ನವದೆಹಲಿ:ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಕೇದಾರನಾಥದ ಗರ್ಭಗುಡಿಯ ಗೋಡೆಗೆ ಚಿನ್ನ ಲೇಪನ ಮಾಡುವ ಕೆಲಸ ಬುಧವಾರ ಮುಗಿದಿದೆ. ಚಳಿಗಾಲದ ಕಾರಣ ಈ ದೇವಾಲಯ ಗುರುವಾರದಿಂದ ಆರು ತಿಂಗಳ ಕಾಲ ಮುಚ್ಚಿರುತ್ತದೆ. ದೆಹಲಿಯಿಂದ ಗೌರಿಕುಂಡಕ್ಕೆ ತರಲಾಗಿದ್ದ 550 ಚಿನ್ನದ ತಗಡುಗಳನ್ನು 18 ಕುದುರೆಗಳ ಮೇಲೆ ಹೇರಿ ಕೇದಾರನಾಥಕ್ಕೆ ಸಾಗಿಸಲಾಗಿದ್ದು, 19 ಕಾರ್ವಿುಕರು ಈ ಚಿನ್ನದ ತಗಡುಗಳನ್ನು ಗೋಡೆಗೆ ಅಂಟಿಸುವ ಕಾರ್ಯ ಮಾಡಿದರು.
ಈ ಕಾರ್ಯವನ್ನು ರೂರ್ಕಿ ಐಐಟಿ ಮತ್ತು ಭಾರತೀಯ ಪುರಾತತ್ವ ಸರ್ವೆಕ್ಷಣಾಯ ಜಂಟಿಯಾಗಿ ನಡೆಸಿದವು. 2017ರಲ್ಲಿ ಗರ್ಭಗುಡಿಯ ಗೋಡೆಗೆ ಬೆಳ್ಳಿ ತಗಡನ್ನು ಅಳವಡಿಸಲಾಗಿತ್ತು. ಇದಕ್ಕಾಗಿ 230 ಕೆ.ಜಿ. ಬೆಳ್ಳಿ ಬಳಸಲಾಗಿತ್ತು. ಬೆಳ್ಳಿ ಲೇಪನಕ್ಕಿಂತ ಈಗ ಚಿನ್ನದ ಲೇಪನವು ಹೆಚ್ಚು ಭಾಗಗಳನ್ನು ಒಳಗೊಂಡಿದೆ. ಶಿವಲಿಂಗದ ನಾಲ್ಕೂ ಮೂಲೆಯಲ್ಲಿರುವ ಕಂಬಗಳು, ಗರ್ಭಗುಡಿಯ ಛಾವಣಿಯ ಒಳಭಾಗವೂ ಈಗ ಚಿನ್ನದಿಂದ ಲೇಪಿತವಾಗಿದೆ. ಈ ಕಾರ್ಯಕ್ಕೆ ಎಷ್ಟು ಚಿನ್ನ ಬೇಕಾಯಿತು ಅಥವಾ ಇದರ ಮೌಲ್ಯ ಎಷ್ಟು ಎಂಬುದನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.
ಹಿಮಾಲಯದ ತಪ್ಪಲಿನ ಕೇದಾರನಾಥ ಮತ್ತು ಯಮುನೋತ್ರಿ ಕ್ಷೇತ್ರಗಳ ಬಾಗಿಲನ್ನು ಗುರುವಾರ ಮುಚ್ಚಲಾಗಿದೆ. ಚಳಿಗಾಲದ ಕಾರಣ ಇನ್ನು ಆರು ತಿಂಗಳು ಇವು ಮುಚ್ಚಿರಲಿದ್ದು, ಅಕ್ಷಯ ತೃತೀಯದ ಹೊತ್ತಿಗೆ ಮತ್ತೆ ತೆರೆಯಲಿವೆ. ಗುರುವಾರ ಬೆಳಗ್ಗೆ 8.30ಕ್ಕೆ ವೇದ ಘೋಷದೊಂದಿಗೆ ದೇವಾಲಯದ ಬಾಗಿಲನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಕೇದಾರನಾಥ ದೇವಾಲಯದಲ್ಲಿ ಹಾಜರಿದ್ದರು. ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿಯ ಬಾಗಿಲನ್ನು ಮಧ್ಯಾಹ್ನ 12.09ಕ್ಕೆ ಮುಚ್ಚಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 14 =
Remember me
