|ರಮೇಶ ದೊಡ್ಡಪುರಬೆಂಗಳೂರು
ಭಾರತದಿಂದ ಬ್ರಿಟಿಷರನ್ನು ಓಡಿಸಲು ಹಾಗೂ ಜನರನ್ನು ಸ್ವಾವಲಂಬಿಯಾಗಿಸಲು ಗಾಂಧಿಜೀ ಕಂಡುಕೊಂಡ ಸೂತ್ರ ಖಾದಿ. ಅತ್ಯಂತ ಸರಳ ಹಾಗೂ ಭಾರತೀಯ ಜೀವನ ಪದ್ಧತಿಯ ಅವಿಭಾಜ್ಯ ಅಂಗವಾಗಿದ್ದ ಖಾದಿಯನ್ನೇ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿಸಿ ಜನಜಾಗೃತಿಯಲ್ಲಿ ತೊಡಗಿದ್ದರಿಂದ ಬಹುದೊಡ್ಡ ಕ್ರಾಂತಿಯೇ ಆಯಿತು. ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಗಳು, ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆ ಪೂರೈಸಬೇಕು ಎಂಬ ನೆಪದಲ್ಲಿ ರಾಸಾಯನಿಕಯುಕ್ತ ಹಾಗೂ ಪರಿಸರಸ್ನೇಹಿಯಲ್ಲದ ಬಟ್ಟೆಗಳ ಉತ್ಪಾದನೆ ಮಿತಿ ಮೀರಿದೆ. ಇತ್ತೀಚಿನ ದಶಕಗಳಲ್ಲಿ ಖಾದಿಗೆ ಮತ್ತೆ ಬೇಡಿಕೆ ಬಂದಿದ್ದು, ಖಾದಿ ಬ್ರಾ್ಯಂಡ್ ಮೌಲ್ಯ ಹೆಚ್ಚುತ್ತಿದೆ. ಇದೇ ವೇಳೆಯಲ್ಲಿ ಉದ್ಯೋಗ ನಷ್ಟದ ಮಾತೂ ಕೇಳಿಬರುತ್ತಿದೆ.
ಉತ್ಪಾದಕರಿಗೆ ತರಬೇತಿ:ಖಾದಿ ಹಾಗೂ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ತರಬೇತಿಗಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೇಂದ್ರ ಸರ್ಕಾರದ ಕೆವಿಐಸಿ ಅನೇಕ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ.ಕರ್ನಾಟಕ ಖಾದಿ ಬ್ರಾ್ಯಂಡಿಂಗ್ ಕುರಿತು ಟೇಲರ್​ಗಳಿಗೆ ತರಬೇತಿ, ಉದ್ಯಮ ಸ್ಥಾಪನೆಗೆ 10 ಲಕ್ಷ ರೂ.ವರೆಗೆ ಸಾಲ ಸೇರಿ ಅನೇಕ ಯೋಜನೆಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ಖಾದಿ ಭವನ, ನಂ.10, ಜಸ್ಮಾ ಭವನ ರಸ್ತೆ, ಬೆಂಗಳೂರು-52, ದೂ: 08022266852, 22643439,22643445, ಇಮೇಲ್:[email protected]ಸಂಪರ್ಕಿಸಬಹುದು. ಕೆವಿಐಸಿ ಇತ್ತೀಚೆ ಗಷ್ಟೆ ಹಸುವಿನ ಸಗಣಿಯಿಂದ ಖಾದಿ ಪ್ರಾಕೃತಿಕ ಪೇಂಟ್ ಪರಿಚಯಿಸಿದೆ. ಈ ಬಣ್ಣವು ಸಂಪೂರ್ಣ ನೈಸರ್ಗಿಕ, ರಾಸಾಯನಿಕರಹಿತ ಹಾಗೂ ಬ್ಯಾಕ್ಟೀರಿಯಾ ನಿರೋಧಕವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದು, ಬಣ್ಣದ ತಯಾರಿಕೆ ಹಾಗೂ ಮಾರುಕಟ್ಟೆ ಕುರಿತು ತರಬೇತಿ ಆಯೋಜಿಸಲಾಗಿದೆ. ಶುಲ್ಕವನ್ನು ಹೊಂದಿರುವ 5 ದಿನದ ತರಬೇತಿ ಕಾರ್ಯಕ್ರಮಗಳನ್ನು ರಾಜಸ್ಥಾನದ ಜೈಪುರದಲ್ಲಿರುವ ಕುಮಾರಪ್ಪ ನ್ಯಾಷನಲ್ ಹ್ಯಾಂಡ್​ವೆುೕಡ್ ಪೇಪರ್ ಇನ್​ಸ್ಟಿಟ್ಯೂಟ್​ನಲ್ಲಿ(ಕೆಎನ್​ಎಚ್​ಪಿಐ) ನೀಡಲಾಗುತ್ತಿದೆ. ಇದರ ಜತೆಗೆ ಇತರೆ ತರಬೇತಿಗಳೂ ಇದ್ದು, ಹೆಚ್ಚಿನ ಮಾಹಿತಿಗೆ ದೂ: 01412947819 ಹಾಗೂ ಇಮೇಲ್:[email protected]ಸಂಪರ್ಕಿಸಬಹುದು.
ಉದ್ಯೋಗ ನಷ್ಟ ಏಕೆ?:ಖಾದಿ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ಮಾರಾಟ ಎರಡೂ ಹೆಚ್ಚಾಗುತ್ತಿದೆ. ಆದರೆ ಉದ್ಯೋಗ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂಬ ಅಂಶ ಆತಂಕ ಮೂಡಿಸಿದೆ. 2015-16ರಿಂದ 2016-17 ಅವಧಿಯಲ್ಲಿ ಉತ್ಪಾದನೆ ಹಾಗೂ ಮಾರಾಟ ಕ್ರಮವಾಗಿ ಶೇ.31 ಹಾಗೂ ಶೇ.33 ಹೆಚ್ಚಳವಾಗಿದ್ದರೂ ಇದೇ ಅವಧಿಯಲ್ಲಿ ದೇಶದಲ್ಲಿ ಸುಮಾರು 7 ಲಕ್ಷ ಉದ್ಯೋಗ ನಷ್ಟವಾಗಿದೆ. 2015-16ರಲ್ಲಿ ಈ ಕ್ಷೇತ್ರದಲ್ಲಿ 11.6 ಲಕ್ಷ ಉದ್ಯೋಗವಿದ್ದದ್ದು 2016-17ರಲ್ಲಿ 4.6 ಲಕ್ಷಕ್ಕೆ ಕುಸಿದಿತ್ತು. 2020-21ರಲ್ಲಿ ಈ ಪ್ರಮಾಣ ಕೊಂಚ ಏರಿಕೆಯಾಗಿ 4.9 ಲಕ್ಷಕ್ಕೆ ಬಂದು ನಿಂತಿದೆ. ಕರ್ನಾಟಕದಲ್ಲಿ ಖಾದಿ ಕ್ಷೇತ್ರದಲ್ಲಿ 27,540 ಉದ್ಯೋಗವಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ತಿಳಿಸುತ್ತದೆ. ಕೇಂದ್ರ ಸರ್ಕಾರ ಹೊಸ ಮಾದರಿಯ ಚರಕಾಗಳನ್ನು ಪರಿಚಯಿಸಿದ್ದರಿಂದ ಹೆಚ್ಚು ಉತ್ಪಾದನೆಯಾಗುತ್ತಿದ್ದು, ಸಾಂಪ್ರದಾಯಿಕ ಚರಕಾ ಬಳಸುತ್ತಿದ್ದವರು ಉದ್ಯೋಗ ತೊರೆದಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಸ್ಪಷ್ಟತೆ ಇಲ್ಲ.
ಕಳೆದ 15-20 ವರ್ಷದಲ್ಲಿ ಖಾದಿಗೆ ವಿಶೇಷ ಮೆರುಗು ನೀಡುವ ಕಾರ್ಯ ನಡೆದಿದೆ. ಅನೇಕ ಫ್ಯಾಷನ್ ಡಿಸೈನರ್​ಗಳು ಖಾದಿಯಲ್ಲಿ ಅತ್ಯಾಧುನಿಕ ವಸ್ತ್ರಗಳನ್ನು ವಿನ್ಯಾಸ ಮಾಡಿ ಯುವಜನರಿಗೆ ತೊಡಿಸಿದ್ದರ ಪರಿಣಾಮ ಬ್ರಾ್ಯಂಡ್ ಮೌಲ್ಯ ಹೆಚ್ಚಿದೆ. ಸ್ವತಃ ವರ್ಣಮಯ ವಸ್ತ್ರಗಳನ್ನು ತೊಡುವ ಪ್ರಧಾನಿ ನರೇಂದ್ರ ಮೋದಿಯವರೇ ಖಾದಿ ವಸ್ತ್ರದ ಬ್ರಾ್ಯಂಡ್ ರಾಯಭಾರಿಯಾಗಿದ್ದಾರೆ. ರೇಡಿಯೋ ಮೂಲಕ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅನೇಕ ಬಾರಿ ಖಾದಿ ಕುರಿತು ಉಲ್ಲೇಖಿಸಿದ್ದಾರೆ. ಪ್ರತಿ ಬಾರಿ ಮೋದಿ ಕರೆ ನೀಡಿದಾಗಲೂ ದೇಶಾದ್ಯಂತ ಇರುವ ಖಾದಿ ಭಂಡಾರಗಳಲ್ಲಿ ಮಾರಾಟ ಹೆಚ್ಚಳವಾಗುತ್ತದೆ ಎಂಬುದನ್ನು ಮಾರಾಟಗಾರರು ಉಲ್ಲೇಖಿಸಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ(ಕೆವಿಐಸಿ) ಅಧ್ಯಕ್ಷರು ಕಳೆದ ವರ್ಷ ನೀಡಿದ ಮಾಹಿತಿಯಂತೆ ಐದಾರು ವರ್ಷಗಳಲ್ಲಿ ಉತ್ಪಾದನೆ ಶೇ.115 ಹೆಚ್ಚಳವಾಗಿದ್ದರೆ, ಮಾರಾಟ ಪ್ರಮಾಣ ಶೇ.178 ಏರಿಕೆ ಕಂಡಿದೆ. ಪ್ರತಿ ವರ್ಷ ಸರಾಸರಿ ಶೇ.30 ಪ್ರಮಾಣದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು ಏರಿಕೆ ಕಾಣುತ್ತಿವೆ. 2018-19ರಲ್ಲಿ ವಾರ್ಷಿಕ 3,215 ಕೋಟಿ ರೂ. ಇದ್ದ ಖಾದಿ ಉತ್ಪನ್ನಗಳ ವಹಿವಾಟು 2019-20ರಲ್ಲಿ ಶೇ.31 ಏರಿಕೆಯೊಂದಿಗೆ 4,211 ಕೋಟಿ ರೂ. ದಾಖಲಾಗಿದೆ. ಗ್ರಾಮೋದ್ಯೋಗ ಉತ್ಪನ್ನಗಳ ವಹಿವಾಟು 2018-19ರ 71,017 ಕೋಟಿ ರೂ.ನಿಂದ 2019-20ರಲ್ಲಿ 84,675 ಕೋಟಿ ರೂ. ಗೆ ಏರಿಕೆಯಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
