ಮುಂಬೈ:ಇತ್ತೀಚೆಗೆ ಸ್ತನ ಕ್ಯಾನ್ಸರ್​ಗೆ ಒಳಗಾಗಿದ್ದ ನಟಿ ಛಾವಿ ಮಿತ್ತಲ್​ ಅದರ ಮುಂದಿನ ಭಾಗವಾಗಿ ತೆಗೆದುಕೊಂಡ ಚಿಕಿತ್ಸೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
20 ದಿನಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಛಾವಿ, ಮುಂದಿನ ಹಂತ ತಡೆಯಲು ರೇಡಿಯೋ ಥೆರಪಿ ಅನಿವಾರ್ಯವಾಗಿತ್ತು. ಈಗ ರೇಡಿಯೋಥೆರಪಿಯನ್ನು ಮಾಡಿಸಿಕೊಂಡು ತಮ್ಮ ಹೊಟ್ಟೆಯ ಮೇಲಿನ ಶಸ್ತ್ರ ಚಿಕಿತ್ಸೆಯ ಕಲೆಗಳನ್ನು ತೋರಿಸಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ತಾವು ಪಟ್ಟ ಕಷ್ಟದ ಬಗ್ಗೆ ವಿವರವಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಚೇತರಿಸಿಕೊಂಡಿರುವ ಅವರು ಶಸ್ತ್ರ ಚಿಕಿತ್ಸೆ ಕಲೆಗಳನ್ನು ತೋರಿಸಿ, ಅದರ ಅನುಭವವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ರೇಡಿಯೋಥೆರಪಿ ಮೊದಲ ದಿನವು ಯಂತ್ರ ಕೆಟ್ಟುಹೋಗಿತ್ತು. ಸರಿಪಡಿಸಿದ ಬಳಿಕ ಕರೆದರು. ನಾನು ಅನುಭವಿಸಿದ ನೋವೆಂದರೆ ಕೋಣೆ ತುಂಬಾ ತಂಪಾಗಿತ್ತು ಮತ್ತ ನಾನು ನಡುಗುತ್ತಿದೆ. ಅದನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸ್ತನ ಕ್ಯಾನ್ಸರ್​​ ರೋಗದಿಂದ ಚೇತರಿಕೆ ಕಾಣುತ್ತಿರುವ ಛಾವಿ ಮಿತ್ತಲ್​​​​, ದಿನನಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಚಿಕಿತ್ಸೆ ಜತೆಗೆ ಅಂಜದೇ ಇತರರಿಗೂ ಮಾದರಿಯಾಗಿದ್ದಾರೆ.(ಏಜೆನ್ಸೀಸ್​)
ಕುತುಬ್​​ಮಿನಾರ್​ ವಿವಾದ: ಇದು ಸ್ಮಾರಕ, ಪೂಜೆ ಮಾಡುವ ಹಾಗಿಲ್ಲವೆಂದ ಪುರಾತತ್ವ ಇಲಾಖೆ ನೀಡಿದ ಕಾರಣವೇ ಬೇರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 10 =
Remember me
