ನವದೆಹಲಿ: ಕರೊನಾ ಲಸಿಕೆಯಾಗಿರುವ ಕೋವಿಶೀಲ್ಡ್ನ ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆಯ ನಡುವಿನ ಅಂತರವನ್ನು ಸರ್ಕಾರ 12-16 ವಾರಕ್ಕೆ ಏರಿಸಿದೆ. ಈ ಮೊದಲು 6-8 ವಾರವಿದ್ದ ಅಂತರವನ್ನು ತಜ್ಞರ ಶಿಫಾರಸಿನ ಮೇರೆಗೆ ಹೆಚ್ಚಿಸಲಾಗಿದೆ.
ಅನೇಕ ರಾಷ್ಟ್ರಗಳಲ್ಲಿ ಕೋವಿಶೀಲ್ಡ್ ಬಳಕೆಯಲ್ಲಿದ್ದು, ಅಲ್ಲಿ ಡೋಸ್ ನಡುವಿನ ಅಂತರವನ್ನು 12-16 ವಾರಕ್ಕೆ ಇರಿಸಲಾಗಿದೆ. ಅದೇ ಹಿನ್ನೆಲೆಯಲ್ಲಿ ಭಾರತೀಯ ತಜ್ಞರೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಎರಡು ಕರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯೂ ನೀಡಲಾಗುತ್ತಿದ್ದು, ಅದರ ಡೋಸ್ ಅಂತರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಿರ್ಧಾರವಾಗಿರುವಂತೆ 4-6 ವಾರದ ಅಂತರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ಲಸಿಕೆಯನ್ನು 3-4 ತಿಂಗಳಿಗೆ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
