ಮಧ್ಯಪ್ರದೇಶ:ಇಲ್ಲಿನ ಜಬಲ್‌ಪುರದ ಹಿನೊಟಾ ಗ್ರಾಮವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವಿನ ಹಣ್ಣಿನ ತೋಟಗಳನ್ನು ಹೊಂದಿದೆ. ಹಣ್ಣಿನ ಮೇಲೆ ಕಣ್ಣಿಟ್ಟ ಖದೀಮರು ರಾತ್ರಿಯ ಕಗ್ಗತ್ತಲೆಯಲ್ಲಿ ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವಿನ ಹಣ್ಣನ್ನು ಕದಿಯಲು ಪ್ರಯತ್ನಿಸಿದರು. ಇದೇ ವೇಳೆ ತೋಟಕ್ಕೆ ಕಾವಲು ಕಾಯುತ್ತಿದ್ದ ನಾಯಿಗಳು ಕಳ್ಳರನ್ನು ಅಟ್ಟಾಡಿಸಿವೆ.
ಇದಾದ ಬಳಿಕ ಕಳ್ಳರು ಗೋಣಿ ಚೀಲವನ್ನು ತೆಗೆದುಕೊಂಡು ಮಾವಿನ ಹಣ್ಣುಗಳನ್ನು ಕದಿಯಲು ಚಾಣಾಕ್ಷ ಉಪಾಯ ಮಾಡಿದರು. ಆದರೆ ಅವರ ಯಾವ ಕುತಂತ್ರವೂ ಫಲಿಸಲಿಲ್ಲ. ಪ್ರಾಣ ಉಳಿಸಿಕೊಳ್ಳಲು ಖದೀಮರು ಮಾವಿನ ಹಣ್ಣುಗಳಿದ್ದ ಗೋಣಿಚೀಲವನ್ನು ಇಟ್ಟು ಪರಾರಿಯಾಗಿದ್ದಾರೆ.
ಅಂದಹಾಗೆ ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಯನ್ನು ಜಪಾನ್‌ನ ಮಿಯಾಜಾಕಿಯಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಇದಕ್ಕೆ ಮಿಯಾಜಾಕಿ ಮಾವಿನ ಹಣ್ಣು ಎಂದು ಹೆಸರಿಡಲಾಗಿದೆ. ತನ್ನ ವಿಶಿಷ್ಟವಾದ ರುಚಿ, ಕೆನೆ ವಿನ್ಯಾಸ ಮತ್ತು ಗಾಢ ಬಣ್ಣಕ್ಕೆ ಹೆಸರುವಾಸಿಯಾಗಿರುವ ಮಿಯಾಜಾಕಿ ಮಾವಿನ ಹಣ್ಣುಗಳು ತುಂಬಾ ಅಪರೂಪವಾಗಿದ್ದು, ಪ್ರತಿ ಕೆಜಿಗೆ ಸುಮಾರು 3 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತದೆ.
ಈ ಘಟನೆಯ ನಂತರ ತೋಟದ ಮಾಲೀಕ ಸಂಕಲ್ಪ್ ಸಿಂಗ್ ಪರಿಹಾರ್ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಇದಕ್ಕಾಗಿ ತೋಟದ ಸುತ್ತ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇನ್ನು ರಾತ್ರಿ ವೇಳೆಯೂ ಕಳ್ಳರನ್ನು ಮೂರನೇ ಕಣ್ಣಿನಿಂದ ನಿಗಾ ಇಡಬಹುದಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಜಬಲ್ಪುರದಿಂದ 25 ಕಿಮೀ ದೂರದಲ್ಲಿರುವ ಚಾರ್ಗ್ವಾನ್ ರಸ್ತೆಯಲ್ಲಿರುವ ಹಿನೋಟಾ ಗ್ರಾಮದಲ್ಲಿ ಮಹಾಕಾಲ್ ಹೈಬ್ರಿಡ್ ಮಾವಿನ ತೋಟಗಳಿವೆ. ಈ ಹಣ್ಣುಗಳನ್ನು ವಿದೇಶಗಳಲ್ಲಿ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಾರೆ.
ಮಿಯಾಜಾಕಿ ಮಾವಿನ ಹಣ್ಣು ದುಬಾರಿಯಾಗಿರುವುದರಿಂದ ಕಳ್ಳತನ ಹೆಚ್ಚಾಗಿದೆ. ಈಗ ಸಿಸಿ ಕ್ಯಾಮೆರಾಗಳ ಜತೆಗೆ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ರಾತ್ರಿ ವೇಳೆ ಭದ್ರೆತೆಗಾಗಿ ನಾಯಿಗಳನ್ನು ಸಹ ತೋಟದಲ್ಲಿ ಬಿಡಲಾಗುತ್ತಿದೆ. ಒಂದು ವೇಳೆ ರಾತ್ರಿ ಕಳ್ಳರು ತೋಟಕ್ಕೆ ನುಗ್ಗಲು ಪ್ರಯತ್ನಿಸಿದರೆ, ಈ ನಾಯಿಗಳು ಕಳ್ಳರ ಮೇಲೆ ದಾಳಿ ಮಾಡುತ್ತವೆ.(ಏಜೆನ್ಸೀಸ್​)
ಟೀಮ್​ ಇಂಡಿಯಾ ಬೌಲಿಂಗ್​ ದಾಳಿಗೆ ತತ್ತರಿಸಿದ ಪಾಕಿಸ್ತಾನ! ರೋಹಿತ್​ ಪಡೆಗೆ ರೋಚಕ ಗೆಲುವು

ಸೋಲನ್ನು ಹೀಗೂ ಸಮರ್ಥಿಸಿಕೊಳ್ಳಬಹುದಾ? ಪಾಕ್​ನ ಮಾಜಿ ಕ್ಯಾಪ್ಟನ್​ಗೆ ಕ್ರಿಕೆಟ್​ ಫ್ಯಾನ್ಸ್​ ಛೀಮಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + three =
Remember me
