ನಾಗ್ಪುರ:ಕರೊನಾದಂತಹ ಸಂಕಷ್ಟ ಕಾಲದಲ್ಲಿ ಮನೆಯಿಂದ ಹೊರ ಹೋಗುವಾಗ ಮಾಸ್ಕ್​ ಧರಿಸಲೇಬೇಕಾದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸಲು ‘ಕುಚ್ ಕುಚ್ ಹೋತಾ ಹೈ’ ದೃಶ್ಯ ಬಳಸಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.
ಮಾಸ್ಕ್​ ಧರಿಸುವ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ದೇಶದಾದ್ಯಂತ ಪೊಲೀಸರು ಈಗಾಗಲೇ ವಿಭಿನ್ನ ಕಸರತ್ತು ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಾಗ್ಪುರ ಪೊಲೀಸ್​ ಇಲಾಖೆಯೂ ಮಾಸ್ಕ್​ ಕಡ್ಡಾಯ ಎಂದು ಜಾಗೃತಿ ಮೂಡಿಸಲು ಬಾಲಿವುಡ್​ನ ‘ಕುಚ್ ಕುಚ್​ ಹೋತಾ ಹೈ’ ಸಿನಿಮಾದ ದೃಶ್ಯ ಬಳಸಿಕೊಂಡಿದೆ.
ಇದನ್ನೂ ಓದಿರಿVIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!
ಅಂಜಲಿ (ಕಾಜೋಲ್) ಅವರನ್ನು ಎಡ ತೋಳಿನಲ್ಲಿ ಅಪ್ಪಿಕೊಳ್ಳುವ ರಾಹುಲ್ (ಶಾರುಖ್ ಖಾನ್), ಬಲಗೈಯಲ್ಲಿ ಟೀನಾ (ರಾಣಿ ಮುಖರ್ಜಿ) ಕೈ ಹಿಡಿದಿದ್ದಾರೆ. ಈ ದೃಶ್ಯವನ್ನು ತಿರುಚಿರುವ ನಾಗ್ಪುರ ಪೊಲೀಸರು, ಕರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊರಹೋಗಲು ಸಿದ್ಧರಿದ್ದಲ್ಲಿ (ಅಂಜಲಿ) ​ನೀವು (ರಾಹುಲ್​) ಮಾಸ್ಕ್​ ಧರಿಯೇ(ಟೀನಾ) ಹೋಗಬೇಕು… ಎಂದು ಆ ಪಾತ್ರಧಾರಿಗಳ ಚಿತ್ರದ ಮೇಲೆ ಟ್ಯಾಗ್​ಲೈನ್​ ಹಾಕಿ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.
‘Don’t let this bond break.. Kyunki, Bohot Kuch Hota Hai!’ ಎಂದು ಶೀರ್ಷಿಕೆ ಹಾಕಿ ಪೋಸ್ಟ್​ ಮಾಡಿರುವ ಚಿತ್ರವನ್ನು ಸಾವಿರಾರು ಮಂದಿ ಮೆಚ್ಚಿದ್ದಾರೆ. ‘ಈ ಬಂಧವನ್ನು ಮುರಿಯಬೇಡಿ…’ ಎಂದಿರುವ ಶೀರ್ಷಿಕೆ ಸ್ವಲ್ಪ ಹಾಸ್ಯಮಯ ಎನಿಸಿದರೂ ಮಾಸ್ಕ್​ನ ಪ್ರಾಮುಖ್ಯತೆಯನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಪೊಲೀಸರ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿರಿಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!
Don't let this bond break….Kyunki, Bohot Kuch Hota Hai!#WearAMask#NagpurPolicepic.twitter.com/fai9yIC4kZ
— Nagpur City Police (@NagpurPolice)May 27, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 12 =
Remember me
