ಈ ಕಣ್ಣಲ್ಲಿಇನ್ನೂ ಏನೇನು ನೋಡ್ಬೇಕೋ! ಎಂಬ ಡೈಲಾಗ್ ಈ ವಿಡಿಯೋ ನೋಡಿದ್ರೆ ಖಂಡಿತಾ ನೆನಪಾಗುತ್ತೆ. ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಎಲ್ಲರೂ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಹುಚ್ಚುಚ್ಚಾಗಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಒಬ್ಬರು ತಮ್ಮ ಅಡುಗೆ ಕೋಣೆಯನ್ನು ತೋರಿಸಿದರೆ, ಕೆಲವರು ತಮ್ಮ ಬಾತ್ರೂಮ್ ತೋರಿಸುತ್ತಾರೆ. ಅದೇ ರೀತಿ ಫ್ರಿಡ್ಜ್, ವಾಷಿಂಗ್​ ಮೆಶಿನ್​ ಸಹ ತೋರಿಸುತ್ತಾರೆ.
ಕೆಲವರಂತೂ ಟ್ಯಾಲೆಂಟ್ ಹೆಸರಿನಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್​ಪೋಸ್ ಮಾಡುತ್ತಿದ್ದಾರೆ. ಬೆಡ್​ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ನವವಿವಾಹಿತನೊಬ್ಬ, ಸಿಂಗರಿಸಿದ ತನ್ನ ಫಸ್ಟ್​ ನೈಟ್​ ಕೋಣೆಯಲ್ಲಿ ನಿಂತು, ಫೋನ್ ಹಿಡಿದು, ತನ್ನ ಪತ್ನಿಯನ್ನು ಕರೆದು ನೆಟ್ಟಿಗರಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್​ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ, ಹಾಯ್ ಫ್ರೆಂಡ್ಸ್ ಎಂದು ಮಾತು ಆರಂಭಿಸಿರುವ ನವವಿವಾಹಿತ, ಇಂದು ಫಸ್ಟ್ ನೈಟ್ ನಡೆಯಲಿದೆ. ಕೋಣೆಯನ್ನು ಹೂವಿನಿಂದ ಸುಂದರವಾಗಿ ಅಲಂಕರಿಸಲಾಗಿದೆ. ಇಲ್ಲಿ ನನ್ನ ಹೆಂಡತಿ ಇದ್ದಾಳೆ. ನಾವಿಬ್ಬರು ಇಂದು ಮದುವೆಯಾದೆವು ಎಂದು ಪತ್ನಿಯನ್ನು ಪರಿಚಯಿಸುತ್ತಾನೆ. ಇದೇ ಸಂದರ್ಭದಲ್ಲಿ ನೆಟ್ಟಿಗರಿಗೆ ಹಾಯ್​ ಎಂದು ಹೇಳಿ, ರಾತ್ರಿಯ ಅಲಂಕಾರ ಹೇಗಿದೆ ಎಂದು ಕೇಳುತ್ತಾನೆ. ಬಳಿಕ ತನ್ನ ಪತ್ನಿಗೆ ಲಿಪ್​ ಕಿಸ್ ನೀಡುತ್ತಾನೆ. ಇದಾದ ನಂತರ ತನ್ನ ಹೆಂಡತಿಯನ್ನು ಹತ್ತಿರಕ್ಕೆ ಎಳೆದುಕೊಂಡು ಕೆನ್ನೆಯನ್ನು ಸ್ಪರ್ಶಿಸುತ್ತಾನೆ. ಬಳಿಕ ಹೂವಿನಿಂದ ಅಲಂಕರಿಸಲ್ಪಟ್ಟ ಹಾಸಿಗೆಯನ್ನು ತೋರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.
Suhagraat Vlog 🥴
These vloggers have gone totally mad.
Wait for the blurred clip 😹pic.twitter.com/PMsiC5dS6U
— Sunanda Roy 👑 (@SaffronSunanda)July 5, 2024

ಇದೀಗ ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ನವದಂಪತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಎಲ್ಲಿಗೆ ಹೋಗುತ್ತಿದೆ ನಮ್ಮ ಸಂಸ್ಕೃತಿ? ವ್ಯೂವ್ಸ್​ಗೋಸ್ಕರ ಈ ಮಟ್ಟಕ್ಕೆ ಇಳಿಯುತ್ತಾರಾ ಎಂದೆಲ್ಲ ಕಾಮೆಂಟ್ ಮಾಡುವ ಮೂಲಕ ದಂಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್​)
ನನ್ನ ಮದುವೆ ವೇಳೆ ಆ ನಟ ಗಳಗಳನೆ ಅತ್ತಿದ್ದರು: ಸ್ವಾರಸ್ಯಕರ ಘಟನೆ ಬಿಚ್ಚಿಟ್ಟ ನಟಿ ಖುಷ್ಬೂ

ಮತ್ತೊಮ್ಮೆ ರೆಸ್ಟೋರಂಟ್​ನಿಂದ ತೂರಾಡುತ್ತ ಹೊರಬಂದ ಉರ್ಫಿ ಜಾವೇದ್..! ವೀಡಿಯೋ ವೈರಲ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
