ನವದೆಹಲಿ: ಉತ್ತರ ಪ್ರದೇಶದಲ್ಲಿ ಸೋನಾಭದ್ರ ಜಿಲ್ಲೆಯಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದ ಪ್ರಮಾಣ ಮತ್ತು ಅದರ ಮೌಲ್ಯದ ಬಗ್ಗೆ ಈಗ ಚರ್ಚೆಗಳು ಗರಿಗೆದರಿವೆ. ಸೋನಾಭದ್ರ ಜಿಲ್ಲೆಯ ಸೋನ್​ ಪಹಾಡಿ ಮತ್ತು ಹರ್ಡಿ ಗ್ರಾಮಗಳಲ್ಲಿ ತಲಾ ಒಂದು ನಿಕ್ಷೇಪಗಳಿದ್ದು, ಇಲ್ಲಿ ಅಂದಾಜು 3,350 ಟನ್​ ಚಿನ್ನದ ನಿಕ್ಷೇಪ ಇರುವುದಾಗಿ ಅಂದಾಜಿಸಲಾಗಿದೆ.
ಇದನ್ನೂ ಓದಿ:ಸೋನಾಭದ್ರ ಚಿನ್ನದ ನಿಕ್ಷೇಪದ ಕಾವಲಿಗೆ ಜಗತ್ತಿನಲ್ಲೇ ಅತಿ ಹೆಚ್ಚು ವಿಷ ಹೊಂದಿರುವ ಸರ್ಪಗಳಿವೆ!
ಉತ್ತರ ಪ್ರದೇಶ ಭೂಗರ್ಭಶಾಸ್ತ್ರ ನಿರ್ದೇಶನಾಲಯ ಮತ್ತು ಭಾರತದ ಗಣಿ ಮತ್ತು ಭೂಗರ್ಭಶಾಸ್ತ್ರ ಸರ್ವೇಕ್ಷಣಾಲಯದ ಅಧಿಕಾರಿಗಳು ಸತತ ಎರಡು ದಶಕಗಳ ಕಾಲದ ಬಹಳ ನೋವಿನ ಪರಿಶ್ರಮದ ಫಲವಾಗಿ ಈ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಇದನ್ನೂ ಓದಿ:ಸೋನಾಭದ್ರ ಆಯಿತು, ಲಲಿತಪುರದಲ್ಲೂ ಚಿನ್ನದ ನಿಕ್ಷೇಪವಿದೆಯಂತೆ!: ನೆಲಮಟ್ಟದಿಂದ ಒಂದು ಮೀಟರ್ ಆಳದಲ್ಲಿ ಲಭ್ಯವಿದೆಯಂತೆ ಚಿನ್ನ, ಪ್ಲಾಟಿನಂ!
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಸೋನ್ ಪಹಾಡಿಯಲ್ಲಿ 2,943.5 ಟನ್​ ಚಿನ್ನದ ನಿಕ್ಷೇಪ ವಿದ್ದರೆ, ಹರ್ಡಿ ಗಣಿಯಲ್ಲಿ 646.15 ಟನ್ ಚಿನ್ನದ ನಿಕ್ಷೇಪವಿದೆ. ಈ ಬೃಹತ್ ಚಿನ್ನದ ನಿಕ್ಷೇಪದ ಮೌಲ್ಯ ಮತ್ತು ಪ್ರಮಾಣ ಗಮನಿಸಿದರೆ ಇದು ಭಾರತದ ಮೀಸಲು ಚಿನ್ನದ ಪ್ರಮಾಣಕ್ಕಿಂತ ಕನಿಷ್ಠ 5-6 ಪಟ್ಟು ಹೆಚ್ಚು ಇದೆ. ಪ್ರಸ್ತುತ ಭಾರತದ ಮೀಸಲು ಚಿನ್ನ(ಗೋಲ್ಡ್ ರಿಸರ್ವ್) ಪ್ರಮಾಣ 626 ಟನ್ ಇದೆ. ಇದೇ ರೀತಿ ರೂಪಾಯಿಯಲ್ಲಿ ಈ ಎರಡೂ ನಿಕ್ಷೇಪಗಳ ಮೌಲ್ಯ ಅಂದಾಜಿಸುವುದಾದರೆ, 12 ಲಕ್ಷ ಕೋಟಿ ರೂಪಾಯಿ ಅಧಿಕ ಎನ್ನಲಾಗುತ್ತಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
