ಚಿತ್ತೂರು:ಪೋಷಕರ ಬೈಗುಳ, ವಾಹನ ಕೊಡಿಸಲಿಲ್ಲ ಎಂಬ ಕಾರಣ, ಗಂಡ-ಹೆಂಡತಿ ನಡುವಿನ ಜಗಳ, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆ, ಪ್ರೇಮ ವೈಫಲ್ಯ, ಹೀಗೆ ಸಣ್ಣ-ಪುಟ್ಟ ಕಾರಣಕ್ಕೂ ಆತ್ಮಹತ್ಯೆ ಶರಣಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಇದನ್ನೂ ಓದಿ:ಮಾಡೆಲ್​ ದಿವ್ಯಾ ಪಹುಜಾ ಹತ್ಯೆಗೈದಿದ್ದ ಆರೋಪಿ ವಿಮಾನ ನಿಲ್ದಾಣದಲ್ಲಿ ಬಂಧನ
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ತನ್ನ ಪತಿ ಖರ್ಚಿಗೆ 50 ರೂಪಾಯಿ ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡಿರುವ ರಾಧಾ ಆತನ ಪತಿ ಅನಂತಕುಮಾರ್​ ಜೊತೆ ಚಿತ್ತೂರು ಜಿಲ್ಲೆ ಪೊನ್ನೆಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಪತಿ ಅನಂತ್​ ಕುಮಾರ್​ ಬಳಿ ತನ್ನ ಖರ್ಚಿಗೆ 50 ರೂಪಾಯಿ ಕೇಳಿದ್ದಾಳೆ. ಹಣ ನೀಡಲು ಪತಿ ನಿರಾಕರಿಸಿದ್ದಾನೆ. ಇದಕ್ಕೆ ಬೇಸರಗೊಂಡಿದ್ದ ರಾಧಾ ಮೊಬೈಲ್​ ಕ್ಲೀನಿಂಗ್​ ಆಯಿಲ್​ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಸ್ಥಳೀಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಸೆಲ್‌ಫೋನ್ ಕ್ಲೀನಿಂಗ್ ಆಯಿಲ್ ಕುಡಿದು ರಾಧಾ ತೀವ್ರ ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಈ ಕುರಿತು ರಾಧಾ ಅವರ ತಂದೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್‌ಐ ತಿಳಿಸಿದ್ದಾರೆ.
BBKS10 ‘ನಮ್ರತಾ ನನಗೆ ಮೋಸ ಮಾಡಿಲ್ಲ’! ಈ ರೀತಿ ಮಾಡ್ಬೇಡಿ: ಸ್ನೇಹಿತ್ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 15 =
Remember me
