ಬೆಂಗಳೂರು:ಅಯೋಧ್ಯೆಯಲ್ಲಿ ರಾಮಮಂದಿರವನ್ನು ಸ್ವಾಗತಿಸಲು ರಾಷ್ಟ್ರವು ಸಜ್ಜಾಗುತ್ತಿರುವಾಗ, ಸದ್ಗುರುಗಳು, ರಾಮಮಂದಿರವು ಹೇಗೆ ನಾಗರಿಕತೆಯ ಪುನಶ್ಚೇತನದ ಸಂಕೇತವಾಗಿದೆ ಎನ್ನುವ ಕುರಿತು ಮಾತನಾಡುತ್ತಾರೆ. “ರಾಮ ಮತ್ತು ರಾಮಾಯಣವು ಭಾರತೀಯ ಸಾಮಾಜಿಕ ಆದರ್ಶದ ಎಷ್ಟು ದೊಡ್ಡ ಭಾಗವಾಗಿದೆ ಎಂದರೆ, ಅದು ಹಾನಿಗೊಳಗಾದ ರಾಷ್ಟ್ರೀಯ ಉತ್ಸಾಹದ ಪುನರುತ್ಥಾನದಂತೆ” ಎಂದು ಹೇಳುತ್ತಾರೆ.
ಮುಂದುವರೆಯುತ್ತಾ ಸದ್ಗುರುಗಳು, “ರಾಮನ ಸಂಪೂರ್ಣ ಜೀವನ – ಅವನ ರಾಜ್ಯ ಮತ್ತು ಹೆಂಡತಿಯನ್ನು ಕಳೆದುಕೊಳ್ಳುವುದರಿಂದ ಹಿಡಿದು, ತದನಂತರ ಎದುರಾದ ಕಷ್ಟಗಳು, ಮತ್ತೆ ತನ್ನ ಹೆಂಡತಿಯನ್ನು ಬಿಟ್ಟುಕೊಡುವುದು ಮತ್ತು ಅವನ ಸ್ವಂತ ಮಕ್ಕಳನ್ನೇ ಬಹುತೇಕ ಕೊಲ್ಲಲು ಹೊರಟಿದ್ದ ಈ ಘಟನೆಗಳನ್ನು ನೋಡಿದರೆ, ಅವು ಒಂದು ಸರಣಿ ದುರಂತವಾಗಿ ಕಾಣುತ್ತವೆ. ಇಷ್ಟೆಲ್ಲದರ ನಡುವೆಯೂ ಸಮಚಿತ್ತದಿಂದ ಉಳಿಯುವ ಅವನ ಸಾಮರ್ಥ್ಯವು ಇಂದಿಗೂ ಅವನನ್ನು ಅಸಾಧಾರಣವಾಗಿಸಿದೆ” ಎಂದು ಹೇಳುತ್ತಾರೆ.
ಈಗಿನ ಕಾಲಕ್ಕೆ ರಾಮನ ಪ್ರಸ್ತುತತೆಯ ಬಗ್ಗೆ ಮಾತನಾಡುತ್ತಾ, “ಜನರು ರಾಮನನ್ನು ಆರಾಧಿಸುವುದು ಅವನ ಜೀವನದಲ್ಲಿನ ಯಶಸ್ಸನ್ನು ನೋಡಿ ಅಲ್ಲ, ಆದರೆ ಅವನು ಅತ್ಯಂತ ಕಷ್ಟಕರವಾದ ಕ್ಷಣಗಳನ್ನು ಸೊಗಸಾಗಿ ನಿಭಾಯಿಸಿದ ಕಾರಣಕ್ಕಾಗಿ” ಎಂದು ವಿವರಿಸುತ್ತಾರೆ. ಜನರ ಸ್ಥೈರ್ಯವನ್ನು ಶ್ಲಾಘಿಸುತ್ತಾ ಸದ್ಗುರುಗಳು, “ಜನರು 500 ವರ್ಷಗಳಿಂದ ರಾಮಮಂದಿರಕ್ಕಾಗಿ ಕಾಯುತ್ತಿದ್ದಾರೆ, ಆದ್ದರಿಂದ ದೇಶದಲ್ಲಿ ದೊಡ್ಡ ಉತ್ಸಾಹ ಮನೆಮಾಡಿದೆ. ಈ ಇಡೀ ಅಭಿಯಾನವನ್ನು ದೇಶದ ಸಾಮಾನ್ಯ ಜನರು ನಿರ್ವಹಿಸಿದ್ದಾರೆ. ಅವರ ಪುಟಿದೇಳುವ ಎತ್ಸಾಹ, ಅವರ ಉಲ್ಲಾಸ ಮತ್ತು ತಾಳ್ಮೆಯನ್ನು ನೋಡಿ.” ಎಂದರು
Ram has been an inspiration for generations through many Millennia. The saga of janmabhumi over five centuries Is a classic demonstration of Devotion and resilience of this sacred Civilization. -Sg#AyodhyaRamMandirpic.twitter.com/CrzKi97oCp
Rama is not worshiped because his life was perfect; what makes him a superstar is how he responded to given situations in the best possible way.#RamNavami#SadhguruQuotespic.twitter.com/ebEhyowPii
ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆಯ ಸಮಾರಂಭಕ್ಕೆ ಸದ್ಗುರುಗಳನ್ನು ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನಿಸಿದೆ. ಆದಾಗ್ಯೂ, ಅವರ ಪೂರ್ವ ಆಯೋಜಿತ ಕಾರ್ಯಕ್ರಮಗಳ ಕಾರಣದಿಂದಾಗಿ, ಅವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
#AyodhyaRamMandir– a Temple re-dedicated not to a particular Faith, but to all who aspire to rise to Divinity within themselves. A privilege to be invited to witness the resurrection of Rama in his birthplace. Best Wishes & Blessings. -Sg@ShriRamTeerthpic.twitter.com/pF3ts7av2h
ಎಲ್ಲ ನಾಯಕರು ರಾಮನಿಗಾಗಿ ಅನುಷ್ಠಾನ ಮಾಡಬೇಕು:ರಾಮನಿಗಾಗಿ 11-ದಿನಗಳ ಅನುಷ್ಠಾನ (ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣಗಳನ್ನೊಳಗೊಂಡ ಪ್ರಕ್ರಿಯೆಗಳು) ಮಾಡುತ್ತಿರುವ ಪ್ರಧಾನಿ ಮೋದಿಯವರ ನಿರ್ಧಾರದಿಂದ ಪ್ರಭಾವಿತರಾದ ಸದ್ಗುರುಗಳು, “ನಾಗರೀಕತೆಯ ಕಿರೀಟ ಪ್ರಾಯವಾದ ಭಾರತದ ಚುನಾಯಿತ ನಾಯಕರಾದ ನರೇಂದ್ರ ಮೋದಿಯವರು, ನ್ಯಾಯ ಮತ್ತು ಸ್ಥಿರತೆಯುಳ್ಳ ನಾಯಕನ ಪ್ರತಿರೂಪವೆಂದು ಪರಿಗಣಿಸಲ್ಪಡುವ ರಾಮನಿಗಾಗಿ ಅನುಷ್ಠಾನವನ್ನು ಮಾಡುತ್ತಿರುವುದು ತುಂಬಾ ಸಂತೋಷಕರ ವಿಷಯವಾಗಿದೆ. ಕೇವಲ ಒಬ್ಬ ನಾಯಕನಲ್ಲ, ಭಾರತದ ಎಲ್ಲಾ ನಾಯಕರು ಮತ್ತು ನಾಗರಿಕರು ನ್ಯಾಯಯುತ, ಸ್ಥಿರ ಮತ್ತು ಸಮೃದ್ಧ ಭಾರತವನ್ನು ರಚಿಸಲು ಅನುಷ್ಠಾನದಲ್ಲಿ ತೊಡಗಿಕೊಳ್ಳಬೇಕು. ಇದುವೇ ರಾಮರಾಜ್ಯ.” ಎಂದು ಹೇಳಿದರು.
It is very heartening to see that@narendramodi, the elected leader of Bharat, this great crucible of civilization, is doing anushthana upon Rama, who is held as the epitome of a just and stable leader. Not just one leader, but all leaders and citizens of Bharat should engage in…pic.twitter.com/YxkTgEqLgk
ರಾಮರಾಜ್ಯವು ಪ್ರಪಂಚದ ಭವಿಷ್ಯ:ಭಾರತದಲ್ಲಿ ರಾಮರಾಜ್ಯದ ಅಗತ್ಯವನ್ನು ವಿವರಿಸುತ್ತಾ ಸದ್ಗುರುಗಳು, “ರಾಮನು ಅತ್ಯುತ್ತಮ ರಾಜನೆಂದು ಪರಿಗಣಿಸಲ್ಪಟ್ಟ ಕಾರಣದಿಂದ ಅವನು ದೇವರ ಸ್ಥಾನಕ್ಕೆ ಏರಿದ” ಎಂದು ಒತ್ತಿಹೇಳುತ್ತಾರೆ. “ರಾಮನ ಆಡಳಿತವು ಅತ್ಯಂತ ಕರುಣೆಯಿಂದ ತುಂಬಿದ ನ್ಯಾಯಯುತವಾದ ಆಡಳಿತವಾಗಿತ್ತು. ಮತ್ತು ಅನೇಕ ವಿಧಗಳಲ್ಲಿ, ಈ 6,000 ವರ್ಷಗಳಲ್ಲಿ ಈ ನಾಗರಿಕತೆಯನ್ನು ನಿರ್ಮಿಸುವಲ್ಲಿ ರಾಮನ ಕಾಲ ಒಂದು ರೀತಿಯ ಆಧಾರ ಸ್ತಂಭವಾಗಿದೆ. ಅತ್ಯುತ್ತಮ ಆಡಳಿತ ಮತ್ತು ಸಂಪೂರ್ಣ ನ್ಯಾಯಯುತ ರಾಷ್ಟ್ರ ಎಂದರೆ ಅದು “ರಾಮ ರಾಜ್ಯ”. ಇಂದಿಗೂ ನಾವು ರಾಮರಾಜ್ಯ ಎಂದು ಮಾತನಾಡಿದಾಗ, ಅದು ಅತ್ಯಂತ ನ್ಯಾಯಯುತವಾದ ರಾಜ್ಯ ಎಂದರ್ಥ. ಶೋಷಣೆಯ ರಾಜ್ಯವಲ್ಲ, ದಬ್ಬಾಳಿಕೆಯ ರಾಜ್ಯವಲ್ಲ, ಮತ್ತು ನಾವು ಭಾರತವನ್ನು ನಿರ್ಮಿಸಬೇಕಿರುವುದು ಹೀಗೆಯೇ, ಅದಕ್ಕಾಗಿ ರಾಮ ಮುಖ್ಯ” ಎಂದು ಸದ್ಗುರುಗಳು ಮಾತು ಮುಗಿಸುತ್ತಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
