ನವದೆಹಲಿ:ಮದುವೆ ಸೀಸನ್ ನಡೆಯುತ್ತಿದೆ. ಆಗಾಗ್ಗೆ ಅತಿಥಿಗಳು ಮತ್ತು ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ವಧು ಮತ್ತು ವರನಿಗೆ ಉಡುಗೊರೆಗಳನ್ನು ನೀಡುತ್ತಾರೆ. ಕೆಲವರು ಆಭರಣ ಕೊಟ್ಟರೆ ಕೆಲವರು ಬಟ್ಟೆ ಕೊಡುತ್ತಾರೆ. ವಧು-ವರರ ಸ್ನೇಹಿತರು ತಮಾಷೆಯಾಗಿ ರೋಲಿಂಗ್ ಪಿನ್, ಬ್ರೂಮ್, ಡೈಪರ್ ಇತ್ಯಾದಿಗಳನ್ನು ನೀಡುವ ಇಂತಹ ಹಲವು ವೀಡಿಯೊಗಳು ವೈರಲ್ ಆಗಿವೆ. ಆದರೆ, ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಮೈದುನನು ತನ್ನ ಹೊಸ ಅತ್ತಿಗೆಗೆ ಉಡುಗೊರೆಯನ್ನು ನೀಡಿದ್ದಾನೆ. ಉಡುಗೊರೆ ನೋಡಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇದೇ ವೇಳೆ ಅತ್ತಿಗೆ ಹಾಗೂ ಕುಟುಂಬದವರ ಸಂಕಷ್ಟವೂ ಹೆಚ್ಚಿದೆ. ಮೈದುನನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗಿ ಮನೆಗೆ ಬಂದಿದ್ದ ಅತ್ತಿಗೆಗೆ ಮೈದುನನು ಉಡುಗೊರೆಯೊಂದನ್ನು ನೀಡಿದ್ದಾನೆ. ಹೌದು… ಮನೆಗೆ ಬಂದ ಅತ್ತಿಗೆಯನ್ನು ಸ್ವಾಗತಿಸುವಾಗ ಅಪಾಯಕಾರಿ ಆಯುಧವನ್ನು ಕೈಗಿದ್ದಾನೆ. ಅಷ್ಟೇ ಅಲ್ಲ, ಅತ್ತಿಗೆಗೆ ಪಿಸ್ತೂಲ್ ನೀಡುತ್ತಿರುವ ಚಿತ್ರವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಚಿತ್ರದಲ್ಲಿ ಮೈದುನ ಮತ್ತು ಅತ್ತಿಗೆ ನಗುತ್ತಿರುವುದನ್ನು ಕಾಣಬಹುದು.
ಈ ಪೋಸ್ಟ್​ ನೋಡಿದ ಪೊಲೀಸರು ಈತನ ಹಿಂದೆ ಬಿದ್ದಿದ್ದಾರೆ. ಇದು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣ. ಇದೀಗ ಇಡೀ ಕುಟುಂಬದ ಮೇಲೆ ಸಂಕಷ್ಟದ ಪರ್ವತ ಬಿದ್ದಿದೆ. ಯುವಕನ ಬಂಧನದಿಂದ ಸುಖ ಸಂಸಾರ ನಡೆದ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆಯ ನಂತರ ಇಡೀ ಕುಟುಂಬ ಸಂಕಷ್ಟದಲ್ಲಿದೆ. ಮದುವೆಯ ನಂತರ ಅತ್ತೆಯ ಮನೆಗೆ ಬಂದ ಹುಡುಗಿಯನ್ನು ಸಹ ಪೊಲೀಸರು ವಿಚಾರಣೆ ಮಾಡಬಹುದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವೈರಲ್ ಆಗುತ್ತಿರುವ ಫೋಟೋದ ಬಗೆಗೂ ತನಿಖೆ ನಡೆಸಲಾಗುತ್ತಿದೆ.

ವಜ್ರ, ಚಿನ್ನಾಭರಣ ಕಂಪನಿಯ ಐಪಿಒ: ರೂ. 55ರ ಗ್ರೇ ಮಾರುಕಟ್ಟೆಯಲ್ಲಿ ರೂ. 115 ; ಹೂಡಿಕೆದಾರರಿಗೆ ಬಂಪರ್​ ಲಾಭದ ನಿರೀಕ್ಷೆ

20 ಕ್ಷೇತ್ರಗಳ ಪೈಕಿ 8 ಹಾಲಿ ಸಂಸದರಿಗೆ ಟಿಕೆಟ್​ ಮಿಸ್​ ಆಗಿದ್ದೇಕೆ? ಯಾರ ಬದಲಿಗೆ ಯಾರು ಕಣಕ್ಕೆ?

5 ರೈಲ್ವೆ ಕಂಪನಿಗಳ ಷೇರುಗಳ ಬೆಲೆ ಒಂದೇ ದಿನದಲ್ಲಿ ಅಪಾರ ಕುಸಿತ: ಹೂಡಿಕೆದಾರರನ್ನು ನಿರಂತರವಾಗಿ ಶ್ರೀಮಂತಗೊಳಿಸಿದ ಸ್ಟಾಕ್​ಗಳಲ್ಲಿ​ ಏಕಾಏಕಿ ನಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
