ಹೈದರಾಬಾದ್​:ನನ್ನನ್ನು ಒಂದಷ್ಟು ಜನ ಅಪಹರಿಸಿದ್ದಾರೆ, ಅತ್ಯಾಚಾರವನ್ನೂ ಎಸಗಿದ್ದಾರೆ ಎಂದು ಸುಳ್ಳು ಹೇಳಿ ಕಥೆ ಕಟ್ಟಿದ್ದ ಯುವತಿ ಈಗಿಲ್ಲ. 19 ವರ್ಷದ ಈಕೆ ಫಾರ್ಮಸಿ ವಿದ್ಯಾರ್ಥಿನಿಯಾಗಿದ್ದು, ತನ್ನ ಅಪಹರಣ-ಅತ್ಯಾಚಾರವಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ಸುಳ್ಳು ಹೇಳಿದ್ದಳು. ಆದರೆ ಅದಾಗಿ ಎರಡೇ ವಾರಗಳಲ್ಲಿ ಅವಳು ಮೃತಪಟ್ಟಿದ್ದು, ಪ್ರಕರಣವೀಗ ಕುತೂಹಲ ಕೆರಳಿಸಿದೆ.
ಹೈದರಾಬಾದ್​ನ ಘಟಕೇಸರ್​ನ ಮಲ್ಕಜ್​ಗಿರಿ ಎಂಬಲ್ಲಿನ ನಿವಾಸಿ ತನ್ನ ಮನೆಯಲ್ಲೇ ಅಸ್ವಸ್ಥಗೊಂಡಿದ್ದು, ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬುಧವಾರ ಬೆಳಗ್ಗೆ ಮೃತಪಟ್ಟಿರುವ ಈಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈಕೆ ಯಾವುದೋ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರಬೇಕು ಎಂದು ಶಂಕಿಸಿರುವ ಪೊಲೀಸರು, ಆತ್ಮಹತ್ಯೆ ಬಗ್ಗೆ ಯಾವುದೇ ಡೆತ್​ನೋಟ್ ಇರಲಿಲ್ಲ. ಅಲ್ಲದೆ ಈಕೆ ಖಿನ್ನತೆಯಿಂದ ಬಳಲುತ್ತಿದ್ದುದಾಗಿ ಸಂಬಂಧಿಕರು ತಿಳಿಸಿದ್ದಾಗಿ ಹೇಳಿದ್ದಾರೆ. ಮಾನಸಿಕವಾಗಿ ನೊಂದಿದ್ದ ಈ ಯುವತಿ ಕಾಲೇಜಿಗೂ ಹೋಗುತ್ತಿರಲಿಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಇನ್ನು ಆಟೋ ಡ್ರೈವರ್​ ಮತ್ತವನ ಗೆಳೆಯರಿಂದ ಅಪಹರಣಕ್ಕೆ ಒಳಗಾಗಿದ್ದಳು ಎಂದು ಮನೆಯವರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ಫೆ. 10ರಂದು ಈಕೆಯನ್ನು ಹೈದರಾಬಾದ್ ಹೊರವಲಯದಲ್ಲಿ ರಕ್ಷಿಸಿದ್ದರು. ಅಲ್ಲದೆ ಗ್ಯಾಂಗ್ ರೇಪ್​ ನಡೆದಿದೆ ಎಂದು ಅದರ ಮರುದಿನ ಮತ್ತೊಂದು ದೂರು ದಾಖಲಾಗಿತ್ತು. ಆದರೆ ಆ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಹಾಗೆಲ್ಲ ನಡೆದ ಬಗ್ಗೆ ಯಾವ ಸುಳಿವೂ ಸಿಕ್ಕಿರಲಿಲ್ಲ. ಸಿಸಿಟಿವಿ ಕ್ಲಿಪ್ಪಿಂಗ್​ಗಳನ್ನು ಪರಿಶೀಲಿಸಿದಾಗ ದೂರಿಗೆ ಪೂರಕ ಎಂಬಂಥ ಯಾವುದೇ ದೃಶ್ಯಾವಳಿಗಳೂ ಕಂಡುಬಂದಿಲ್ಲ. ಅಲ್ಲದೆ ಇವಳೇ ಎರಡು ಆಟೋ ಬದಲಿಸಿ ಈಕೆಯನ್ನು ರಕ್ಷಿಸಲಾಗಿದ್ದ ಸ್ಥಳಕ್ಕೆ ತಲುಪಿರುವುದು ಸಿಸಿಟಿವಿ ಕ್ಲಿಪ್ಪಿಂಗ್​ನಲ್ಲಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಈಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾಗ, ಆಟೋಡ್ರೈವರ್ ಮತ್ತೆ ಕೆಲವರ ಮೇಲಿನ ಹಳೇದ್ವೇಷದಿಂದಾಗಿ ಈಕೆ ಸುಳ್ಳು ಹೇಳಿದ್ದು ತಿಳಿದುಬಂದಿತ್ತು.
ಈ ವಿಷಯ ಪೊಲೀಸರು, ಮಾಧ್ಯಮ ಹಾಗೂ ಸಂಬಂಧಿಕರಿಂದಾಗಿ ಎಲ್ಲೆಡೆ ಪ್ರಚಾರಗೊಂಡು ಅವಮಾನಕ್ಕೀಡಾದ ಯುವತಿ ಬೇಸತ್ತು ಹೀಗೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಅಲ್ಲದೆ ಅಪಹರಣ-ಅತ್ಯಾಚಾರ ಘಟನೆ ಬಳಿಕ ಆ ಬಗ್ಗೆ ಸಂಬಂಧಿಕರೆಲ್ಲ ತಮಾಷೆ ಮಾಡುತ್ತಿದ್ದುದು ಕೂಡ ಆತ್ಮಹತ್ಯೆಗೆ ಕಾರಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಂದಹಾಗೆ ಪ್ರಕರಣದ ತನಿಖೆ ನಡೆಯುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮದ್ವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ದೂರ ಮಾಡಿದ್ರಾ ಪೊಲೀಸರು?; ಈ ದಾಂಪತ್ಯದಲ್ಲೀಗ ‘ಚೈತನ್ಯ’ವೂ ಇಲ್ಲ, ‘ತೇಜಸ್ಸೂ’ ಇಲ್ಲ..!

ಮುಂದೆ ನಮಗೇನೇ ಆದರೂ ಮನೆಯವರೇ ಕಾರಣ; ವಿರೋಧದ ನಡುವೆ ಅಂತರ್ಜಾತಿ ವಿವಾಹವಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 3 =
Remember me
