ನವದೆಹಲಿ: ಭಾರತೀಯ ಸೇನೆಯ ಉನ್ನತ ಹುದ್ದೆಗಳಿಗೂ ಮಹಿಳೆಯರನ್ನು ಪರಿಗಣಿಸಲು ಹಾಗೂ ಪರ್ಮನೆಂಟ್ ಕಮಿಷನ್ ಮೂಲಕ ದೀರ್ಘಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಪುರುಷರಂತೆ ಮಹಿಳೆಯರಿಗೂ ಸಮಾನ ಅವಕಾಶವಿರಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ನೀಡಿರುವ ಮಹತ್ವದ ತೀರ್ಪು ಎರಡು ಪ್ರಮುಖ ವಿದ್ಯಮಾನಗಳಿಗೆ ಕಾರಣವಾಗಲಿದೆ. ಮೊದಲನೆಯದು ಸೇನೆಯಲ್ಲಿ ಯುವತಿಯರ ಉದ್ಯೋಗಾವಕಾಶ ಹೆಚ್ಚಳ. ಎರಡನೆಯದು ಕೋರ್ಟ್ ತೀರ್ಪು ಜಾರಿಯ ಸವಾಲನ್ನು ಸೇನೆ ಎದುರಿಸಬೇಕಿದೆ.
ಉನ್ನತ ಹಾಗೂ ಕಠಿಣ ಕಾರ್ಯಭಾರಗಳ ಹುದ್ದೆಗಳ ನಿರ್ವಹಣೆಗೆ ಮಹಿಳಾ ಅಧಿಕಾರಿಗಳಿಗೆ ತರಬೇತಿ ನೀಡುವ ದೊಡ್ಡ ಹೊಣೆಯನ್ನು ಇದೀಗ ನಿಭಾಯಿಸಬೇಕಾಗಿದೆ. ಇದುವರೆಗೆ ಪುರುಷರಿಗಷ್ಟೆ ಸೀಮಿತವಾಗಿದ್ದ ಮಹತ್ವದ ಕಮಾಂಡಿಂಗ್ ಹುದ್ದೆಗಳಲ್ಲೂ ಮಹಿಳಾ ಅಧಿಕಾರಿಗಳಿಗೆ ಅವಕಾಶ ಲಭಿಸಲಿದ್ದು ಅದಕ್ಕಾಗಿ ಅವರನ್ನು ಸನ್ನದ್ಧಗೊಳಿಸುವ ಜವಾಬ್ದಾರಿ ಸೇನೆಯದ್ದಾಗಿದೆ.
13 ಲಕ್ಷ ಸಿಬ್ಬಂದಿ ಇರುವ ಭೂಸೇನೆಯಲ್ಲಿ ಸುಮಾರು 43,000 ಅಧಿಕಾರಿಗಳಿದ್ದಾರೆ. ಆದರೆ ಇದುವರೆಗೆ ಯಾವುದೇ ಮಹಿಳಾ ಅಧಿಕಾರಿಗೆ ಕಮಾಂಡಿಂಗ್ ಹುದ್ದೆಗೆ ತರಬೇತಿ ನೀಡಿಲ್ಲ. ಪುರುಷರಂತೆ ಮಹಿಳಾ ಅಧಿಕಾರಿಗಳು ಜೂನಿಯರ್ ಕಮಾಂಡ್ ಕೋರ್ಸ್ ಅಥವಾ ಇತರ ಕೆಲವು ತರಬೇತಿ ಪಡೆಯಬೇಕಿರಲಿಲ್ಲ. ಇನ್ನು ಮುಂದೆ ಯುವತಿಯರಿಗೂ ಈ ತರಬೇತಿ ನೀಡಿಕೆ ಅಗತ್ಯವಾಗಲಿದೆ.
600 ಮಹಿಳೆಯರಿಗೆ ಅವಕಾಶ
ಶಾರ್ಟ್ ಸರ್ವಿಸ್ ಕಮಿಷನ್ (ಎಸ್​ಎಸ್​ಸಿ) ಮೂಲಕ ನೇಮಕಗೊಂಡಿರುವ ಸುಮಾರು 600 ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ (ಪಿಸಿ) ಸೇರ್ಪಡೆಗೆ ತಕ್ಷಣಕ್ಕೆ ಅವಕಾಶ ಲಭ್ಯವಾಗಲಿದೆ.
ಗಡಿ ನಿಯೋಜನೆ
ಭೂಸೇನೆಯ ಯೋಧರನ್ನು ಬಹುತೇಕವಾಗಿ ಗಡಿಗಳು ಮತ್ತು ಉಗ್ರಗಾಮಿ ಚಟುವಟಿಕೆ ನಿಯಂತ್ರಣ ಕಾರ್ಯಗಳಿಗೆ ನಿಯೋಜಿಸಲಾಗುತ್ತದೆ. ಹೆಚ್ಚು ಅಪಾಯವಿಲ್ಲದ ಕ್ಷೇತ್ರ ಎಂಬುದು ಕಡಿಮೆ. ಹೀಗಾಗಿ ಈ ವಿಭಾಗಗಳಲ್ಲೂ ನೇಮಕಗೊಳ್ಳುವ ಪರ್ಮನೆಂಟ್ ಕಮಿಷನ್ ಮಹಿಳಾ ಅಧಿಕಾರಿಗಳ ಸಂಖ್ಯೆ ಜಾಸ್ತಿಯಾದರೆ ಈ ಸ್ಥಾನಕ್ಕೆ ಏರಲು ಪುರುಷ ಅಧಿಕಾರಿಗಳು ಬಹಳ ವರ್ಷ ಕಾಯಬೇಕಾಗಬಹುದು ಎಂಬ ಆತಂಕ ಸೇನೆಯನ್ನು ಕಾಡಲಿದೆ.
ತರಬೇತಿ ಅನಿವಾರ್ಯ
ಮಹಿಳಾ ಸಮಾನತೆ ಬಗ್ಗೆ ಸಶಸ್ತ್ರ ಪಡೆಗಳು ಇದುವರೆಗೆ ಬಾಯಿಮಾತಿನ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದವು. ಈಗ ಸವೋನ್ನತ ನ್ಯಾಯಾಲಯ ಈ ವಿಚಾರದಲ್ಲಿ ಸರ್ಕಾರಕ್ಕೆ ಚುರುಕು ಮುಟ್ಟಿಸಿರುವುದರಿಂದ ಕಮಾಂಡ್ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳನ್ನು ತರಬೇತುಗೊಳಿಸುವುದು ಅದಕ್ಕೆ ಅನಿವಾರ್ಯವಾಗಿದೆ. ಪದಾತಿ ದಳ, ಯಾಂತ್ರೀಕೃತ ಪದಾತಿ ದಳ, ತೋಪು ದಳ (ಆರ್ಟಿಲರಿ) ಮೊದಲಾದ ವಿಭಾಗಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗುತ್ತಿಲ್ಲ. ಸೇನೆಯ ಶೇಕಡಾ 70 ಭಾಗವನ್ನು ಈ ವಿಭಾಗಗಳೇ ಆವರಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
