ನವದೆಹಲಿ:ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ.​ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಒಂದು ವಾರದ ನಂತರ ಕಾಂಗ್ರೆಸ್​ ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಹಾ ಶಿವರಾತ್ರಿ ಶುಭದಿನದಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಿಎಂಟಿಸಿ ಬಸ್‍ನಲ್ಲಿ ಶಂಕಿತ ಪ್ರಯಾಣ, ಎನ್‌ಐಎ ವಿಡಿಯೋ ಬಿಡುಗಡೆ
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್​ ನಾಯಕರಾದ ಕೆ.ಸಿ. ವೇಣುಗೋಪಾಲ್​, ಅಜಯ್​ ಮಾಕೇನ್​, ಪವನ್​ ಖೇರಾ ಪಟ್ಟಿಯನ್ನು ಬಿಡುಗಡೆ ಮಾಡಿದರು. ವಯನಾಡ್​ನಿಂದ ರಾಹುಲ್​ ಗಾಂಧಿ ಎರಡನೇ ಬಾರಿ ಸ್ಪರ್ಧಿಸಲಿದ್ದಾರೆ. ಹಾಗೂ ಅಲೆಪ್ಪಿ ಕ್ಷೇತ್ರದಿಂದ ಕೆ.ಸಿ. ವೇಣುಗೋಪಾಲ್​ ಅವರು ಸ್ಪರ್ಧಿಸಲಿದ್ದಾರೆ.
ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.
कांग्रेस अध्यक्ष श्री@khargeकी अध्यक्षता में आयोजित 'केंद्रीय चुनाव समिति' की बैठक में लोकसभा चुनाव, 2024 के लिए 39 लोकसभा सीटों पर कांग्रेस उम्मीदवारों के नाम घोषित किए गए।pic.twitter.com/jOQk3rycwG
— Congress (@INCIndia)March 8, 2024

ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ:ಕರ್ನಾಟಕದ 7 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸಲಾಗಿದೆ.
ವಿಜಯಪುರ:ಎಚ್​.ಆರ್.ಅಲಗೂರು
ಶಿವಮೊಗ್ಗ:ಗೀತಾ ಶಿವರಾಜ್​ಕುಮಾರ್​
ಹಾಸನ:ಶ್ರೇಯಸ್​ ಪಾಟೀಲ್
ತುಮಕೂರು:ಎಸ್​ಪಿ ಮುದ್ದಹನುಮೇಗೌಡ
ಬೆಂಗಳೂರು ಗ್ರಾಮಾಂತರ:ಡಿಕೆ ಸುರೇಶ್
ಹಾವೇರಿ:ಆನಂದ್​ಸ್ವಾಮಿ ಗಡ್ಡ ದೇವರಮಠ
ಮಂಡ್ಯ:ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಈ ಪಟ್ಟಿಯಲ್ಲಿ ತೆಲಂಗಾಣದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಜಹೀರಾಬಾದ್ ಕ್ಷೇತ್ರ- ಸುರೇಶ್ ಕುಮಾರ್ ಶೆಟ್ಕರ್, ಚೇವೆಲ್ಲಾ ಕ್ಷೇತ್ರ ಸುನೀತಾ ಮಹೇಂದರ್ ರೆಡ್ಡಿ, ನಲ್ಗೊಂಡ ಕ್ಷೇತ್ರ- ಕುಂದೂರು ರಘುವೀರ್, ಮಹಬೂಬಾಬಾದ್ ಕ್ಷೇತ್ರ (ಎಸ್‌ಟಿ )- ಪೋರಿಕ ಬಲರಾಮ್ ನಾಯಕ್​ಗೆ ಟಿಕೆಟ್​ ನೀಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಂಗಾಳದಿಂದ ಮೊಹಮ್ಮದ್ ಶಮಿ ಬಿಜೆಪಿ ಅಭ್ಯರ್ಥಿ? ಈ ಕ್ಷೇತ್ರದಿಂದ ಕಣಕ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
