ಹೈದರಾಬಾದ್​:ಇನ್ನೇನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ನಡೆಯಬೇಕಿದ್ದ ವಿವಾಹವೊಂದು ಗೊಂದಲದ ಗೂಡಾಗಿ ಕೊನೆಗೆ ವರ ಅದೇ ಮಂಟಪದಲ್ಲಿ ಬೇರೆ ಯುವತಿಯನ್ನು ವರಿಸಿದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯಲ್ಲಿ ನಡೆದಿದೆ.
ಮೆಹಬೂಬಬಾದ್​ನ ಮರಿಪಾದ ಮುನ್ಸಿಪಾಲಿಟಿ ಕೇಂದ್ರದ ಮದುವೆ ಮಂಟಪದಲ್ಲಿ ಗುರುವಾರ ಘಟನೆ ನಡೆದಿದೆ. ಮರಿಪಾದ ಮಂಡಲದ ಗುಂಡೆಪುಡಿ ನಿವಾಸಿ ಯಾಮಿನಿ ಕೃಷ್ಣಮೂರ್ತಿ ಹಾಗೂ ಕುರವಿ ಮಂಡಲದ ಕಂಪೆಲ್ಲಿ ನಿವಾಸಿ ರಾಜೇಶ್​ಗೂ ಹಿರಿಯರು ಮದು ನಿಶ್ಚಯಿಸಿದ್ದರು.
ಇದನ್ನೂ ಓದಿ:PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!
ನಿಶ್ಚಯದಂತೆಯೇ ಮದುವೆ ಮಂಟಪದಲ್ಲಿ ಗುರುವಾರ ವಿವಾಹ ಕಾರ್ಯಕ್ರಮ ಜರುಗುತ್ತಿತ್ತು. ಬಂಧುಬಳಗ, ಅತಿಥಿಗಳೆಲ್ಲರೂ ಭಾಗಿಯಾಗಿದ್ದರು. ಮಂಟಪದಲ್ಲಿ ವಧು-ವರ ಕುಳಿತಿರುವಾಗ, ಪುರೋಹಿತರು ಪೂಜೆ ಪುನಸ್ಕಾರಗಳನ್ನು ನಡೆಸಿ ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಎದ್ದು ನಿಂತ ವಧು ನನಗೆ ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಬಳಿಕ ಪೊಲೀಸ್​ ಸಹಾಯವಾಣಿ 100ಕ್ಕೆ ಕರೆ ಮಾಡಿ ತನ್ನ ವೃತ್ತಾಂತವನ್ನೆಲ್ಲ ವಿವರಿಸಿದ್ದಾಳೆ.
ವಧುವಿನ ಮಾತು ಕೇಳಿ ಮದುವೆ ಮಂಟಪಕ್ಕೆ ಓಡಿ ಬಂದ ಪೊಲೀಸರು ಆಕೆಯನ್ನು ಅಲ್ಲಿಂದ ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಂಪೆಲ್ಲಿ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದರಿಂದ ನನಗೂ ಹೇಳದೆ ಬಲವಂತವಾಗಿ ಮದುವೆ ಮಾಡಲು ಮುಂದಾದರು ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿ:ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?
ಇತ್ತ ವಧುವಿನ ದಿಢೀರ್​ ನಿರ್ಧಾರದಿಂದ ಒಂದು ಕ್ಷಣ ಶಾಕ್​ ಆದ ವರ ಹೆಚ್ಚು ತೆಲೆಕೆಡಿಸಿಕೊಳ್ಳದೆ ತನ್ನ ಸಂಬಂಧಿಕರಲ್ಲೇ ಓರ್ವ ಯುವತಿಯನ್ನು ಅದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ವಿವಾಹಕ್ಕೆ ಬಂದಿದ್ದ ಅತಿಥಿಗಳು ನವವಧು-ವರರಿಗೆ ಆಶೀರ್ವದಿಸಿದರು.(ಏಜೆನ್ಸೀಸ್​)
ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು​ ಶಾಕ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
