‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.
ಮದ್ರಾಸ್ ರೆಜಿಮೆಂಟ್​ನ19ನೇ ಬೆಟಾಲಿಯನ್ ಸಿಪಾಯಿಯಾಗಿ ನನ್ನನ್ನು ಸೇನಾಧಿಕಾರಿಗಳು ಪೂಂಚ್ ಸೆಕ್ಟರ್​ಗೆ ಪೋಸ್ಟಿಂಗ್ ಮಾಡಿ ಕೆಲ ತಿಂಗಳಷ್ಟೇ ಆಗಿತ್ತು. ಎಲ್​ಒಸಿ ಬಳಿ ನಮ್ಮ ಬೆಟಾಲಿಯನ್ ಕಾರ್ಯನಿರ್ವಹಿಸುತ್ತಿತ್ತು. ಅದೊಂದು ದಿನ ತಡರಾತ್ರಿ ಪೂಂಚ್ ಸೆಕ್ಟರ್​ನ ಎಲ್​ಒಸಿಯಿಂದ ನಮ್ಮ ಬೆಟಾಲಿಯನ್​ನ ನಾಲ್ವರು ಸೈನಿಕರು ರಜೆ ಮೇಲೆ ತೆರಳುವವರಿದ್ದರು. ಆ ನಾಲ್ವರು ಎಲ್​ಒಸಿಯಿಂದ ಬಂಕರ್​ಗೆ ಹೊರಟರು. ನಾವು ಸುಮಾರು 20 ಸಿಪಾಯಿಗಳು ಒಟ್ಟಿಗೆ ಬಂಕರ್​ನತ್ತ ಸಣ್ಣ ಬ್ಯಾಟರಿಯೊಂದಿಗೆ ಹೆಜ್ಜೆ ಹಾಕಿದೆವು.
ಇದನ್ನೂ ಓದಿ:ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು
ಅದು ಹೇಗೋ ಉಗ್ರರಿಗೆ ಸುಳಿವು ಸಿಕ್ಕಿತ್ತು. ಐದಡಿ ದೂರದ ಏನೂ ಕಾಣದ ಆ ಜಾಗದಲ್ಲಿ ನಮ್ಮ ಮೇಲೆ ಉಗ್ರರಿಂದ ಗುಂಡಿನ ದಾಳಿ ಆರಂಭವಾಯಿತು. ನಾವು ಅಂದಾಜಿನ ಮೇಲೆ ಗುಂಡು ಹಾರಿಸಿದೆವು. ಆದರೆ ಈ ಕಾಳಗದಲ್ಲಿ ನಮ್ಮ ಇಬ್ಬರು ಸೈನಿಕರನ್ನು ಸಾಯಿಸಿದ್ದ ಉಗ್ರರು ಅವರ ತಲೆ ಕತ್ತರಿಸಿದ್ದರು. ಆ ಪೈಕಿ ಕೊಡಗಿನ ಸೆಬಾಸ್ಟಿಯನ್ ಎಂಬುವರ ರುಂಡ ಕೊಂಡೊಯ್ದಿದ್ದರು. ಗಾಢ ಕತ್ತಲಿದ್ದ ಕಾರಣ ನಾವು ಅಸಹಾಯಕ ಸ್ಥಿತಿಯಲ್ಲಿದ್ದೆವು, ನಮ್ಮ ಪ್ರಾಣ ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದೊಂದು ಘಟನೆ ಇಂದಿಗೂ ನನ್ನ ಸೇನಾ ಜೀವನದ ಕಹಿ ಘಟನೆಯಾಗಿ ಉಳಿದಿದೆ. ಆದರೆ ನಾನೂ ಆಪರೇಷನ್ ವಿಜಯ್ನ ಭಾಗವಾಗಿದ್ದೆ ಎಂಬ ಹೆಮ್ಮೆ ಈಗಲೂ ನನ್ನ ಉತ್ಸಾಹ ಇಮ್ಮಡಿಸುತ್ತದೆ.
| ಎನ್.ಡಿ. ಕಿಶೋರ್ ಕುಮಾರ್ ನಿವೃತ್ತ ಸೈನಿಕ, ಭೈರಾಪುರ, ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ.
ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ನೋವು ಮರೆಸಿದ ‘ಕಾರ್ಗಿಲ್’ ಗೆಲುವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − 7 =
Remember me
