ನವದೆಹಲಿ:ಸಿಎಎ ವಿರುದ್ಧದ ಹೋರಾಟಗಾರರ ಮೇಲೆ ಗುಂಡು ಹಾರಿಸಿದ ಕಪಿಲ್​ ಗುಜ್ಜಾರ್​ನ ಕುಟುಂಬ, ಆತ ಗುಂಡು ಹಾರಿಸಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟಿದೆ. ಹೋರಾಟದಿಂದಾಗಿ ರಸ್ತೆಗಳಲ್ಲಿ ಸಂಚಾರ ನಿಲ್ಲಿಸಲಾಗಿದ್ದು, ಹೆಚ್ಚಿನ ದೂರ ಕ್ರಮಿಸಬೇಕಾದ ಕಾರಣ ಆತ ಗುಂಡು ಹಾರಿಸಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
25 ವರ್ಷದ ಕಪಿಲ್​ ಗುಜ್ಜಾರ್​ ದೆಹಲಿ ಮತ್ತು ಉತ್ತರ ಪ್ರದೇಶದ ಗಡಿ ಭಾಗದಲ್ಲಿರುವ ಡಲ್ಲುಪುರ ಗ್ರಾಮದಲ್ಲಿ ಹಾಲಿನ ಡೈರಿ ನಡೆಸುತ್ತಿದ್ದ ವ್ಯಕ್ತಿ. ವಿದ್ಯಾಭ್ಯಾಸ ಮಾಡುತ್ತಿದ್ದಾಗ ರಿಪೋರ್ಟರ್​ ಆಗಬೇಕೆಂಬ ಕನಸ್ಸಿತ್ತಾದರೂ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ತಂದೆಯ ಡೈರಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾನೆ. ಒಂದು ವರ್ಷದ ಮಗುವಿಗೆ ತಂದೆಯಾಗಿರುವ ಈತನಿಗೆ ಯಾವುದೇ ರೀತಿಯ ಧರ್ಮೀಯ ಭಾವನೆಯಾಗಲೀ ಅಥವಾ ದ್ವೇಷವಾಗಲೀ ಇಲ್ಲ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರತಿನಿತ್ಯ ಕಪಿಲ್​ ಶಾಹೀನ್​ ಬಾಗ್​ ಮಾರ್ಗವಾಗಿ ದಕ್ಷಿಣ ದೆಹಲಿಯ ಬಾದರ್ಪುರ್​ ಡೈರಿಗೆ ಹೋಗುತ್ತಿದ್ದ. ತನ್ನ ಮನೆಯಿಂದ 10 ಕಿ.ಮೀ. ದೂರದಲ್ಲಿ ಆ ಡೈರಿಯಿತ್ತು. ಆದರೆ ಒಂದು ತಿಂಗಳಿನಿಂದ ಶಾಹೀನ್​ ಬಾಗ್​​ನಲ್ಲಿ ಹೋರಾಟ ನಡೆಯುತ್ತಿದ್ದು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 35ಕಿ.ಮೀ ದೂರದ ಹಾದಿಯನ್ನು ಕ್ರಮಿಸಿಕೊಂಡು ಕಪಿಲ್​ ಮನೆಗೆ ಬರಬೇಕಾಗಿತ್ತು. ಇದೇ ಕಾರಣದಿಂದಾಗಿ ಬೇಸತ್ತು ಆತ ಗುಂಡು ಹಾರಿಸಿದ್ದಾನೆ. ಆದರೆ ಮನೆಯಿಂದ ಹೊರಡುವಾಗ ಆತನ ಕೈನಲ್ಲಿ ಪಿಸ್ತೂಲು ಇರಲಿಲ್ಲ. ಅವನು ಶಾಹೀನ್​ ಬಾಗ್​ಗೆ ಹೋಗುತ್ತಾನೆಂದು ಗೊತ್ತಾಗಿದ್ದರೆ ನಾವು ಅವನನ್ನು ಮನೆಯಿಂದ ಹೊರಗೆ ಹೋಗುವುದಕ್ಕೇ ಬಿಡುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಪಿಲ್​ ಒಬ್ಬ ಸರಳ ವ್ಯಕ್ತಿ ಎಂದು ತಿಳಿಸಿರುವ ಕುಟುಂಬಸ್ಥರು ಆತನಿಗೆ ಯಾರೋ ಪ್ರಚೋದನೆ ನೀಡಿ ಈ ಕೆಲಸವನ್ನು ಮಾಡಿಸಿದ್ದಾರೆ ಎಂದು ದೂರಿದ್ದಾರೆ. ಆತನಿಗೆ ಮುಸ್ಲಿಂ ಸ್ನೇಹಿತರೂ ಇದ್ದು, ಹಬ್ಬಗಳಲ್ಲಿ ಅವರು ತಮ್ಮ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದುದ್ದಾಗಿ ಅವರು ತಿಳಿಸಿದ್ದಾರೆ.
ಕಪಿಲ್​ 2010ರಲ್ಲಿ ಜಂಗ್​ಪುರ್​ಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಪಕ್ಷದಿಂದ ಚುನಾವಣೆಗೆ ನಿಂತು ಸೋತಿದ್ದ. ಮೊನ್ನೆ ಶಾಹೀನ್​ ಬಾಗ್​ನಲ್ಲಿ ಸಿಎಎ ವಿರುದ್ಧದ ಹೋರಾಟಕ್ಕೆ ನುಗ್ಗಿ, ಹೋರಾಟಗಾರರ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದ. ಆ ವೇಳೆ ಜೈ ಶ್ರೀ ರಾಮ್​ ಘೋಷಣೆ ಕೂಗಿದ ಆತ, ಭಾರತದಲ್ಲಿ ಹಿಂದೂಗಳನ್ನು ಬಿಟ್ಟು ಬೇರೆಯವರು ಇರುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದ. ಪೊಲೀಸರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದ್ದು ಸದ್ಯ ಕಪಿಲ್​ ಪೊಲೀಸರ ವಶದಲ್ಲಿದ್ದಾನೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
