ಲಖನೌ:ಉತ್ತರ ಭಾರತೀಯರು ಮದುವೆ ಸಮಾರಂಭದಲ್ಲಿ ಸಂಭ್ರಮಾಚರಣೆಗಾಗಿ ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಆದರೆ ಇಂತಹ ಆಚರಣೆಗಳು ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ಕೊನೆಗೊಳ್ಳುತ್ತಿರುವುದು ದುರಂತವೇ ಸರಿ.  ಇದೀಗ ಇಂತಹದ್ದೇ ಘಟನೆ ನಡೆದಿದ್ದು, ಮದುವೆ ಸಂಭ್ರಮದಲ್ಲಿದ್ದವರಿಗೆ ಮದುಮಗನೇ ಶಾಕ್​​ ನೀಡಿದ್ದಾನೆ.
ಮದುವೆ ಸಂಭ್ರಮಾಚರಣೆಯಲ್ಲಿದ್ದ ವೇಳೆಯೇ ಮದುಮಗನಿಂದ ಅಪರಾಧ ಕೃತ್ಯ ನಡೆದುಹೋಗಿದೆ. ಸಂತೋಷಕ್ಕಾಗಿ ಹಾರಿಸಿದ ಗುಂಡು ಸೀದಾ ತನ್ನ ಸ್ನೇಹಿತ ಎದೆಗೆ ತಗುಲಿ ಆತ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶದ ಸೊನ್ಭದ್ರ ಜಿಲ್ಲೆಯಲ್ಲಿ ಬ್ರಹ್ಮಾ ನಗರದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು, ಮದುಮಗ ಮನೀಶ್​ ಮಧೇಶಿಯಾ ಸುತ್ತಲೂ ಸ್ನೇಹಿತರು ಸೇರಿದಂತೆ ಹಲವರು ನಿಂತಿದ್ದರು, ಇದೇ ವೇಳೆ ಖುಷಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಗುಂಡು ಅಲ್ಲೇ ನಿಂತಿದ್ದ ತನ್ನ ಸೈನಿಕ ಸ್ನೇಹಿತ ಬಾಬು ಲಾಲ್​ ಯಾದವ್​ನನ್ನು ತಗುಲಿದೆ. ದುರಂತ ಎಂದರೆ ಈ ಗನ್​ ಕೂಡ ಮೃತ ಯಾದವ್​​ನದ್ದಾಗಿದೆ.
दूल्हे ने की हर्ष फायरिंग, आर्मी के जवान की हुई मौत। यूपी के@sonbhadrapoliceराबर्ट्सगंज का#ViralVideo#earthquake#breastislife#fearwomen#Afghanistanpic.twitter.com/7laX9OUIqD
— RAHUL PANDEY (@BhokaalRahul)June 23, 2022

ಕೂಡಲೇ ಯಾದವ್​ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್​ ಅಧಿಕಾರಿ ಅಮರೇಂದ್ರ ಪ್ರತಾಪ್​ ಸಿಂಗ್​ ತಿಳಿಸಿದ್ದಾರೆ. ಇನ್ನು ವರನ ವಿರುದ್ಧ ದೂರು ಕೂಡ ದಾಖಲಾಗಿದೆ.
ಯಾವುದೇ ಸಭೆ ಸಮಾರಂಭಗಳಲ್ಲಿ ಈ ರೀತಿ ಬಂದೂಕು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಒಂದು ವೇಳೆ ಬಳಸಿದರೂ ಅನುಮತಿ ಪಡೆದಿರಬೇಕಿದೆ. ಇದು ಗೊತ್ತಿದ್ದರೂ ಪದೇ ಪದೇ ಇಂತಹ ಅಚಾತುರ್ಯ ಘಟನೆಗಳು ನಡೆಯುತ್ತಲೇ ಇದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
