ನ್ಯೂಯಾರ್ಕ್​: ಮಾರಕ ಕರೊನಾ ವೈರಸ್​ ವಿಶ್ವವ್ಯಾಪಿ ಹರಡುತ್ತಿರುವುದರಿಂದ ಸಾರ್ವಜನಿಕರು ಭೀತಿಗೆ ಒಳಗಾಗಿದ್ದಾರೆ. ಅಮೆರಿಕಾದ ಸಿಯಾಟಲ್​ ಮೂಲದ ಮಹಿಳೆ ಎಲಿಜಬೆತ್​ ಎನ್ನುವವರು ವೈರಸ್​ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ.
ಅವರು ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವುದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.
ಫೆಬ್ರವರಿ ಕೊನೆಯ ವಾರದಲ್ಲಿ ಕರೊನಾ ವೈರಸ್ ಸೋಂಕಿಗೆ ಒಳಗಾದ ಅಮೆರಿಕಾ ಮೂಲದ ಮಹಿಳೆಯೊಬ್ಬರು ಸೋಂಕಿಗೆ ಸಂಬಂಧಿಸಿದ ಅನುಭವವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.ಈ ಪೋಸ್ಟ್​ ಈಗಾಗಲೇ 27 ಸಾವಿರಕ್ಕೂ ಅಧಿಕ ಬಾರಿ ಮರು ಹಂಚಿಕೆಯಾಗಿದೆ. ಅಲ್ಲದೆ 3,500 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಂಕು ಹೀಗೆ ಹರಡಿತು: ನನ್ನ ಮನೆಯ ಪಕ್ಕದಲ್ಲಿ ನಡೆದ ಸಣ್ಣ ಪಾರ್ಟಿ ವೇಳೆ ಈ ವೈರಸ್​ ನನಗೆ ಹರಡಿದೆ. ಈ ಪಾರ್ಟಿಯಲ್ಲಿ ಪಾಲ್ಗೊಂಡವರು ಕೆಮ್ಮುವುದು ಅಥವಾ ಸೀನುವುದು ಮಾಡುತ್ತಿರಲಿಲ್ಲ. ಹೀಗಿದ್ದರೂ ನನಗೆ ಸೋಂಕು ಹರಡಿತು.
ಪಾರ್ಟಿ ನಡೆದು ಮೂರು ದಿನಗಳ ನಂತರ ನನಗೆ ಜ್ವರ ಬಂದಿತು. ಇದೇ ಅವಧಿಯಲ್ಲಿ ಪಾರ್ಟಿಯಲ್ಲಿದ್ದ ಶೇ.40 ಮಂದಿಗೆ ಸೋಂಕು ಹರಡಿತ್ತು. ಎಲ್ಲರೂ ಜ್ವರದಿಂದ ಬಳಲುತ್ತಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡವರು 30ರಿಂದ 50 ವರ್ಷದ ವಯಸ್ಸಿನವರಾಗಿದ್ದರು. ಮೊದಲು ಜ್ವರ, ತಲೆ ನೋವು ಕಾಣಿಸಿಕೊಂಡಿತು. ಮೂರು ದಿನಗಳ ನಂತರ ಕೀಲು ನೋವು ಆರಂಭವಾಯಿತು. ಜ್ವರ ಕಾಣಿಸಿಕೊಂಡ ಮೊದಲ ರಾತ್ರಿ 103 ಡಿಗ್ರಿ ಇತ್ತು. ನಂತರ ಕಡಿಮೆಯಾಯಿತು. ಜ್ವರ ಬಿಟ್ಟ ನಂತರ ಉಸಿರಾಟದ ತೊಂದರೆ ಆರಂಭವಾಯಿತು. ಅಲ್ಲದೆ ಗಟ್ಟಲು ನೋವು ಕಾಣಿಸಿಕೊಂಡಿತು. ಕೆಲವರಲ್ಲಿ ಎದೆ ಬಿಗಿತ ಹಾಗೂ ಉಸಿರಾಟದ ಲಕ್ಷಣಗಳು ಕಾಣಿಸಿಕೊಂಡವು ಎಂದು ಎಲಿಜಬೆತ್​ ಬರೆದುಕೊಂಡಿದ್ದಾರೆ.ಸಿಯಾಟಲ್ ಫ್ಲೂ ಪರೀಕ್ಷೆ ಮೂಲಕ ನನಗೆ ಕರೊನಾ ಇರುವುದನ್ನು ವೈದ್ಯರು ಪತ್ತೆ ಮಾಡಿದರು. ಸತತವಾಗಿ ಔಷಧಿ ಪಡೆದ ಬಳಿಕ ಚೇತರಿಸಿಕೊಂಡಿದ್ದೇನೆ. ನನಗೆ ಜ್ವರ ಬಂದ ನಂತರ ಹೊರಗೆ ಹೋಗಲಿಲ್ಲ. ಇದರಿಂದ ನಾನು ಯಾರಿಗೂ ವೈರಸ್​ ಹರಡಿಲ್ಲ. ಕರೊನಾಗೆ ಭಯ ಭೀಳದೆ ಧೈರ್ಯವಾಗಿ ಎದುರಿಸಬೇಕು ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಬ್ರೇಕಿಂಗ್ ನ್ಯೂಸ್: ಕರೋನಾ ಸೋಂಕು ಹೈ ರಿಸ್ಕ್​ ವಿಚಾರ ಕಲಬುರಗಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ್ರು ಜಿಲ್ಲಾಧಿಕಾರಿ







ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + nineteen =
Remember me
