ಎಲಮೌ(ಜರ್ಮನಿ):ಯೂಕ್ರೇನ್ ವಿರುದ್ಧದ ಯುದ್ಧಕ್ಕೆ ಹಣದ ಮೂಲವಾಗಿರುವ ತೈಲ ಮಾರಾಟದ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ರಷ್ಯಾದ ಆರ್ಥಿಕತೆಯನ್ನು ನಾಶಪಡಿಸಲು ಇಲ್ಲಿ ನಡೆದ ಶ್ರೀಮಂತ ದೇಶಗಳ ಜಿ-7 ಕೂಟದ ಶೃಂಗ ಸಭೆ ಸಂಕಲ್ಪ ಮಾಡಿದೆ. ಯೂಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣ ಮುಂದುವರಿದಷ್ಟೂ ದಿನ ಅದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಶೃಂಗ ಸಭೆ ನಿರ್ಣಯಿಸಿದೆ. ಸಭೆಯ ಕೊನೆ ದಿನವಾದ ಮಂಗಳವಾರ ಹೊರಡಿಸಿದ ಅಂತಿಮ ಹೇಳಿಕೆ, ರಷ್ಯಾ ವಿರುದ್ಧ ತೀಕ್ಷ್ಣ ಹಾಗೂ ತಕ್ಷಣದಲ್ಲಿ ಪರಿಣಾಮ ಬೀರುವಂಥ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಸ್ಪಷ್ಟಪಡಿಸಿದೆ. ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುವ ತೈಲದ ಮೇಲೆ ಮಿತಿ ಹೇರಿಕೆ ಮುಂತಾದ ವಿವರವಾದ ಯೋಜನೆಯನ್ನು ಮುಂದಿನ ಕೆಲವು ದಿನಗಳಲ್ಲಿ ಸಿದ್ಧಪಡಿಸಲು ಶೃಂಗ ಸಭೆ ನಿರ್ಧರಿಸಿದೆ. ರಷ್ಯಾದಿಂದ ಚಿನ್ನ ಆಮದನ್ನು ನಿಷೇಧಿಸಲು ಕೂಡ ಜಿ-7 ಕೂಟದ ನಾಯಕರು ನಿರ್ಣಯಿಸಿದ್ದಾರೆ. ಕಪು್ಪ ಸಮುದ್ರದ ಮೂಲಕ ಸಾಗುವ ಧಾನ್ಯಗಳ ಹಡಗುಗಳಿಗೆ ರಷ್ಯಾ ಅಡ್ಡಿಪಡಿಸಿರುವುದರಿಂದ ಆಹಾರ ಕೊರತೆ ಎದುರಿಸುತ್ತಿರುವ ದೇಶಗಳಿಗೆ ನೆರವಾಗಲೂ ಅವರು ಮುಂದೆ ಬಂದಿದ್ದಾರೆ.
ಮೋದಿ ಕೊಡುಗೆ:ಜಿ-7 ಕೂಟದ ನಾಯಕರು ಹಾಗೂ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ದೇಶಗಳ ಪ್ರಮುಖರಿಗೆ ಪ್ರಧಾನಿ ನರೇಂದ್ರ ಮೋದಿ ಸ್ಮರಣಿಕೆಯನ್ನು ಕಾಣಿಕೆಯಾಗಿ ನೀಡಿದರು.
ಅಭಿವ್ಯಕ್ತಿ ರಕ್ಷಣೆಗೆ ಪಣ:ಜಿ-7 ಕೂಟದ ದೇಶಗಳು ಹಾಗೂ ಭಾರತ ಸಹಿತ ಅದರ ಐದು ಪಾಲುದಾರ ರಾಷ್ಟ್ರಗಳ ನಾಯಕರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಪಣ ತೊಟ್ಟಿದ್ದಾರೆ. ಮುಕ್ತ ಸಾರ್ವಜನಿಕ ಚರ್ಚೆ ಹಾಗೂ ಆನ್​ಲೈನ್ ಮತ್ತು ಆಫ್​ಲೈನ್ ಮಾಹಿತಿಗಳ ಮುಕ್ತ ವಿನಿಮಯಕ್ಕೆ, ನಾಗರಿಕ ಸಮಾಜದ ಸ್ವಾತಂತ್ರ್ಯ ಹಾಗೂ ವೈವಿಧ್ಯತೆಗೆ ತಾವು ಬದ್ಧವಾಗಿದ್ದೇವೆಂದು ಸೋಮವಾರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೈಡೆನ್​ಗೆ ರಷ್ಯಾ ನಿಷೇಧ:ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರ ಪತ್ನಿ ಹಾಗೂ ಪುತ್ರಿ ಸಹಿತ ಅಮೆರಿಕದ 25 ಜನರನ್ನು ರಷ್ಯಾ ನಿಷೇಧಿಸಿದೆ. ತನ್ನ ಮೇಲೆ ಅಮೆರಿಕದ ನಿರ್ಬಂಧಗಳು ದಿನಗಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ನಿಷೇಧಿತರ ಪಟ್ಟಿಯಲ್ಲಿ ಹಲವು ಸೆನೆಟರ್​ಗಳು ಸೇರಿದ್ದಾರೆ. ಹಲವು ವಿವಿಗಳ ಪ್ರೊಫೆಸರ್​ಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕೂಡ ನಿಷೇಧಿಸಲಾಗಿದೆ.
ಅಬುಧಾಬಿ:ಪ್ರಧಾನಿ ನರೇಂದ್ರ ಮೋದಿ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಅಧ್ಯಕ್ಷ ಶೇಕ್ ಮಹಮದ್ ಅವರನ್ನು ಮಂಗಳವಾರ ಭೇಟಿ ಮಾಡಿದರು. ಜರ್ಮನಿಯಲ್ಲಿ ನಡೆದ ಜಿ-7 ಕೂಟದ ಶೃಂಗ ಸಭೆಯಲ್ಲಿ ಭಾಗವಹಿಸಿದ ನಂತರ ಕೊಲ್ಲಿ ರಾಷ್ಟ್ರ ಯುಎಇಗೆ ಆಗಮಿಸಿದ ಮೋದಿಯವರನ್ನು ಅಬುಧಾಬಿ ಪ್ರೆಸಿಡೆನ್ಶಿಯಲ್ ಏರ್​ಪೋರ್ಟ್​​ನಲ್ಲಿ ಶೇಕ್ ಮಹಮದ್ ಮತ್ತು ರಾಜ ಕುಟುಂಬದ ಹಿರಿಯ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡರು. ದೇಶದ ಮಾಜಿ ಅಧ್ಯಕ್ಷ ಶೇಖ್ ಖಲೀಫಾರ ನಿಧನಕ್ಕೆ ಮೋದಿ ಸಂತಾಪ ವ್ಯಕ್ತಪಡಿಸಿದರು. 2004 ನವೆಂಬರ್​ನಿಂದ ಯುಎಇ ಅಧ್ಯಕ್ಷ ಹಾಗೂ ಆಡಳಿತಗಾರರಾಗಿದ್ದ ಖಲೀಫಾ ಮೇ 13ರಂದು ನಿಧನರಾಗಿದ್ದರು. ಖಲೀಫಾರ ಆಡಳಿತಾವಧಿಯಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ಉತ್ತಮ ವಾಗಿತ್ತು ಎಂದು ಮೋದಿ ಸ್ಮರಿಸಿದರು.
ವಾಣಿಜ್ಯ ಪಾಲುದಾರ:ಅಮೆರಿಕ ಮತ್ತು ಚೀನಾದ ನಂತರ ಭಾರತವು ಯುಎಇಯ ಮೂರನೇ ಅತಿ ದೊಡ್ಡ ರಫ್ತು ದೇಶವಾಗಿದೆ. 2020-21ರಲ್ಲಿ ಸುಮಾರು 16 ಬಿಲಿಯ ಡಾಲರ್ ಮೊತ್ತದ ರಫ್ತು ಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
