನ ಈ ಪ್ರೀತಿಯ ಸಂಗಾತಿಗೆ ಮಾಲೀಕ ಮುತ್ತಿಟ್ಟು ಮುದ್ದಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಹುಲ್ಲಿನ ಭಾರವಾದ ಹೊರೆಯನ್ನು ಕಪ್ಪು ಬಣ್ಣದ ನಾಯಿ ಹೊತ್ತು ತರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ತೂಕ ಇಳಿಸಿಕೊಳ್ಳಲು ಉಪವಾಸವಿದ್ದು ಪ್ರಾಣ ಬಿಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
