ನವದೆಹಲಿ:ತೀವ್ರ ಅಸ್ವಸ್ಥಗೊಂಡಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಲಿಕ್ವಿಡ್ ಆಕ್ಸಿಜನ್​ಗೆ ಗರಿಷ್ಠ ಮಾರಾಟ ದರ ನಿಗದಿ ಮಾಡಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್​ಗಳ ಬೇಡಿಕೆ ಹೆಚ್ಚಾಗಿದೆ. ಕೆಲ ಏಜೆನ್ಸಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಉತ್ಪಾದಕರಿಗೆ ಪ್ರತಿ ಘನ ಲೀಟರ್​ಗೆ 15.22 ರೂಪಾಯಿಯನ್ನು ನಿಗದಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪ್ರತಿ ಘನ ಲೀಟರ್​ಗೆ 25.71 ರೂಪಾಯಿ ನಿಗದಿ ಮಾಡಲಾಗಿದೆ. ಈ ಬೆಲೆಯು ಆರು ತಿಂಗಳಿಗೆ ಅನ್ವಯವಾಗಲಿದೆ. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಬೆಲೆ ನಿಗದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.ಇದನ್ನೂ ಓದಿ:ಲೂಸ್​ ಸ್ವೀಟ್​ಗೂ ಟೈಟ್​ ರೂಲ್ಸ್​.. ಇದು ಸ್ವೀಟ್​ ಅಂಗಡಿಯವರಿಗೆ ಸಿಹಿ ಸುದ್ದಿನಾ?
ಶೇ. 82ಕ್ಕೇರಿದ ಗುಣಮುಖ ಪ್ರಮಾಣ:ದೇಶದಲ್ಲಿ ಶುಕ್ರವಾರ 93 ಸಾವಿರ ಜನರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 48.5 ಲಕ್ಷಕ್ಕೆ ಏರಿಕೆಯಾಗಿದೆ.
ಕರೊನಾ ಸೋಂಕಿಗೆ ಔಷಧ ಲಭ್ಯವಾಗುವುದರೊಳಗೆ ವಿಶ್ವದಲ್ಲಿ 20 ಲಕ್ಷದಷ್ಟು ಜನರು ಮೃತರಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂದಿನ ವರ್ಷದ ಅಂತ್ಯದೊಳಗೆ ಕರೊನಾ ಔಷಧ ಸಿದ್ಧವಿರುವ ಸಾಧ್ಯತೆಯಿದ್ದು, ಭಾರತ ಸರ್ಕಾರಕ್ಕೆ ಕನಿಷ್ಠ 80 ಸಾವಿರ ಕೋಟಿ ರೂ. ಔಷಧ ಖರೀದಿಗೆ ಬೇಕಾಗಲಿದೆ ಎಂದು ಸೆರಂ ಇನ್​ಸ್ಟಿಟ್ಯೂಟ್​ನ ಆದರ್ ಪೂನಾವಾಲಾ ಹೇಳಿದ್ದಾರೆ. ಔಷಧ ಸಂಗ್ರಹಣೆ, ವಿತರಣೆ ಬಗ್ಗೆ ಯೋಜನೆ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ ಎಂದಿದ್ದಾರೆ.
ಗಂಡ-ಹೆಂಡತಿ ಮತ್ತು ಗಾವಸ್ಕರ್ ಮಧ್ಯೆ ಕಂಗನಾ.. ಅನುಷ್ಕಾ ಅಂದು ಸುಮ್ಮನಿದ್ದರು ಎಂದ ರಣಾವತ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + thirteen =
Remember me
