ಬೀಜಿಂಗ್​:ಚೀನಾದಿಂದ ಭಾರತಕ್ಕೆ ಬರುವವರಿಗೆ ನೀಡುವ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಚೀನಾದ ಭಾರತ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ನೀಡಿರುವ ವೀಸಾಗಳ ಮಾನ್ಯತೆಯನ್ನು ಹಿಂಪಡೆದಿರುವುದಾಗಿ ತಿಳಿಸಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್​ ದಾಳಿಯ ಪ್ರಮಾಣ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ಈ ಸಮಯದಲ್ಲಿ ಚೀನಾದ ಮೂಲದವರಿಗೆ ಮತ್ತು ಚೀನಾದಲ್ಲಿ ಪ್ರಸ್ತುತ ವಾಸವಿರುವವರಿಗೆ ಭಾರತಕ್ಕೆ ಬರಲು ಇ-ವೀಸಾಗಳನ್ನು ನೀಡಲಾಗುವುದಿಲ್ಲ ಎಂದು ಚೀನಾದ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ಹಲವರಿಗೆ ಇ-ವೀಸಾ ವಿತರಣೆಯಾಗಿದ್ದು ಅವುಗಳ ಮಾನ್ಯತೆಯನ್ನು ತಾವು ಹಿಂಪಡೆದಿರುವುದಾಗಿ ಕಚೇರಿ ತಿಳಿಸಿದೆ. ಒಂದು ವೇಳೆ ಭಾರತಕ್ಕೆ ತೆರಳಲು ಬಲವಾದ ಕಾರಣಗಳೇನಾದರೂ ಇದ್ದರೆ, ಅಂತವರು ಬೀಜಿಂಗ್​ನಲ್ಲಿರುವ ರಾಯಭಾರಿ ಕಚೇರಿ ಅಥವಾ ಶಾಂಘೈ ಹಾಗೂ ಗುವಾಂಗ್​ನಲ್ಲಿರುವ ಭಾರತೀಯ ದೂತವಾಸಗಳನ್ನು ಅಥವಾ ಅಲ್ಲಿನ ವೀಸಾ ಅರ್ಜಿ ಕೇಂದ್ರಗಳನ್ನು ಸಂಪಕಿರ್ಸಬೇಕು ಎಂದು ತಿಳಿಸಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್​ಗೆ ಈಗಾಗಲೇ 304 ಜನರು ಮೃತರಾಗಿದ್ದು, 14,562ಕ್ಕೂ ಹೆಚ್ಚು ಜನರಲ್ಲಿ ವೈರಸ್​ ಇರುವುದಾಗಿ ತಿಳಿಸಲಾಗಿದೆ. ಭಾರತ, ಅಮೆರಿಕ ಸೇರಿದಂತೆ ಒಟ್ಟು 25 ದೇಶಗಳಲ್ಲಿ ಕೊರೊನ ವೈರಸ್​ ಇರುವುದು ಪತ್ತೆಯಾಗಿದೆ.(ಏಜೆನ್ಸೀಸ್​)
Advisory:
Due to certain current developments, travel to India on E-visas stands temporarily suspended with immediate effect. This applies to holders of Chinese passports and applicants of other nationalities residing in the People’s Republic of China.
— India in China (@EOIBeijing)February 2, 2020

Holders of already issued E-visas may note that these are no longer valid.All those who have a compelling reason to visit India may contact the Embassy of India in Beijing or the Indian consulates in Shanghai or Guangzhou,and the Indian Visa Application Centres in these cities.
— India in China (@EOIBeijing)February 2, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
